ಐಷಾರಾಮಿ ಜೀವನದ ಹೊಸ ವಿಳಾಸ ಹೈದರಾಬಾದ್‌ನ ‘ಮೈ ಹೋಮ್ ವ್ಯೋಮ’: ಮೊದಲ ದಿನವೇ ಬುಕಿಂಗ್ಗಾಗಿ ಮುಗಿಬಿದ್ದ ಜನ!
ಹೈದರಾಬಾದ್‌ನ ನಾನಕ್ರಾಮ್ಗೂಡದಲ್ಲಿ ಮೈ ಹೋಮ್ ಗ್ರೂಪ್‌ನಿಂದ ಅತ್ಯಾಧುನಿಕ ಸೌಲಭ್ಯಗಳು ಮತ್ತು ಶೇ.83ರಷ್ಟು ಮುಕ್ತ ಹಸಿರು ಸ್ಥಳಾವಕಾಶದೊಂದಿಗೆ 'ಮೈ ಹೋಮ್ ವ್ಯೋಮ' ಐಷಾರಾಮಿ ವಸತಿ ಯೋಜನೆ ಆರಂಭಗೊಂಡಿದೆ. 50 ಮಹಡಿಗಳ ಈ ಭವ್ಯ ಯೋಜನೆಯಲ್ಲಿ 3 ಮತ್ತು 4 ಬೆಡ್‌ರೂಮ್‌ಗಳ ಅತ್ಯುತ್ತಮ ಫ್ಲ್ಯಾಟ್‌ಗಳು ಲಭ್ಯವಿದ್ದು, ಮೊದಲ ದಿನವೇ ಭರ್ಜರಿ ಬುಕಿಂಗ್ ದಾಖಲೆ ಸೃಷ್ಟಿಸಿದೆ.
ಹೈದರಾಬಾದ್: ವಸತಿ ನಿರ್ಮಾಣ ಕ್ಷೇತ್ರದಲ್ಲಿ ಪ್ರಮುಖ ಸ್ಥಾನದಲ್ಲಿರುವ ಮೈ ಹೋಮ್ ಗ್ರೂಪ್, ಹೈದರಾಬಾದ್‌ನಲ್ಲಿ ಮೈ ಹೋಮ್ ವ್ಯೋಮ ಹೆಸರಿನ ಮತ್ತೊಂದು ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಾರಂಭಿಸಿದೆ. ನಾನಕ್‌ರಾಮ್‌ಗೂಡದ ಸಿಟಿ ಸೆಂಟರ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಐಷಾರಾಮಿ ವಸತಿ ಯೋಜನೆಯು 12 ಬೃಹತ್ ಗೋಪುರಗಳನ್ನು ಒಳಗೊಂಡಿದೆ. 83 ಪ್ರತಿಶತ ಮುಕ್ತ ಸ್ಥಳ ಮತ್ತು ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಈ ಅಪಾರ್ಟ್‌ಮೆಂಟ್‌ಗಳು ತಲೆ ಎತ್ತುತ್ತಿವೆ. ಈ ಯೋಜನೆಗೆ ಈಗಾಗಲೇ ಬುಕಿಂಗ್ ಆರಂಭವಾಗಿದ್ದು, ಇಂದಿನ ಗ್ರ್ಯಾಂಡ್ ಲಾಂಚ್ ಬುಕಿಂಗ್‌ಗಳ ದಾಖಲೆಯನ್ನು ಮುರಿದಿದೆ.
ಮೊದಲ ದಿನವೇ ದಾಖಲೆಯ ಬುಕಿಂಗ್!
ಹೈದರಾಬಾದ್ ನಗರದ ವೇಗದ ಬೆಳವಣಿಗೆಗೆ ಪೂರಕವಾಗಿರುವ ಮೈ ಹೋಮ್ ವ್ಯೋಮ, ಆಧುನಿಕ ಮೂಲಸೌಕರ್ಯಗಳನ್ನು ಒಳಗೊಂಡಿದೆ. ಐಷಾರಾಮಿ ಅಪಾರ್ಟ್‌ಮೆಂಟ್‌ಗಳಲ್ಲಿ ಫ್ಲ್ಯಾಟ್ ಖರೀದಿಸಲು ಜನ ಮುಗಿಬಿದ್ದಿದ್ದಾರೆ. ಮೊದಲ ದಿನವೇ ಮೈ ಹೋಮ್ ಗ್ರೂಪ್ ಬುಕಿಂಗ್‌ಗಳಲ್ಲಿ ದಾಖಲೆ ಸೃಷ್ಟಿಸಿದ್ದು, ಸಂಸ್ಥೆಯ ವಕ್ತಾರರ ಪ್ರಕಾರ, ಇದು ಅದ್ಭುತ ಪ್ರತಿಕ್ರಿಯೆಯಾಗಿದೆ. ಅಕ್ಟೋಬರ್ ಮೊದಲ ವಾರದಲ್ಲಿ ಪ್ರಾರಂಭವಾದ ಪ್ರಕ್ರಿಯೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟವರ್ 1, 3, 5 ಮತ್ತು 6ರ ಫ್ಲ್ಯಾಟ್‌ಗಳು ಬಹುತೇಕ ಮಾರಾಟವಾಗಿವೆ. ಈ ಪ್ರತಿಕ್ರಿಯೆಯನ್ನು ಗಮನಿಸಿ, ಟವರ್ 4ರ ಮಾರಾಟವನ್ನು ಕೂಡ ಪ್ರಾರಂಭಿಸಲಾಗಿದ್ದು, ಇದರ ಬಗ್ಗೆ ಸಂಸ್ಥೆ ಸಂತೋಷ ವ್ಯಕ್ತಪಡಿಸಿದೆ. ಪ್ರೋತ್ಸಾಹಕರು, ಪಾಲುದಾರರು, ಗ್ರಾಹಕರು ಮತ್ತು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಹೇಳಿದೆ.
ಮೈ ಹೋಮ್ ವ್ಯೋಮ ಯೋಜನೆಯಲ್ಲೇನಿದೆ?
ಹೈದರಾಬಾದ್‌ನ ಹೃದಯ ಭಾಗದಲ್ಲಿರುವ ನಾನಕ್ರಾಮ್ಗೂಡ ಪ್ರದೇಶವು ಗಚ್ಚಿಬೌಲಿ ಸೇರಿದಂತೆ ನಗರದ ಪ್ರಮುಖ ಪ್ರದೇಶಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಮೈ ಹೋಮ್ ವ್ಯೋಮ ಯೋಜನೆಯು 22.34 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. 50 ಮಹಡಿಗಳ ಎತ್ತರವಿರುವ ಒಟ್ಟು 12 ಬೃಹತ್ ಅಪಾರ್ಟ್‌ಮೆಂಟ್‌ಗಳು ನಿರ್ಮಾಣಗೊಳ್ಳುತ್ತಿವೆ. ಇದರಲ್ಲಿ 859 ತ್ರಿಬಲ್ ಬೆಡ್‌ರೂಮ್‌ಗಳು ಮತ್ತು 1,501 ನಾಲ್ಕು ಬೆಡ್‌ರೂಮ್‌ಗಳು ಸೇರಿದಂತೆ ಒಟ್ಟು 2,360 ಫ್ಲ್ಯಾಟ್‌ಗಳು ಲಭ್ಯವಿರುತ್ತವೆ.
ಕ್ಲಬ್‌ಹೌಸ್, ಫಿಟ್ನೆಸ್ ಕೇಂದ್ರಗಳ ಜೊತೆ ಇನ್ನೂ ಏನೇನಿದೆ ಗೊತ್ತಾ?
ಒಂದು ಲಕ್ಷ ಚದುರಡಿಗಳಿಗೂ ಹೆಚ್ಚು ವಿಸ್ತೀರ್ಣದಲ್ಲಿ ಹರಡಿರುವ ಎರಡು ಕ್ಲಬ್‌ಹೌಸ್‌ಗಳ ಜೊತೆಗೆ, ಫಿಟ್ನೆಸ್ ಕೇಂದ್ರಗಳು, ಒಳಾಂಗಣ ಬ್ಯಾಡ್ಮಿಂಟನ್ ಕೋರ್ಟ್‌ಗಳು, ಯೋಗ ಮತ್ತು ಧ್ಯಾನಕ್ಕಾಗಿ ವಿಶೇಷ ಅಂಗಳ, ಮಕ್ಕಳ ಆಟದ ಮೈದಾನಗಳು, ಜಾಗಿಂಗ್ ಟ್ರ್ಯಾಕ್‌ಗಳಂತಹ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. 7 ಎಕರೆಗಳಷ್ಟು ದೊಡ್ಡದಾದ ಸೆಂಟ್ರಲ್ ಲ್ಯಾಂಡ್ಸ್ಕೇಪ್ ಉದ್ಯಾನವನ, ಸ್ಕ್ವಾಷ್ ಮತ್ತು ಎರಡು ಈಜುಕೊಳಗಳು ಸೇರಿದಂತೆ ಅನೇಕ ಸೌಲಭ್ಯಗಳನ್ನು ಇಲ್ಲಿ ಕಲ್ಪಿಸಲಾಗಿದೆ.
ಸಮೀಪದ ಪ್ರಮುಖ ಕೇಂದ್ರಗಳು
ಈ ಯೋಜನೆಯು ಫೈನಾನ್ಶಿಯಲ್ ಡಿಸ್ಟ್ರಿಕ್ಟ್, ಗಚ್ಚಿಬೌಲಿ, ಹೈಟೆಕ್ ಸಿಟಿ ಮತ್ತು ಔಟರ್ ರಿಂಗ್ ರಸ್ತೆಯಂತಹ ಪ್ರಮುಖ ಐಟಿ ಕಾರಿಡಾರ್‌ಗಳಿಗೆ ಬಹಳ ಹತ್ತಿರದಲ್ಲಿದೆ. ಇದು ಗೂಗಲ್ ಕ್ಯಾಂಪಸ್, ಅಮೆಜಾನ್ ಕ್ಯಾಂಪಸ್, ಹನಿವೆಲ್, ಕ್ಯಾಪ್ಜೆಮಿನಿ, ವಿಪ್ರೋ, ಮೈಕ್ರೋಸಾಫ್ಟ್‌ನಂತಹ ಐಟಿ ಕಂಪನಿಗಳಿಗೆ ಸಮೀಪದಲ್ಲಿದೆ. ಅಪೋಲೋ ಆಸ್ಪತ್ರೆ, ಯಶೋಧಾ ಆಸ್ಪತ್ರೆ, ಸ್ಟಾರ್ ಆಸ್ಪತ್ರೆಯಂತಹ ಪ್ರಮುಖ ಆರೋಗ್ಯ ಕೇಂದ್ರಗಳು ಸಹ ಹತ್ತಿರದಲ್ಲಿದ್ದು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಪ್ರಮುಖ ಶಿಕ್ಷಣ ಸಂಸ್ಥೆಗಳಿಗೂ ಸುಲಭ ಸಂಪರ್ಕವಿದೆ. ಈ ಎಲ್ಲಾ ಕಾರಣಗಳಿಂದಾಗಿ ವ್ಯೋಮ ತನ್ನ ಸ್ಥಳದ ವಿಚಾರದಲ್ಲಿ ದೊಡ್ಡ ಅನುಕೂಲವನ್ನು ಹೊಂದಿದೆ.
ಕಳೆದ 40 ವರ್ಷಗಳಿಂದ ವಿಶ್ವಾಸ ಗೆದ್ದಿರುವ ಬ್ರ್ಯಾಂಡ್
ಮೈ ಹೋಮ್ ಗ್ರೂಪ್ ಕಳೆದ 40 ವರ್ಷಗಳಿಂದ ವಿಶ್ವಾಸಾರ್ಹ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದೆ. ಹೀಗಾಗಿ ಗ್ರಾಹಕರು ಬುಕಿಂಗ್‌ಗಳಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಒಂದು, ಮೂರು, ಐದು ಮತ್ತು ಆರು ಟವರ್‌ಗಳಲ್ಲಿನ ಹೆಚ್ಚಿನ ಘಟಕಗಳಿಗೆ ಈಗಾಗಲೇ ಬುಕಿಂಗ್‌ಗಳು ನಡೆದಿವೆ. ಹೆಚ್ಚುತ್ತಿರುವ ನಿರೀಕ್ಷೆಗಳು ಮತ್ತು ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು, ಟವರ್ ನಾಲ್ಕರ ಬುಕಿಂಗ್‌ಗಳನ್ನು ಪ್ರಾರಂಭಿಸಲಾಗಿದ್ದು, ಈಗಾಗಲೇ ಶೇಕಡ 60ರಷ್ಟು ಬುಕಿಂಗ್ ಸಂಪೂರ್ಣವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published on: Oct 13, 2026 07:21 AM
ಇಂದು ನವರಾತ್ರಿಯ ಮೂರನೇ ದಿನ; ಚಂದ್ರಘಂಟಾ ದೇವಿಯ ಆರಾಧನೆಯಿಂದ ಕಾರ್ಯಸಿದ್ಧಿ
'ರಾಹುಲ್ ಗಾಂಧಿ ಎಡಪಂಥೀಯ ಸಿದ್ಧಾಂತ ಹೇರಲು ಯತ್ನಿಸುತ್ತಿದ್ದಾರೆ'; ಫಡ್ನವೀಸ್
ಅವಧಿಗೂ ಮುನ್ನ SIR ಅಂತ್ಯ: 2.01 ಲಕ್ಷ ಮತದಾರರ ಹೆಸರು ಡಿಲೀಟ್
ಕಾಂಗ್ರೆಸ್ನ 25 ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ

