ನನ್ನ ಮಗ ಸೂರಜ್ ದೈವಭಕ್ತ, ತಾಯಿ ಚಾಮುಂಶೇಶ್ವರಿ ಕೃಪೆ ಅವನ ಮೇಲಿದೆ: ಹೆಚ್ ಡಿ ರೇವಣ್ಣ

|

Updated on: Jul 02, 2024 | 2:03 PM

ನಿನ್ನೆ ಭವಾನಿಯವರ ಜೊತೆ ನೀವ್ಯಾಕೆ ಪ್ರಜ್ವಲ್ ರೇವಣ್ಣನನ್ನು ನೋಡಲು ಸೆಂಟ್ರಲ್ ಜೈಲಿಗೆ ಹೋಗಲಿಲ್ಲ ಎಂದು ಕೇಳಿದ್ದಕ್ಕೆ ರೇವಣ್ಣ ಅವರು, ತಾನು ಮೈಸೂರು ಕಡೆ ಬಂದೆ ಅವರು ಬೆಂಗಳೂರು ಕಡೆ ಹೋದರು, ಎಷ್ಟಕ್ಕೂ ಅವರದ್ದು ಹೆತ್ತ ಕರುಳು ಮಗನನ್ನು ನೋಡಬೇಕಿನಿಸಿರುತ್ತದೆ, ಹಾಗಾಗಿ ಹೋಗಿದ್ದಾರೆ, ತಾನು ಭಾರವನ್ನೆಲ್ಲ ದೇವರ ಮೇಲೆ ಹಾಕಿದ್ದಾಗಿ ಹೇಳಿದರು.

ಮೈಸೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಹೊಳೆನರಸೀಪುರ ಶಾಸಕ ಹೆಚ್ ಡಿ ರೇವಣ್ಣ ತಮ್ಮ ಕುಟುಂಬಕ್ಕೆ ಸಂಬಂಧಿಸಿದ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಕಳೆದ 25 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ ಮತ್ತು ಶಾಸಕನಾಗಿ ಹಾಗೂ ಸಚಿವನಾಗಿ ಕೆಲಸ ಮಾಡಿದ್ದೇನೆ ಮತ್ತು 4ದಶಕಗಳಿಂದ ನನ್ನ ತಂದೆ ದೇವೇಗೌಡರ ಜೊತೆ ಕೆಲಸ ಮಾಡುತ್ತಿದ್ದೇನೆ. ನಮ್ಮ ಕುಟುಂಬದ ವಿರುದ್ಧ ನಡೆದಿರುವ ಷಡ್ಯಂತ್ರದ ಬಗ್ಗೆ ಸದ್ಯಕ್ಕೇನೂ ಮಾತಾಡಲ್ಲ, ಸಮಯ ಕೂಡಿ ಬಂದಾಗ ಮಾತಾಡುತ್ತೇನೆ ಎಂದು ಹೇಳಿದರು. ಮುಂದುವರಿದು ಮಾತಾಡಿದ ಅವರು, ತಮ್ಮ ಮಗ ಸೂರಜ್ ರೇವಣ್ಣ ಒಬ್ಬ ದೈವಭಕ್ತನಾಗಿದ್ದಾನೆ ಮತ್ತು ತಾಯಿ ಚಾಮುಂಡೇಶ್ವರಿ ಮತ್ತು ತಾಯಿ ರಾಜರಾಜೇಶ್ವರಿಯ ಕೃಪೆ ಅವನ ಮೇಲಿದೆ, ನಿಷ್ಕಳಂಕಿತನಾಗಿ ಜೈಲಿಂದ ಹೊರ ಬರುತ್ತಾನೆ ಎಂಬ ನಂಬಿಕೆ ತನಗಿದೆ ಎಂದು ರೇವಣ್ಣ ಹೇಳಿದರು. ಪ್ರಸ್ತುತ ವಿದ್ಯಮಾನಗಳಿಂದ ತಾನೇನೂ ಹೆದರಿಲ್ಲ, ಹಾಗೆ ಹೆದರೋದಾದರೆ ಮನೆಯಲ್ಲಿರಬೇಕಾಗುತ್ತಿತ್ತು ಎಂದು ರೇವಣ್ಣ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಸಂಕಷ್ಟ ಪರಿಹಾರಕ್ಕಾಗಿ ದೇವರ ಮೊರೆ ಹೊಕ್ಕಿರುವ ಹೆಚ್ ಡಿ ರೇವಣ್ಣ ಮಂದಿರದ ಬಳಿ ಟಿವಿ9 ವರದಿಗಾರನಿಗೆ ಏನೂ ಕೇಳಬೇಡಿ ಅಂದರು

Follow us on