ಚನ್ನಪಟ್ಟಣ ಉಪಚುನಾವಣೆ ಟಿಕೆಟ್​ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ನಿಖಿಲ್

| Updated By: ರಮೇಶ್ ಬಿ. ಜವಳಗೇರಾ

Updated on: Sep 04, 2024 | 8:17 PM

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಬೈ ಎಲೆಕ್ಷನ್​ ಟಿಕೆಟ್​ಗಾಗಿ ದೋಸ್ತಿಗಳಾದ ಜೆಡಿಎಸ್ -ಬಿಜೆಪಿ ನಡುವೆ ಭಾರೀ ಪೈಪೋಟಿ ನಡೆದಿದೆ. ಒಂದು ಕಡೆ ತಮಗೆ ಟಿಕಟ್​ ಬೇಕೆಂದು ಸಿಪಿ ಯೋಗೇಶ್ವರ್​ ಪಟ್ಟು ಹಿಡಿದಿದ್ದರೆ, ಮತ್ತೊಂದೆಡೆ ಜೆಡಿಎಸ್​​ ಬಿಟ್ಟುಕೊಡುವುದಿಲ್ಲ ಎನ್ನುವ ಹಠ ಹಿಡಿದಿದೆ. ಇದರ ಮಧ್ಯ ನಿಖಿಲ್ ಕುಮಾರಸ್ವಾಮಿ ಒಂದು ಸುಳಿವು ಕೊಟ್ಟಿದ್ದಾರೆ.

ಕೊಪ್ಪಳ, (ಸೆಪ್ಟೆಂಬರ್ 04): ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯ ಮೈತ್ರಿ ಟಿಕೆಟ್​ಗಾಗಿ ಭಾರೀ ಕಸತ್ತು ನಡೆದಿದೆ. ತಮಗೆ ಟಿಕೆಟ್ ಬೇಕೇ ಬೇಕು ಎಂದು ಬಿಜೆಪಿಯ ಸಿಪಿ ಯೋಗೇಶ್ವರ್ ಸಾಕಷ್ಟು ಕಸರತ್ತು ನಡೆಸಿದ್ದಾರೆ. ಮತ್ತೊಂದೆಡೆ ನಮ್ಮ ಕ್ಷೇತ್ರವನ್ನ ಯಾವುದೇ ಕಾರಣಕ್ಕೂ ಬಿಜೆಪಿಗೆ ಬಿಟ್ಟು ಕೊಡುವುದಿಲ್ಲ ಎನ್ನುವ ಹಠಕ್ಕೆ ಜೆಡಿಎಸ್ ಬಿದ್ದಿದೆ. ಈ ಸಂಬಂಧ ದೆಹಲಿಯಲ್ಲಿ ಬಿಜೆಪಿ ನಾಯಕರು ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ನಡುವೆ ಸಭೆಗಳ ಮೇಲೆ ಸಭೆಗಳು ನಡೆಯುತ್ತಿವೆ. ಇದೆಲ್ಲದರ ಮಧ್ಯ ಜೆಡಿಎಸ್​ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಫೋಟಕ ಸುಳಿವುವೊಂದನ್ನು ನೀಡಿದ್ದಾರೆ.

Published on: Sep 04, 2024 08:16 PM