ಬೆಂಗಳೂರು ಟ್ರಾಫಿಕ್ ಜಾಂ ಖತಂ? ಬಿಬಿಎಂಪಿ-ಬೆಂಗಳೂರು ಪೊಲೀಸರ ಹೊಸ ಯೋಜನೆಯೇನು? ಟಿವಿ9 ಡಿಜಿಟಲ್ ಲೈವ್ನಲ್ಲಿ ಚರ್ಚೆ
ಬೆಂಗಳೂರು ಪೊಲೀಸ್ ಮತ್ತು ಬಿಬಿಎಂಪಿ ರಾಜಧಾನಿಯಲ್ಲಿ ಟ್ರಾಫಿಕ್ ಸಮಸ್ಯೆ ತಗ್ಗಿಸಲು ಜಂಟಿಯಾಗಿ ಒಂದಷ್ಟು ಯೋಜನೆಗಳನ್ನು ಹಾಕಿಕೊಂಡಿವೆ. ಆದರೆ ಇದು ಸಾಧ್ಯವಾದೀತಾ? ಈ ಕುರಿತಾದ ಚರ್ಚೆ ಇಂದಿನ ಟಿವಿ9 ಡಿಜಿಟಲ್ ಲೈವ್ನಲ್ಲಿ ಮಧ್ಯಾಹ್ನ 3.30 ಕ್ಕೆ. ಈ ಕಾರ್ಯಕ್ರಮಕ್ಕೆ ನಿಮಗೆ ಸ್ವಾಗತ. TV 9 Kannada Digital Live
ಬೆಂಗಳೂರು ನಗರ ಪೊಲೀಸರು ರಾಜಧಾನಿಯಲ್ಲಿ ಟ್ರಾಫಿಕ್ ಜಾಮ್ ಅನ್ನು ನಿವಾರಿಸಲು ಹೊಸ ಯೋಜನೆಯನ್ನು ತಯಾರಿಸುತ್ತಿದ್ದಾರೆ. ಇದು ನಿಜವಾಗಿಯೂ ಫಲಪ್ರದವಾಗಬಹುದೇ? ಬೆಂಗಳೂರು ಟ್ರಾಫಿಕ್ ಜಾಮ್ ಸಮಸ್ಯೆ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು ಅಂತಾ ನೋಡಿದಾಗ ಮಂಗಳವಾರ ರಾತ್ರಿ ಪೊಲೀಸ್ ಇಲಾಖೆ, ನಗರಾಭಿವೃದ್ಧಿ, ಬಿಎಂಟಿಸಿ, ಕೆಆರ್ ಟಿಸಿ ಸೇರಿದಂತೆ ಎಲ್ಲಾ ಅಧಿಕಾರಿಗಳು ನಗರದಲ್ಲಿ ರೌಂಡ್ಸ್ ಮಾಡಿದ್ದೇವೆ. ಒಟ್ಟು ನಾಲ್ಕು ಕಡೆ ಪರಿವೀಕ್ಷಣೆ ಮಾಡಿದ್ದೇವೆ. ಸಣ್ಣ ಪುಟ್ಟ ಸಮಸ್ಯೆಗಳನ್ನ ಬಗೆಹರಿಸಿದ್ರೆ ಶೇ. 30 ರಷ್ಟು ಟ್ರಾಫಿಕ್ ಸಮಸ್ಯೆ ಬಗೆಹರಿಸಬಹುದು ಎಂದು ಆಶಾಭಾವ ವ್ಯಕ್ತಪಡಿಸಿದ್ದಾರೆ. ಇದು ಸಾಧ್ಯವಾದೀತೆ? ಇನ್ನು, ಪಾದಚಾರಿಗಳಿಗೆ ರಸ್ತೆ ದಾಟಲು ಸ್ಕೈವಾಕ್, ಲೈಟ್, ಫುಟ್ ಪಾತ್ ನಿರ್ಮಾಣ ಮಾಡುತ್ತೇವೆ. ಹೆಬ್ಬಾಳದ ಕಡೆ ಬಿಎಂಟಿಸಿ ಬಸ್ಗಳ ನಿಲ್ದಾಣದಿಂದ ವಾಹನ ಸವಾರರಿಗೆ ಸಮಸ್ಯೆಯಾಗಿತ್ತು. ಹೆಬ್ಬಾಳದ ಬಳಿ ಮತ್ತೊಂದು ಸರ್ವಿಸ್ ಲೈನ್ ಮಾಡಿಕೊಡಲು ಪ್ಲಾನ್ ನಡಿತಾಯಿದೆ. ಏರ್ ಪೋರ್ಟ್ನಿಂದ ಹೆಬ್ಬಾಳದ ಕಡೆಯಿಂದ ಬರುವ ವಾಹನಗಳಿಗೆ ನೇರವಾಗಿ ಫ್ಲೈಓವರ್ ಮೇಲೆ ಹತ್ತಲು ಅನುಕೂಲವಾಗಲಿದೆ. ಅಡ್ಡವಾಗಿ ಫ್ಲೈಓವರ್ ಮೇಲೆ ಹತ್ತಲು ಅವಕಾಶ ಇರಲ್ಲ. ತಾತ್ಕಾಲಿಕವಾಗಿ ಪ್ಲಾನ್ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಕೆ.ಆರ್ ಪುರಂ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ಮೆಟ್ರೋ ಕಾಮಗಾರಿಯಿಂದ ಜಾಗ ಪಡೆದು ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುವುದು. ರಸ್ತೆಯಲ್ಲಿ ಬಸ್ ನಿಲ್ಲದಂತೆ ಕ್ರಮಕೈಗೊಳ್ಳಲಾಗುವುದು. ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್, ಸಾರಕ್ಕಿ ಜಂಕ್ಷನ್ಗಳ ಅಭಿವೃದ್ಧಿ ಮಾಡಲಾಗುವುದು. ಬೇರೆ ಸಿಟಿಗಳಿಗೆ ಹೋಲಿಸಿದ್ರೆ ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಏರಿಕೆಯಿದೆ. ಖಾಸಗಿ ವಾಹನಗಳ ಸಂಖ್ಯೆ ಏರಿಕೆಯಾಗಿದೆ. ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಬಳಕೆಗೆ ಉತ್ತೇಜನ ನೀಡುತ್ತೇವೆ. ಪಿಣ್ಯಾ ಫ್ಲೈಓವರ್ ಮೇಲೆ ಭಾರಿ ವಾಹನಗಳ ಓಡಾಟಕ್ಕೆ ಅವಕಾಶ ನೀಡಬೇಕು. ಇಲ್ಲದಿದ್ದರೆ ಕೆಳಭಾಗದಲ್ಲಿ ಟ್ರಾಫಿಕ್ ಜಾಮ್ ಆಗುತ್ತೆ. ಎನ್ಹೆಚ್ಐ ಜೊತೆ ಮಾತುಕತೆ ಮಾಡುತ್ತೇವೆ.
ಟ್ರಾಫಿಕ್ ಪೊಲೀಸರ ಜೊತೆ ಚರ್ಚಿಸಿ ಸ್ಕೈವಾಕ್ ನಿರ್ಮಾಣ ಮಾಡುತ್ತೇವೆ. ಕೋಗಿಲು ಕ್ರಾಸ್ ಹಿಂದೆ ರಾಜಕಾಲುವೆ ಮೇಲೆ ನಾಲ್ಕೈದು ಮನೆ ಕಟ್ಟಿಕೊಂಡಿದ್ದಾರೆ. ಅದನ್ನೆಲ್ಲ ತೆರವು ಮಾಡಬೇಕಿದೆ. ಪೈ ಲೇಔಟ್ನಲ್ಲಿ ಪ್ರತಿಭಾರಿ ಮಳೆ ಬಂದಾಗ ಪ್ರವಾಹವಾಗುತ್ತದೆ. ಶೀಘ್ರದಲ್ಲೇ ಕೆಲ ಪ್ರಾಪರ್ಟಿಗಳ ತೆರವು ಮಾಡಲು ಪ್ಲಾನ್ ಮಾಡಲಾಗುವುದು ಎಂದಿದ್ದಾರೆ. ಪೈಥಾನ್ ಯಂತ್ರಕ್ಕೆ ಒಂದು ಚದರ ಮೀಟರ್ ರಸ್ತೆ ಗುಂಡಿ ಮುಚ್ಚಲು 598 ರೂ.ಗೆ ಗುತ್ತಿಗೆ ನೀಡಲಾಗುತ್ತಿದ್ದು, ಸಾಮಾನ್ಯವಾಗಿ ಬೆಂಗಳೂರಿನಲ್ಲಿ 2.50 ಚದರ ಮೀಟರ್ ರಸ್ತೆ ಗುಂಡಿಗಳಿವೆ. ಇವೆಲ್ಲಾ ಕಾರ್ಯಗತವಾದರೆ ಟ್ರಾಫಿಕ್ ಸಮಸ್ಯೆ ತಗ್ಗಬಹುದು, ಆದರೆ ಇದು ಸಾಧ್ಯವಾದೀತಾ? ಈ ಕುರಿತಾದ ಚರ್ಚೆಯನ್ನು ಆ್ಯಂಕರ್ ಆನಂದ್ ಬುರಲಿ ಇಂದಿನ ಟಿವಿ9 ಡಿಜಿಟಲ್ ಲೈವ್ನಲ್ಲಿ ನಡೆಸಿಕೊಡಲಿದ್ದಾರೆ. ಮಧ್ಯಾಹ್ನ 3.30 ಕ್ಕೆ ನಡೆಯುವ ಈ ಕಾರ್ಯಕ್ರಮಕ್ಕೆ ನಿಮಗೆ ಸ್ವಾಗತ. TV 9 Kannada Digital Live