ಹೊಸ ಶಾಸಕನ ಮುಂದಿವೆ ಹಲವು ಸವಾಲು, ಜನರ ನಿರೀಕ್ಷೆಗೆ ಸ್ಪಂದಿಸುವರೇ ಯೋಗೇಶ್ವರ್?
ಚನ್ನಪಟ್ಟಣವನ್ನು ಅಭಿವೃದ್ಧಿ ಮಾಡುವ ಅಜೆಂಡಾದೊಂದಿಗೆ ಗೆದ್ದಿರುವ ಯೋಗೇಶ್ವರ್ ಎದುರು ಹಲವಾರು ಸವಾಲುಗಳಿವೆ. ಪಟ್ಟಣದ ಬಸ್ ನಿಲ್ದಾಣವನ್ನು ನವೀಕರಿಸುವ ಬಗ್ಗೆ ಅವರೇ ಪ್ರಚಾರದಲ್ಲಿ ಹೇಳಿಕೊಂಡಿದ್ದರು. ಅಧಿಕಾರದಲ್ಲಿ ಅವರದ್ದೇ ಸರ್ಕಾರ ಇರುವುದರಿಂದ ಮತ್ತು ಕ್ಷೇತ್ರದ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ವಿಶೇಷ ಆಸ್ಥೆ ವಹಿಸಿರುವುದರಿಂದ ಜನರಲ್ಲಿ ಸಹಜವಾಗೇ ನಿರೀಕ್ಷೆ ಹುಟ್ಟಿಕೊಂಡಿವೆ.
ರಾಮನಗರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಅಯ್ಕೆಯಾಗಿರುವ ಕಾಂಗ್ರೆಸ್ ಪಕ್ಷದ ಸಿಪಿ ಯೋಗೇಶ್ವರ್ ಚನ್ನಪಟ್ಟಣದಲ್ಲಿ ಇಂದು ಶಾಸಕರ ಕಚೇರಿಯನ್ನು ಉದ್ಘಾಟಿಸಿದರು. ಅವರು ಕಚೇರಿy ಬಾಗಿಲಿಗೆ ಕಟ್ಟಿದ ರಿಬ್ಬನ್ ಕಟ್ ಮಾಡುವ ಮೊದಲು ಅರ್ಚಕರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಶಾಸಕರಿಂದಲೂ ಮಂತ್ರವಾಕ್ಯಗಳನ್ನು ಹೇಳಿಸಿದರು. ಕಚೇರಿ ಉದ್ಘಾಟನೆಗೆ ಮುನ್ನ ಅಲ್ಲಿಗೆ ನಡೆದು ಬಂದ ಹೊಸ ಶಾಸಕನನ್ನು ಅಭಿಮಾನಿಗಳು ಹೂಹಾರ ಹಾಕಿ ಗೌರವಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸಕ್ಕೆ ಇದ್ದಕ್ಕಿದ್ದಂತೆ ಭೇಟಿ ನೀಡಿ ಆಶ್ಚರ್ಯ ಮೂಡಿಸಿದ ಯೋಗೇಶ್ವರ್
Published on: Nov 29, 2024 01:51 PM