ಮಗಳ ಸಿನಿಮಾ ಪಯಣಕ್ಕೆ ದರ್ಶನ್, ಸುದೀಪ್ ಬೆಂಬಲ ನೆನೆದ ನಟ ಪ್ರೇಮ್

Updated on: May 07, 2025 | 8:32 PM

ನಟ ‘ನೆನಪಿರಲಿ’ ಪ್ರೇಮ್ ಅವರ ಪುತ್ರಿ ಅಮೃತಾಗೆ ಹೊಸ ಹೊಸ ಅವಕಾಶಗಳು ಸಿಗುತ್ತಿವೆ. ‘ಗೀತಾ ಪಿಕ್ಚರ್ಸ್’ ನಿರ್ಮಾಣದ ‘ಪಬ್ಬಾರ್’ ಸಿನಿಮಾದಲ್ಲಿ ಅಮೃತಾ ಪ್ರೇಮ್ ಅವರು ನಾಯಕಿ ಆಗಿದ್ದಾರೆ. ಈ ಸಿನಿಮಾದ ಮುಹೂರ್ತ ಸಮಾರಂಭದಲ್ಲಿ ಪ್ರೇಮ್ ಭಾಗಿಯಾಗಿದ್ದಾರೆ. ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.

ನಟ ‘ನೆನಪಿರಲಿ’ ಪ್ರೇಮ್ (Nenapirali Prem) ಪುತ್ರಿ ಅಮೃತಾಗೆ ಹೊಸ ಹೊಸ ಅವಕಾಶಗಳು ಸಿಗುತ್ತಿವೆ. ‘ಗೀತಾ ಪಿಕ್ಚರ್ಸ್’ ನಿರ್ಮಾಣ ಮಾಡುತ್ತಿರುವ ‘ಪಬ್ಬಾರ್’ ಚಿತ್ರದಲ್ಲಿ ಅಮೃತಾ ಪ್ರೇಮ್ (Amrutha Prem) ನಾಯಕಿ ಆಗಿದ್ದಾರೆ. ಈ ಸಿನಿಮಾದ ಮುಹೂರ್ತ ಸಮಾರಂಭದಲ್ಲಿ ಪ್ರೇಮ್ ಭಾಗಿಯಾಗಿದ್ದಾರೆ. ಈ ವೇಳೆ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ‘ಮಗಳಿಗೆ ಇಡೀ ಚಿತ್ರರಂಗ ಬೆಂಬಲ ನೀಡುತ್ತಿದೆ. ಡಾಲಿ ಧನಂಜಯ್ ಲಾಂಚ್ ಮಾಡಿದರು. ಆ ಚಿತ್ರಕ್ಕೆ ದರ್ಶನ್, ಸುದೀಪ್ ಅವರು ಬೆಂಬಲ ನೀಡಿದರು. ತೆರೆಹಿಂದೆ ಹಲವರು ಆಶೀರ್ವಾದ ಮಾಡಿದರು’ ಎಂದು ‘ನೆನಪಿರಲಿ’ ಪ್ರೇಮ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.