ಮೈಸೂರು ದಸರಾ: ಹೇಗಿದೆ ನೋಡಿ ಹಳೇ ಬೈಕ್ಗಳ ಸವಾರಿ!
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಗುರುವಾರ ಅದ್ದೂರಿ ಚಾಲನೆ ದೊರೆತಿದೆ. ವಿವಿಧ ಕಾರ್ಯಕ್ರಮಗಳು ಪ್ರವಾಸಿಗರನ್ನು ಸೆಳೆಯುತ್ತಿದೆ. ಈ ಮಧ್ಯೆ, ಪಾರಂಪರಿಕ ಜಾವಾ ಮೋಟಾರ್ ಬೈಕ್ ಜಾಥಾಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಜಾವಾ, ಎಝ್ಡಿ ಬೈಕ್ಗಳ ಜಾಥಾ ಹೇಗಿದೆ ಎಂದು ಇಲ್ಲಿ ನೋಡಿ.
ಮೈಸೂರು, ಅಕ್ಟೋಬರ್ 4: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪಾರಂಪರಿಕ ಜಾವಾ ಮೋಟಾರ್ ಬೈಕ್ ಸವಾರಿಗೆ ಶುಕ್ರವಾರ ಬೆಳಗ್ಗೆ ಚಾಲನೆ ದೊರೆಯಿತು. ಮೈಸೂರಿನ ಟೌನ್ ಹಾಲ್ ವೃತ್ತದಿಂದ ಬೈಕ್ ಸವಾರಿಗೆ ಚಾಲನೆ ನೀಡಲಾಯಿತು. ಪ್ರಾದೇಶಿಕ ಆಯುಕ್ತ ರಮೇಶ್ ಚಾಲನೆ ನೀಡಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಜಾವಾ ಬೈಕ್ ಮೂಲಕ ಸವಾರಿ ನಡೆಯಲಿದೆ.
ಜನಸಾಮಾನ್ಯರಿಗೆ ನಗರದ ಪಾರಂಪರಿಕ ಕಟ್ಟಡಗಳ ಪರಿಚಯ ಮಾಡಿಕೊಡುವ ಉದ್ದೇಶವೂ ಇದರ ಹಿಂದಿದೆ. ಪುರಾತತ್ವ ಸಂಗ್ರಹಾಲಯ ಹಾಗೂ ಪರಂಪರೆ ಇಲಾಖೆ ಜಾಥಾ ಆಯೋಜನೆ ಮಾಡಿದ್ದು, ಸವಾರಿಯಲ್ಲಿ 80ಕ್ಕೂ ಹೆಚ್ಚು ಬೈಕ್ಗಳು ಪಾಲ್ಗೊಂಡಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ