ಸಚಿವ ಜಾರಕಿಹೊಳಿ ಮತ್ತೊಮ್ಮೆ ದೆಹಲಿಯಲ್ಲಿ, ಯಾಕೆ ಬಂದಿದ್ದು ಅಂತ ಅವರೇ ಮಾಧ್ಯಮಗಳಿಗೆ ಹೇಳಿದರು
ಗ್ಯಾರಂಟಿ ಯೋಜನೆಗಳಿಗೆ ₹ 58,000 ಕೋಟಿ ಹಣವನ್ನು ಬದಿಗಿರಿಸಿದ್ದರಿಂದ ರಾಜ್ಯ ಸರ್ಕಾರ ಎಲ್ಲ ಪದಾರ್ಥಗಳ ಬೆಲೆಯೇರಿಕೆ ಮಾಡುತ್ತಿದೆ ಅನ್ನೋದನ್ನು ಜಾರಕಿಹೊಳಿ ಅಲ್ಲಗಳೆದರು. ಕೇಂದ್ರ ಸರ್ಕಾರ ಸಹ ಬೆಲೆಯೇರಿಕೆ ಮಾಡುತ್ತಿದೆ, ಬೆಲೆಯೇರಿಕೆ ಯಾಕೆ ಆಗುತ್ತದೆ ಅನ್ನೋದು ಬೇರೆ ವಿಚಾರ, ಚರ್ಚೆ ನಡೆಸಿ ಬೆಲೆಗಳನ್ನು ಕಡಿಮೆ ಮಾಡಬಹುದು, ಆದರೆ ಗ್ಯಾರಂಟಿ ಯೋಜನೆಗಳೊಂದಿಗೆ ಅದನ್ನು ಥಳುಕು ಹಾಕುವುದು ಸರಿಯಲ್ಲ ಎಂದು ಸಚಿವ ಹೇಳಿದರು.
ದೆಹಲಿ, ಏಪ್ರಿಲ್ 2: ಮೊನ್ನೆಯಷ್ಟೇ ದೆಹಲಿ ಪ್ರವಾಸಕ್ಕೆ ತೆರಳಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಜೊತೆ ಮಾತುಕತೆ ನಡೆಸಿ ಕುತೂಹಲ ಮೂಡಿಸಿದ್ದ ಸಚಿವ ಸತೀಶ್ ಜಾರಕಿಹೊಳಿ ಇವತ್ತು ಪುನಃ ರಾಷ್ಟ್ರದ ರಾಜಧಾನಿಯಲ್ಲಿದ್ದರು. ಕರ್ನಾಟಕ ನಾಯಕರ ಬಹು ನಿರೀಕ್ಷಿತ ನೂತನ ಕರ್ನಾಟಕ ಭವನದ ಉದ್ಘಾಟನಾ ಸಮಾರಂಭ ಇವತ್ತು ನಡೆಯಲಿದೆ, ಕಾರ್ಯಕ್ರಮದಲ್ಲಿ ಭಾಗಿಯಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯದ ಕೆಲ ಸಚಿವರು ಆಗಮಿಸಲಿದ್ದಾರೆ, ತಾನೂ ಸಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದಾಗಿ ಸತೀಶ್ ಜಾರಕಿಹೊಳಿ ಹೇಳಿದರು.
ಇದನ್ನೂ ಓದಿ: Maha Kumbh Mela 2025: ತ್ರಿವೇಣಿ ಸಂಗಮದಲ್ಲಿ ಮಿಂದವರು ಸತೀಶ್ ಜಾರಕಿಹೊಳಿ ಮುಂದಿನ ಮುಖ್ಯಮಂತ್ರಿ ಎಂದರು!
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ