ನನಗಿಂತ ಮೃದು ಸ್ವಭಾವದವನಾಗಿರುವ ನಿಖಿಲ್ ನಿಮ್ಮ ಮನೆಮಗನಂತಿರುತ್ತಾನೆ: ಹೆಚ್ ಡಿ ಕುಮಾರಸ್ವಾಮಿ

|

Updated on: Nov 02, 2024 | 7:38 PM

ರಾಮನಗರ ಮತ್ತು ಚನ್ನಪಟ್ಟಣದ ನಡುವೆ ಕೈಗಾರಿಕೆಯೊಂದನ್ನು ತರುವ ಯೋಚನೆ ಖಂಡಿತವಾಗಿಯೂ ಇದೆ, ಪ್ರಧಾನ ಮಂತ್ರಿಯವರ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ, ಅದು ಸ್ಥಾಪನೆಗೊಂಡರೆ ಈ ಭಾಗದ ಅನೇಕ ಯುವಕರಿಗೆ ಉದ್ಯೋಗಗಳ ಸೃಷ್ಟಿಯಾಗಲಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದರು.

ರಾಮನಗರ: ಚನ್ನಪಟ್ಟಣದಿಂದ ಶಾಸಕನಾದ ಬಳಿಕ ಕ್ಷೇತ್ರದಲ್ಲಿ ಹಲವಾರು ಸೇತುವೆ, ರಸ್ತೆ ಮತ್ತು ಶಾಲೆಗಳ ನಿರ್ಮಾಣ ಮಾಡಿದ್ದೇನೆ, ಹಿಂದೆ ವರದೇಗೌಡರನ್ನು ಬೆಳೆಸಿದಂತೆ ನನ್ನನ್ನು ಸಹ ಬೆಳೆಸಿದ್ದೀರಿ, ಅನಿವಾರ್ಯ ಕಾರಣಗಳಿಂದಾಗಿ ನಿಖಿಲ್ ಕುಮಾರಸ್ವಾಮಿಯನ್ನು ಉಪ ಚುನಾವಣೆಯಲ್ಲಿ ಕಣಕ್ಕಿಳಿಸಬೇಕಾಗಿ ಬಂದಿದೆ, ಅವನು ನನಗಿಂತ ಮೃದು ಸ್ವಭಾವದವನು, ನೀವು ಆಶೀರ್ವದಿಸಿ ಗೆಲ್ಲಿಸಿದರೆ ನಿಮ್ಮ ಮನೆಮಗನಂತಿರುತ್ತಾನೆ ಎಂದು ಹೆಚ್ ಡಿ ಕುಮಾರಸ್ವಾಮಿ ಕ್ಷೇತ್ರದ ಗ್ರಾಮವೊಂದರಲ್ಲಿ ಪ್ರಚಾರ ಮಾಡುತ್ತಾ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಜಿಟಿ ದೇವೇಗೌಡ ಮತ್ತು ತನ್ನ ನಡುವೆ ಮುನಿಸಿರುವದನ್ನು ಅಂಗೀಕರಿಸಿದ ಹೆಚ್​ಡಿ ಕುಮಾರಸ್ವಾಮಿ