ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ಗೆ ಜೈ: ಮತ್ತೆ ಮೊಳಗಿತು ಘೋಷಣೆ

Edited By:

Updated on: Jul 26, 2025 | 6:13 PM

ಅಂತೂ ಇಂತೂ ಕರ್ನಾಟಕ ಕಾಂಗ್ರೆಸ್​​​ನಲ್ಲಿ ಎಲ್ಲವೂ ಸರಿ ಹೋಯಿತು ಎಂಬ ಹೊತ್ತಿನಲ್ಲಿಯೇ ಡಿಸಿಎಂ ಡಿಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಎಂಬ ಕೂಗು ಮತ್ತೆ ಕೇಳಿಬಂದಿದೆ. ಹಾಸನದಲ್ಲಿ ಡಿಕೆಶಿ ಬೆಂಬಲಿಗರು, ‘‘ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗೆ ಜೈ’’ ಎಂದು ಘೋಷಣೆ ಕೂಗಿದ್ದಾರೆ. ವಿಡಿಯೋ ಇಲ್ಲಿದೆ.

ಹಾಸನ, ಜುಲೈ 26: ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ನಡೆದ ಫಲಾನುಭವಿಗಳ ಸಮಾವೇಶದಲ್ಲಿ ಭಾಗವಹಿಸಿದ ನಂತರ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೋಡಿ ಮಠಕ್ಕೆ ಬೇಟಿ ನೀಡಿದರು. ಕೋಡಿ ಮಠದಲ್ಲಿ ನೀಲಮಜ್ಜಯ್ಯ ಹಾಗೂ ಶಿವಲಿಂಗಜ್ಜಯ್ಯರ ಗದ್ದುಗೆಗೆ ನಮಿಸಿದರು. ಇದೇ ವೇಳೆ, ಅವರ ಬೆಂಬಲಿಗರು, ‘‘ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ಗೆ ಜೈ’’ ಎಂದು ಘೋಷಣೆ ಕೂಗಿದರು. ವಿಡಿಯೋ ಇಲ್ಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ