My India My Life Goals: ಜೈವಿಕ ಅನಿಲ ಬಳಕೆಗೆ ಹಿಂದೇಟು ಯಾಕೆ? ಅದರ ಬಳಕೆಯಿಂದ ಪ್ರಯೋಜನ ಹಲವು!

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 09, 2023 | 6:35 PM

ಕೃಷಿ ಚಟುವಟಿಕೆಗಳಿಗೂ ಜೈವಿಕ ಅನಿಲವನ್ನು ಬಳಸಬಹುದು ಮತ್ತು ದೇಶದ ನಾನಾಭಾಗಗಳಲ್ಲಿ ರೈತರು ಇದನ್ನು ಬಳಸುತ್ತಿದ್ದಾರೆ. ರೈತರು ರಸಗೊಬ್ಬ ಬದಲು ಸಾವಯವ ತ್ಯಾಜ್ಯ ಮತ್ತು ಮುನಿಸಿಪಲ್ ತ್ಯಾಜ್ಯವನ್ನು ಬಳಸಿ ಹೆಚ್ಚಿನ ಇಳುವರಿ ಪಡೆಯಬಹುದು.

My India My Life Goals: ಜೈವಿಕ ಅನಿಲವನ್ನು (Biogas) ನಾವು ನಿರ್ಲಕ್ಷ್ಯ ಮಾಡುವುದೇ ಜಾಸ್ತಿ ಮಾರಾಯ್ರೇ. ಹಾಗೆ ನೋಡಿದರೆ ಈ ಅನಿಲವನ್ನು ಬಹಳಷ್ಟು ಚಟುವಟಿಕೆಗಳಿಗೆ ಬಳಸಬಹುದು. ನೈಸರ್ಗಿಕ ಬಯೋಗ್ಯಾಸ್ ಇಂಧನದ ಒಂದು ಪ್ರಮುಖ ರೂಪವಾಗಿದ್ದು ಮಿತವ್ಯಯಿಯೂ (economical) ಆಗಿದೆ. ಇದನ್ನು ಶಕ್ತಿಯ ಮೂಲ ಅಂತ ಯಾಕೆ ಹೇಳಲಾಗುತ್ತದೆ ಅಂದರೆ ವಿಭಜಿಸಿದಾಗ ಮಿಥೇನ್ (methane) ಮತ್ತು ಇಂಗಾಲದ ಡೈ ಆಕ್ಸೈಡ್ (carbon dioxide) ನೀಡುತ್ತದೆ. ಬಯೋಗ್ಯಾಸ್ ಬಳಕೆ ತಾಪಮಾನ ಏರಿಕೆಯನ್ನು ಯಶಸ್ವೀಯಾಗಿ ತಡೆಯುತ್ತದೆ ಅಂತ ವಿಜ್ಞಾನಿಗಳು ಹೇಳುತ್ತಾರೆ. ಕೃಷಿ ಚಟುವಟಿಕೆಗಳಿಗೂ ಜೈವಿಕ ಅನಿಲವನ್ನು ಬಳಸಬಹುದು ಮತ್ತು ದೇಶದ ನಾನಾಭಾಗಗಳಲ್ಲಿ ರೈತರು ಇದನ್ನು ಬಳಸುತ್ತಿದ್ದಾರೆ. ನೀವು ರೈತರಾಗಿದ್ದರೆ ರಸಗೊಬ್ಬರ ಕೊಳ್ಳುತ್ತೀರಿ, ಅದರೆ ಅದರ ಬದಲು ಸಾವಯವ ತ್ಯಾಜ್ಯ ಮತ್ತು ಮುನಿಸಿಪಲ್ ತ್ಯಾಜ್ಯವನ್ನು ಬಳಸಿ ಹೆಚ್ಚಿನ ಇಳುವರಿ ಪಡೆಯಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 08, 2023 07:23 PM