AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಲಮಂಗಲದಲ್ಲಿ ಜ್ಯುವೆಲರಿಗೆ ಕನ್ನ: ಗೋಡೆ ಕೊರೆದು 70 ಕೆಜಿ ಬೆಳ್ಳಿ ಕಳ್ಳತನ

ನೆಲಮಂಗಲದಲ್ಲಿ ಜ್ಯುವೆಲರಿಗೆ ಕನ್ನ: ಗೋಡೆ ಕೊರೆದು 70 ಕೆಜಿ ಬೆಳ್ಳಿ ಕಳ್ಳತನ

ಪ್ರಸನ್ನ ಹೆಗಡೆ
|

Updated on: May 01, 2026 | 11:20 AM

Share

ನೆಲಮಂಗಲದ ಹಾವನೂರು ಲೇಔಟ್‌ನಲ್ಲಿರುವ ಎಂಬಿ ಜ್ಯುವೆಲರ್ಸ್‌ಗೆ ಕನ್ನ ಹಾಕಲಾಗಿದೆ. ಖದೀಮರು ಅಂಗಡಿಯ ಗೋಡೆ ಕೊರೆದು ಪ್ರವೇಶಿಸಿ, ಸುಮಾರು 70 ಕೆಜಿ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿದ್ದಾರೆ. ದೋಚಿದ ಆಭರಣಗಳ ಒಟ್ಟು ಮೌಲ್ಯ 1.2 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಬಾಗಲಗುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ನೆಲಮಂಗಲ, ಮೇ 1: ಹಾವನೂರು ಲೇಔಟ್‌ನಲ್ಲಿರುವ ಎಂಬಿ ಜ್ಯುವೆಲರ್ಸ್​​ನಲ್ಲಿ ಭಾರಿ ಕಳ್ಳತನ ನಡೆದಿದೆ. ಖದೀಮರು ಗೋಡೆ ಕೊರೆದು ಅಂಗಡಿಯೊಳಗೆ ಪ್ರವೇಶಿಸಿ, ಸುಮಾರು 70 ಕೆಜಿ ಬೆಳ್ಳಿಯ ಆಭರಣಗಳನ್ನು ದೋಚಿದ್ದಾರೆ. ದೋಚಿದ ಬೆಳ್ಳಿಯ ಮೌಲ್ಯ ಸುಮಾರು 1.2 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.  ಗೋಡೆಯನ್ನು ಕೊರೆದು, ಹಿಂಬದಿಯ ರೂಮ್‌ನ ಬಾಗಿಲು ಒಡೆದು ಒಳನುಗ್ಗಿರುವ ಕಳ್ಳರು, ರಾತ್ರೋರಾತ್ರಿ ಈ ಕೃತ್ಯ ಎಸಗಿದ್ದಾರೆ. ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಕಳ್ಳರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us