ನನ್ನ ಮಗಳು ವರ್ಷಿತಾಳ ಹಂತಕರನ್ನು ಗಲ್ಲಿಗೇರಿಸಬೇಕು: ಜ್ಯೋತಿ ತಿಪ್ಪೇಸ್ವಾಮಿ, ವರ್ಷಿತಾ ತಾಯಿ
ತನ್ನ ಮಗಳಿಗೆ ಬಂದ ಸ್ಥಿತಿ ಯಾರಿಗೂ ಬರೋದು ಬೇಡ, ಹರೆಯದ ಹೆಣ್ಣುಮಕ್ಕಳನ್ನು ಕಾಲೇಜು ಮತ್ತು ಹಾಸ್ಟೆಲ್ ಸಿಬ್ಬಂದಿ ಮುತುವರ್ಜಿಯಿಂದ ನೋಡಿಕೊಳ್ಳಬೇಕು ಎಂದು ಜ್ಯೋತಿ ಗೋಳಾಡುತ್ತಿದ್ದಾರೆ. ಹಾಸ್ಟೆಲ್ನಲ್ಲಿರುವ ಬೇರೆ ಯುವತಿಯರು ಜ್ಯೋತಿ ಅವರಿಗೆ ನೀಡಿರುವ ಮಾಹಿತಿ ಪ್ರಕಾರ ಚಿತ್ರದುರ್ಗ ಚೇತನ್ ಎನ್ನುವವನು ವರ್ಷಿತಾಳನ್ನು ಭೇಟಿಯಾಗಲು ಬಂದಿದ್ದನಂತೆ. ಆದರೆ ಕೊಲೆ ಕೇವಲ ಒಬ್ಬನಿಂದ ನಡೆದಿಲ್ಲ ಎಂದು ಹೇಳಲಾಗುತ್ತಿದೆ.
ಚಿತ್ರದುರ್ಗ, ಆಗಸ್ಟ್ 20: ಇದ್ದೊಬ್ಬಳೇ ಮಗಳನ್ನು ಕಳೆದುಕೊಂಡು ತಾಯಿ ಜ್ಯೋತಿ ತಿಪ್ಪೇಸ್ವಾಮಿ (Jyoti Tippe Swamy) ಅನುಭವಿಸುತ್ತಿರುವ ವೇದನೆ ಮತ್ತು ಯಾತನೆ ಅರ್ಥವಾಗುತ್ತದೆ. ದುರ್ಗದ ಕಾಲೇಜೊಂದರಲ್ಲಿ ಪ್ರಥಮ ವರ್ಷದ ಪದವಿ ಓದುತ್ತಿದ್ದ ಅವರ ಮಗಳು 19-ವರ್ಷದ ವರ್ಷಿತಾಳನ್ನು (Varshita) ಕೊಲೆ ಮಾಡಿರುವ ಕೆಲ ದುರುಳರು ಆಕೆಯ ಗುರುತು ಸಿಗದಿರಲೆಂದು ಬೆಂಕಿಹಚ್ಚಿ ಸುಡುವ ಪ್ರಯತ್ನ ಕೂಡ ಮಾಡಿದ್ದಾರೆ. ಮೊನ್ನೆ ರಾತ್ರಿ ಜ್ಯೋತಿ, ದುರ್ಗದ ಹಾಸ್ಟೆಲೊಂದರಲ್ಲಿದ್ದ ಮಗಳಿಗೆ ಫೋನ್ ಮಾಡಿದ್ದಾರೆ, ಆದರೆ ವರ್ಷಿತಾ ಅಮ್ಮ ಅಂತ ಮಾತ್ರ ಹೇಳಿದಳಂತೆ. ಗಾಬರಿಗೊಂಡು ಅವರು ನಗರಕ್ಕೆ ಬಂದು ಹಾಸ್ಟೆಲ್ ಹೋದಾಗ ಮಗಳು ಕಣ್ಮರೆಯಾಗಿರುವ ವಿಷಯ ಗೊತ್ತಾಗಿದೆ. ಮತ್ತಷ್ಟು ಆತಂಕಗೊಂಡ ಅವರು ಪೊಲೀಸ್ ದೂರು ದಾಖಲಿಸಿದಾಗ ವರ್ಷಿತಾ ಕೊಲೆಯಾಗಿದ್ದು ತಿಳಿದು ಬಂದಿದೆ. ಹಂತಕರನ್ನು ಗಲ್ಲಿಗೇರಿಸಬೇಕೆಂದು ಜ್ಯೋತಿ ಹೇಳುತ್ತಾರೆ.
ಇದನ್ನೂ ಓದಿ: ಪ್ರೇಯಸಿ ಒತ್ತಡಕ್ಕೆ ಪತ್ನಿಯನ್ನು ಕೊಲೆಗೈದ ಬಿಜೆಪಿ ನಾಯಕ ರೋಹಿತ್ ಸೈನಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ