ಮಂಡ್ಯದಲ್ಲಿ ಮುನಿಸು ಮರೆತ ಮೈತ್ರಿ ನಾಯಕರು: ಒಂದೇ ವೇದಿಕೆ ಹಂಚಿಕೊಂಡ BJP-JDS ಮುಖಂಡರು

Edited By:

Updated on: Jun 14, 2026 | 1:02 PM

ಮಂಡ್ಯದಲ್ಲಿ ಮೈತ್ರಿ ಪಕ್ಷದ ನಾಯಕರಾದ ನಾರಾಯಣಗೌಡ ಮತ್ತು ಹೆಚ್.ಡಿ. ಕುಮಾರಸ್ವಾಮಿ ಅವರು ಹಿಂದಿನ ಭಿನ್ನಾಭಿಪ್ರಾಯಗಳನ್ನು ಮರೆತು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ 12 ವರ್ಷಗಳ ಸುಧೀರ್ಘ ಆಡಳಿತದ ಸ್ಮರಣೆ ಕಾರ್ಯಕ್ರಮದಲ್ಲಿ ಈ ಬೆಳವಣಿಗೆ ನಡೆದಿರೋದು ಭಾರಿ ಕುತೂಹಲ ಮೂಡಿಸಿದೆ.

ಮಂಡ್ಯ, ಜೂನ್​​ 14: ಮಂಡ್ಯದ ಜೆಡಿಎಸ್​​-ಬಿಜೆಪಿ ನಾಯಕರು ಮುನಿಸು ಮರೆತು ಪ್ರಧಾನಿ ನರೇಂದ್ರ ಮೋದಿ 12 ವರ್ಷ ಸುಧೀರ್ಘ ಆಡಳಿತ ಸ್ಮರಣೆ ಕಾರ್ಯಕ್ರಮದಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮಂಡ್ಯದ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಉಭಯ ಪಕ್ಷಗಳ ಮುಖಂಡರು ವೇದಿಕೆ ಹಂಚಿಕೊಂಡಿರೋದು ಕಂಡುಬಂದಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಚಾರ ಸಂಬಂಧ ಬಿಜೆಪಿ – ಜೆಡಿಎಸ್ ಮುಖಂಡರು ಇತ್ತೀಚೆಗಷ್ಟೇ ಪರಸ್ಪರ ವಾಗ್ದಾಳಿ ನಡೆಸಿದ್ದರು. ಮೈತ್ರಿಯೇ ಬೇಡ ಎಂದು ಬಿಜೆಪಿ ನಾಯಕರಿಗೂ ದೂರು ನೀಡಲಾಗಿತ್ತು. ಹೀಗಿದ್ದರೂ ಅವೆಲ್ಲವನ್ನು ಮರೆತು ಒಂದೇ ವೇದಿಕೆಯಲ್ಲಿ ಅಕ್ಕಪಕ್ಕ‌ ಕುಳಿತ ಕುಮಾರಸ್ವಾಮಿ ಮತ್ತು ನಾರಾಯಣಗೌಡ ಖುಷಿಯಿಂದಲೇ ಮಾತುಕತೆ ನಡೆಸಿರೋದು ಕಂಡುಬಂದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us