AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

'ಆನೆ ಯಾವುದು ಅಂತಾನೇ ಹೇಳಿಲ್ಲ ಅಂದ್ರೆ ಅಂಬಾರಿ ಯಾಕೆ ಕೊಡಬೇಕು?': ಅಂದು ಅರ್ಜುನ ಆನೆ ಮಾಡಿದ್ದು ನೆನಪಿದೆಯಾ?

‘ಆನೆ ಯಾವುದು ಅಂತಾನೇ ಹೇಳಿಲ್ಲ ಅಂದ್ರೆ ಅಂಬಾರಿ ಯಾಕೆ ಕೊಡಬೇಕು?’: ಅಂದು ಅರ್ಜುನ ಆನೆ ಮಾಡಿದ್ದು ನೆನಪಿದೆಯಾ?

ರಾಮ್​, ಮೈಸೂರು
| Edited By: |

Updated on: Nov 04, 2026 | 4:32 PM

Share

ಮೈಸೂರು ದಸರಾದ ಚಿನ್ನದ ಅಂಬಾರಿ ತಮ್ಮ ಖಾಸಗಿ ಆಸ್ತಿ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟಪಡಿಸಿದ್ದಾರೆ. ದಸರಾ ಆನೆ ಆಯ್ಕೆಯ ವಿಚಾರದಲ್ಲಿ ಅರಮನೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅಗತ್ಯ. ಆನೆ ಮತ್ತು ಜನರ ಸುರಕ್ಷತೆಯ ದೃಷ್ಟಿಯಿಂದ ಈ ಸಂಪ್ರದಾಯ ಮುಂದುವರಿಯಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.

ಮೈಸೂರು, ನ.4: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಚಿನ್ನದ ಅಂಬಾರಿ ರಾಜಮನೆತನದ ಖಾಸಗಿ ಸ್ವತ್ತು ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಪುನರುಚ್ಚರಿಸಿದ್ದಾರೆ. ಯಾವುದೇ ಸರ್ಕಾರಿ ಕಾಯ್ದೆಗಳ ಅಡಿಯಲ್ಲಿ ಅಂಬಾರಿ ಅಥವಾ ಸಿಂಹಾಸನ ಬರುವುದಿಲ್ಲ, ಇವು ಹಿಂದೆಯೂ ನಮ್ಮವೇ, ಮುಂದೆಯೂ ನಮ್ಮವೇ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ದಸರಾ ಆನೆ ಆಯ್ಕೆಯ ವಿಚಾರದಲ್ಲಿ ಅರಮನೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಸಂಪ್ರದಾಯವಿದೆ. ಇದು ಕೇವಲ ರಾಜಮನೆತನದ ಹಕ್ಕಲ್ಲ, ಬದಲಾಗಿ ಆನೆ ಮತ್ತು ಲಕ್ಷಾಂತರ ಜನರ ಸುರಕ್ಷತೆಗೆ ಸಂಬಂಧಿಸಿದ ವಿಚಾರ. ಮಾವುತ ಮತ್ತು ಆನೆಗೆ ಸಂಬಂಧಿಸಿದಂತೆ ಯಾವುದೇ ಅಪಾಯ ಉಂಟಾಗಬಾರದು ಎಂಬುದು ನಮ್ಮ ಆತಂಕ. ಹಿಂದಿನ ಘಟನೆಗಳನ್ನು ಗಮನಿಸಿ, ಆನೆ ಆಯ್ಕೆ ಮಾಡುವಾಗ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅತಿ ಮುಖ್ಯ. ಅಂಬಾರಿಗೆ ಆಯ್ಕೆ ಮಾಡುವ ಆನೆಯ ಬಗ್ಗೆ ಅರಮನೆಗೆ ಮಾಹಿತಿ ನೀಡಬೇಕಾದ್ದು ಅಧಿಕಾರಿಗಳ ಕರ್ತವ್ಯ ಎಂದೂ ಪ್ರಮೋದಾದೇವಿ ಒಡೆಯರ್ ಅಭಿಪ್ರಾಯಪಟ್ಟಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ರಾಮ್​, ಮೈಸೂರು
ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More