Mysuru Dasara Jamboo Savari Live: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಚಾಲನೆ, ಇಲ್ಲಿದೆ ಲೈವ್

Updated By: ಅಕ್ಷಯ್​ ಪಲ್ಲಮಜಲು​​

Updated on: Oct 02, 2025 | 4:41 PM

ಇಂದು ಮಧ್ಯಾಹ್ನ 1ರಿಂದ 1.18ರವರೆಗಿನ ಶುಭ ಧನುರ್​ ಲಗ್ನದಲ್ಲಿ ಜಂಬೂಸವಾರಿಗೆ ಚಾಲನೆ ಸಿಗಲಿದೆ. ಅರಮನೆ ಬಲರಾಮ ದ್ವಾರದಲ್ಲಿ ನಂದಿ ಧ್ವಜಕ್ಕೆ ಸಿಎಂ ಸಿದ್ದರಾಮಯ್ಯ ಪೂಜೆ ಸಲ್ಲಿಸುವ ಮೂಲಕ ಜಂಬೂಸವಾರಿ ಆರಂಭವಾಗಲಿದೆ. 750 ಕೆ.ಜಿ ಚಿನ್ನದ ಅಂಬಾರಿ ಹೊತ್ತು ಅಭಿಮನ್ಯು ಸಾಗಿದ್ದಾನೆ. ಜಂಬೂಸವಾರಿಯ ನೇರಪ್ರಸಾರ ಇಲ್ಲಿದೆ ನೋಡಿ.

ಮೈಸೂರು, ಅಕ್ಟೋಬರ್​ 02: ನವರಾತ್ರಿ ಸಂಭ್ರಮ ಮುಗಿದಿದೆ. ಆಯುಧ ಪೂಜೆಯ ಸಡಗರವೂ ಅಂತ್ಯವಾಗಿದೆ. ಈಗ ಉಳಿದಿರುವುದು ಜಂಬೂಸವಾರಿ. ಮೈಸೂರು ದಸರಾದ (Dasara) ಪ್ರಮುಖ ಆಕರ್ಷಣೆ ಅಂದರೆ ಅದು ಜಂಬೂ ಸವಾರಿ. ತಾಯಿ ಚಾಮಂಡಿಯನ್ನ 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ಇಟ್ಟು ಮೆರವಣಿಗೆ ಮಾಡಲಾಗುತ್ತೆ. ಇದೇ ಮೆರವಣಿಗೆಗೆ ಕ್ಷಣಗಣನೆ ಶುರುವಾಗಿದೆ. ಸದ್ಯ ಮಧ್ಯಾಹ್ನ 1ರಿಂದ 1.18ರ ಶುಭ ಧನುರ್ ಲಗ್ನದಲ್ಲಿ ನಂದಿಧ್ವಜ ಪೂಜೆ ನಡೆದು.  ಇದೀಗ ಜಂಬೂಸವಾರಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಜಂಬೂಸವಾರಿಯನ್ನು ನೇರಪ್ರಸಾರದಲ್ಲಿ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Oct 02, 2025 01:01 PM