ಚುನಾವಣಾ ಸಮಯದಲ್ಲಿ ನಮಗೆ ಬೇಕಾದ ಜನ ದುಡ್ಡು ಕೊಡುತ್ತಾರೆ, ಅದನ್ನು ಖರ್ಚು ಮಾಡುತ್ತೇನೆ: ಹೆಚ್ ಡಿ ಕುಮಾರಸ್ವಾಮಿ

|

Updated on: Jan 10, 2025 | 1:40 PM

ಕಾಂಗ್ರೆಸ್ ನಾಯಕರ ಡಿನ್ನರ್ ಮೀಟಿಂಗ್ ಗಳನ್ನು ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ, ದಲಿತ ಸಮುದಾಯದ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಸಿಕ್ಕಿಲ್ಲಾಂತ ಆ ಸಮುದಾಯದ ಮಿನಿಸ್ಟ್ರುಗಳು ತಮ್ಮ ಮನೆಗಳಲ್ಲಿ ಡಿನ್ನರ್ ಏರ್ಪಡಿಸಿ ಚರ್ಚೆ ಮಾಡುತ್ತಾರಂತೆ, ಅದನ್ನೆಲ್ಲ ಚರ್ಚಿಸಲು ಮಂತ್ರಿಯ ಮನೇಲಿ ಯಾಕೆ ಸೇರಬೇಕು? ಅದಕ್ಕಾಗಿ ಕ್ಯಾಬಿನೆಟ್ ಸಭೆ ಇಲ್ಲವೇ? ಎಂದು ಪ್ರಶ್ನಿಸಿದರು.

ಬೆಂಗಳೂರು: ವೈಕುಂಠ ಏಕಾದಶಿಯ ನಿಮಿತ್ತ ನಗರದ ದೇವಸ್ಥಾನವೊಂದರಲ್ಲಿ ಪತ್ನಿ ಅನಿತಾ ಕುಮಾರಸ್ವಾಮಿಯೊಂದಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ನಿನ್ನೆ ಎಸ್ ಟಿ ಸೋಮಶೇಖರ್ ಮಾಡಿದ ಅರೋಪಗಳಿಗೆ ಉತ್ತರ ನೀಡಿದರು. ಚುನಾವಣೆಯ ಸಂದರ್ಭದಲ್ಲಿ ತಮಗೆ ಬೇಕಿರುವ ಜನ ಬಂದು ಚುನಾವಣಾ ಖರ್ಚಿಗೆ ದುಡ್ಡು ನೀಡುತ್ತಾರೆ, ಹಾಗೆ ಕೊಟ್ಟವರ ದುಡ್ಡನ್ನು ಚುನಾವಣೆಯಲ್ಲಿ ಖರ್ಚು ಮಾಡಿದ್ದೇನೆ, ತಾನು ಸತ್ಯ ಹರಿಶ್ಚಂದ್ರ ಅಂತ ಯಾವತ್ತೂ ಹೇಳಿಕೊಂಡಿಲ್ಲ, ಹಾಗಂತ ಈ ಸರ್ಕಾರದ ಹಾಗೆ ತನ್ನ ಸಹಿಯನ್ನು ಮಾರಾಟಕ್ಕಿಟ್ಟಿಲ್ಲ, ಈ ಸರ್ಕಾರ ಎಲ್ಲಾದಕ್ಕೂ ದರ ನಿಗದಿ ಮಾಡಿದೆ ಎಂದು ಕುಮಾರಸ್ವಾಮಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಹಣವನ್ನೇ ಖರ್ಚು ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಮಗನನ್ನು ಗೆಲ್ಲಿಸಲು ₹100 ಕೋಟಿ ಖರ್ಚು ಮಾಡಿದ್ದಾರೆ: ಸೋಮಶೇಖರ್