ದರ್ಶನ್ ವಿಚಾರದಲ್ಲಿ ಪೊಲೀಸರು ನಡೆದುಕೊಂಡ ಬಗ್ಗೆ ಚೇತನ್ ನೇರ ಅಭಿಪ್ರಾಯ
ಕೊಲೆ ಆರೋಪಿಯಾಗಿ ಜೈಲು ಸೇರಿರುವ ದರ್ಶನ್ ವಿಚಾರದಲ್ಲಿ ಪೊಲೀಸರು ನಡೆದುಕೊಂಡ ರೀತಿ ಬಗ್ಗೆ ನಟ ‘ಆ ದಿನಗಳು’ ಚೇತನ್ ಅವರು ಮಾತನಾಡಿದ್ದಾರೆ. ‘ದರ್ಶನ್ ಅವರ ಒಂದು ಪ್ರಕರಣ ತೆಗೆದುಕೊಂಡು 9 ಅಧಿಕಾರಿಗಳನ್ನು ಅಮಾನತು ಮಾಡೋದು ಸರಿ ಅಲ್ಲ. ಇಂಥದ್ದು ಆಗದೇ ಇರುವ ರೀತಿಯಲ್ಲಿ ನೋಡಿಕೊಳ್ಳಬೇಕು’ ಎಂದು ಚೇತನ್ ಹೇಳಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ಗೆ ರಾಜಾತಿಥ್ಯ ನೀಡಿದ್ದಕ್ಕೆ 9 ಪೊಲೀಸ್ ಅಧಿಕಾರಿಗಳನ್ನು ಸರ್ಕಾರ ಅಮಾನತು ಮಾಡಿತು. ಈ ಕ್ರಮದ ಕುರಿತು ನಟ ಚೇತನ್ ಅಹಿಂಸಾ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಪೊಲೀಸರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಪೊಲೀಸ್ ಮತ್ತು ಜೈಲಿನ ವ್ಯವಸ್ಥೆ ಸುಧಾರಣೆ ಆಗಬೇಕು. ಅದನ್ನು ಮಾಡಲು ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ರಾಜಕೀಯ ಇಚ್ಛಾಶಕ್ತಿ ಬೇಕು’ ಎಂದಿದ್ದಾರೆ ಚೇತನ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos