AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಬಾರಿ ಆನೆ, ತಾಯಿ ಚಾಮುಂಡೇಶ್ವರಿ ರೂಪದಲ್ಲಿ ಕಂಗೊಳಿಸಿದ ಡ್ರೋನ್‌ಗಳು

ಅಂಬಾರಿ ಆನೆ, ತಾಯಿ ಚಾಮುಂಡೇಶ್ವರಿ ರೂಪದಲ್ಲಿ ಕಂಗೊಳಿಸಿದ ಡ್ರೋನ್‌ಗಳು

ರಾಮ್​, ಮೈಸೂರು
| Edited By: |

Updated on: Oct 17, 2026 | 10:41 PM

Share

ಮೈಸೂರು ದಸರಾ 2026 ಅಂಗವಾಗಿ ನಡೆದ ಡ್ರೋನ್ ಶೋ ಸಾರ್ವಜನಿಕರ ಮನಸೂರೆಗೊಂಡಿತು. ಪಂಜಿನ ಕವಾಯತು ಮೈದಾನದಲ್ಲಿ ನೂರಾರು ಡ್ರೋನ್‌ಗಳು ಆಕಾಶದಲ್ಲಿ ಚಿನ್ನದ ಅಂಬಾರಿ, ತಾಯಿ ಚಾಮುಂಡೇಶ್ವರಿ, ಸೈನಿಕರ ಚಿತ್ರಗಳನ್ನು ಮೂಡಿಸಿ ಕಣ್ಮನ ಸೆಳೆದವು. ಧಾರ್ಮಿಕ ಮತ್ತು ಸಾಂಸ್ಕೃತಿಕ ವೈಭವವನ್ನು ಬಿಂಬಿಸಿದ ಈ ಅನನ್ಯ ಪ್ರದರ್ಶನವನ್ನು ಸಹಸ್ರಾರು ಪ್ರವಾಸಿಗರು ಮತ್ತು ಸಾರ್ವಜನಿಕರು ಸಚಿವ ಯತೀಂದ್ರ ಸಿದ್ದರಾಮಯ್ಯ ಅವರೊಂದಿಗೆ ಕಣ್ತುಂಬಿಕೊಂಡರು.

ಮೈಸೂರು, ಅ.17: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2026ರ ಅಂಗವಾಗಿ ಬಣ್ಣ ಬಣ್ಣದ ದೀಪಾಲಂಕಾರದೊಂದಿಗೆ ನಡೆದ ಡ್ರೋನ್ ಶೋ  ಸಾರ್ವಜನಿಕರ ಹಾಗೂ ಪ್ರವಾಸಿಗರ ಮನಸೂರೆಗೊಳಿಸಿತು. ನಗರದ ಪಂಜಿನ ಕವಾಯತು ಮೈದಾನದಲ್ಲಿ ಆಯೋಜಿಸಲಾಗಿದ್ದ ಈ ನಯನಮನೋಹರ ಪ್ರದರ್ಶನವನ್ನು ಸಹಸ್ರಾರು ಜನರು ಕಣ್ಣುಂಬಿಕೊಂಡು ಸಂಭ್ರಮಿಸಿದರು. ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆ: ನೂರಾರು ಡ್ರೋನ್‌ಗಳು ಆಕಾಶದಲ್ಲಿ ಏಕಕಾಲಕ್ಕೆ ಹಾರಿ, ದಸರಾದ ಪ್ರಮುಖ ಆಕರ್ಷಣೆಯಾದ ಚಿನ್ನದ ಅಂಬಾರಿ ಹೊತ್ತ ಆನೆ ಹಾಗೂ ತಾಯಿ ಚಾಮುಂಡೇಶ್ವರಿಯ ಆಕರ್ಷಕ ಚಿತ್ರಗಳನ್ನು ತೋರ್ಪಡಿಸಿದವು. ದೇಶ ಕಾಯುವ ಸೈನಿಕ, ಸುದರ್ಶನ ಚಕ್ರ ಹಾಗೂ ಕರ್ನಾಟಕ ಸರ್ಕಾರದ ದೃಢ ಸಂಕಲ್ಪದ ಬಿಂಬಿಸುವ ವಿಶಿಷ್ಟ ಚಿತ್ರಗಳು ಆಗಸದಲ್ಲಿ ಬೆಳಕಿನ ಚಿತ್ತಾರ ಮೂಡಿಸಿ ವೀಕ್ಷಕರನ್ನು ಮಂತ್ರಮುಗ್ಧಗೊಳಿಸಿದವು. ಪಂಜಿನ ಕವಾಯತು ಮೈದಾನದಲ್ಲಿ ನಡೆದ ಈ ವೈಭವೋಪೇತ ಡ್ರೋನ್ ಶೋ ಕಾರ್ಯಕ್ರಮದಲ್ಲಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರದರ್ಶನವನ್ನು ಕಾಂಚಾಣ ಹಾಗೂ ಸಾರ್ವಜನಿಕರೊಂದಿಗೆ ಕಣ್ತುಂಬಿಕೊಂಡರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ರಾಮ್​, ಮೈಸೂರು
ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More