Mysuru Gaja Payana: ಅಭಿಮನ್ಯುಗೆ ವಿಶ್ರಾಂತಿ; ಈ ಬಾರಿ ಅಂಬಾರಿ ಹೊರುವ ಆನೆ ಯಾವುದು?

Edited By:

Updated on: Aug 26, 2026 | 1:00 PM

ಮೈಸೂರು ದಸರಾ ಗಜಪಯಣ ವೀರಹೊಸನಹಳ್ಳಿಯಿಂದ ಅರಮನೆಗೆ ಆರಂಭವಾಗಿದೆ. ಆರು ಬಾರಿ ಚಾಮುಂಡೇಶ್ವರಿ ಅಂಬಾರಿ ಹೊತ್ತಿದ್ದ ಅಭಿಮನ್ಯು ಆನೆಗೆ ಈ ಬಾರಿ ಬೀಳ್ಕೊಡುಗೆ ನೀಡಲಾಗಿದೆ. ಅಭಿಮನ್ಯು 25 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿದೆ. ಅಂಬಾರಿ ಹೊರಲು ಮುಂದಿನ ಆನೆ ಯಾವುದು ಎಂಬುದು ಇನ್ನೂ ನಿರ್ಧರವಾಗಿಲ್ಲ, ತರಬೇತಿಯ ಬಳಿಕ ಅರಮನೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.

ಮೈಸೂರು, ಆಗಸ್ಟ್ 26: ದಸರಾ ಮಹೋತ್ಸವದ ಅಂಗವಾಗಿ ವೀರಹೊಸನಹಳ್ಳಿಯಿಂದ ಮೈಸೂರು ಅರಮನೆಗೆ ಗಜಪಯಣ ಆರಂಭವಾಗಿದೆ. ಈ ಬಾರಿ ದಸರಾದಲ್ಲಿ ಭಾಗವಹಿಸುವ ಆನೆಗಳು ವೀರಹೊಸನಹಳ್ಳಿಯಿಂದ ಅರಮನೆ ತನಕ ಪಯಣ ಮಾಡುತ್ತವೆ. ಕಳೆದ 25 ವರ್ಷಗಳಿಂದ ಚಾಮುಂಡೇಶ್ವರಿ ದೇವಿಯ ಅಂಬಾರಿಯನ್ನು ಸುಮಾರು ಆರು ಬಾರಿ ಯಶಸ್ವಿಯಾಗಿ ಹೊತ್ತಿದ್ದ ಅಭಿಮನ್ಯು ಆನೆ ಇವತ್ತು ನಿವೃತ್ತಿ ಹೊಂದುತ್ತಿದೆ.

ಹೀಗಾಗಿ, ಅಭಿಮನ್ಯು ಆನೆಗೆ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು. ಅಭಿಮನ್ಯು ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಹೊಸದಾಗಿ ಬಂದಿರುವ ಆನೆಗಳಿಗೆ ಗಜಪಯಣಕ್ಕೆ ಚಾಲನೆ ನೀಡಲಾಗಿದೆ. ಈ ಬಾರಿ ಅಂಬಾರಿಯನ್ನು ಯಾವ ಆನೆ ಹೊತ್ತುಕೊಂಡು ಸಾಗಲಿದೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಗುರುತಿಸಲಾದ ಕೆಲವು ಆನೆಗಳಿಗೆ ಅರಮನೆಯಲ್ಲಿ ತರಬೇತಿ ನೀಡಿದ ನಂತರ, ಕೊನೆಯಲ್ಲಿ ಅಂಬಾರಿ ಹೊರಲು ಸೂಕ್ತವಾದ ಆನೆಯನ್ನು ಅಂತಿಮಗೊಳಿಸಲಾಗುತ್ತದೆ. ಈ ಬಾರಿ ಕಂಬಳ ಸ್ಪರ್ಧೆಗಳೂ ನಡೆಯಲಿದ್ದು, ಮುಖ್ಯಮಂತ್ರಿಗಳು ಇದಕ್ಕೆ ಸೂಚನೆ ನೀಡಿದ್ದಾರೆ ಎಂದು ತಿಳಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Aug 26, 2026 12:43 PM
Loading...
Unable to load recommendations.
Follow Us