ಕೊಪ್ಪಳ: ಸಿಂಧನೂರಿನ ಮುಸ್ಲಿಂ ಮಹಿಳೆಯರು ಅಂಜನಾದ್ರಿ ಬೆಟ್ಟ ಹತ್ತಿ ಹನುಮನ ದರ್ಶನ ಪಡೆದರು!
ಚಿಕ್ಕ ಮಕ್ಕಳೊಂದಿಗೆ ಆಗಮಿಸಿದ್ದ ಮಹಿಳೆಯರು 575 ಮೆಟ್ಟಿಲುಗಳನ್ನು ಹತ್ತಿ ಬೆಟ್ಟದ ಮೇಲಿರುವ ಹನುಮನ ದರ್ಶನ ಪಡೆದರು.
ಕೊಪ್ಪಳ ಭಾಗದಲ್ಲಿ ಮುಸ್ಲಿಂ ಸಮುದಾಯದ (Muslim community) ಕೆಲ ಜನ ಭಗವಾನ್ ಹನುಮಾನನೆಡೆ ನಿಷ್ಠೆ ಪ್ರದರ್ಶಿಸಿ ಭಾವೈಕ್ಯತೆಯ (religious harmony) ಪ್ರತೀಕವಾಗುತ್ತಿದ್ದಾರೆ. ಹಿಂದೆಯೂ ನಾವು ಕೆಲವು ಮುಸ್ಲಿಮರು ಹನುಮಾನ್ ಭಕ್ತರಾಗಿರುವ ಬಗ್ಗೆ ವರದಿ ಮಾಡಿದ್ದೆವು. ಮೊನ್ನೆಯಷ್ಟೇ ಮಹ್ಮದ್ ಜಾಫರ್ (Mohammad Jaffer) ಹೆಸರಿನ ವ್ಯಕ್ತಿ ಹನುಮ ಮಾಲೆ ಧರಿಸಿ ಇತರ ಭಕ್ತರೊಡನೆ ಹನುಮ ಜಪದಲ್ಲಿ ತೊಡಗಿದ್ದ ವಿಡಿಯೋವನ್ನು ತೋರಿಸಿದ್ದೆವು. ಶುಕ್ರವಾರದಂದು ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ಗಂಜಳ್ಳಿಯ ಕೆಲ ಮುಸ್ಲಿಂ ಮಹಿಳೆಯರು ಗಂಗಾವತಿ ಬಳಿಯಿರುವ ಅಂಜನಾದ್ರಿ ಬೆಟ್ಟಕ್ಕೆ ಬಂದು ಹನುಮನ ದರ್ಶನ ಪಡೆದಿದ್ದಾರೆ. ಚಿಕ್ಕ ಮಕ್ಕಳೊಂದಿಗೆ ಆಗಮಿಸಿದ್ದ ಮಹಿಳೆಯರು 575 ಮೆಟ್ಟಿಲುಗಳನ್ನು ಹತ್ತಿ ಬೆಟ್ಟದ ಮೇಲಿರುವ ಹನುಮನ ದರ್ಶನ ಪಡೆದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos