AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹೇಮಾ ಸಮಿತಿ ರೀತಿಯೇ ಸ್ಯಾಂಡಲ್​ವುಡ್​ನಲ್ಲೂ ಒಂದು ಸಮಿತಿಯ ಅಗತ್ಯವಿದೆ’; ಶ್ರುತಿ ಹರಿಹರನ್

ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಸ್ಥಿತಿ-ಗತಿ ಅರಿಯಲು ರಚಿಸಲಾಗಿದ್ದ ಹೇಮಾ ಸಮಿತಿಯ ವರದಿಯನ್ನು ಕೇರಳ ಸರ್ಕಾರ ಪ್ರಕಟಿಸಿತ್ತು. ಇದರಲ್ಲಿ ಕೆಲವು ಆಘಾತಕಾರಿ ಅಂಶಗಳು ಹೊರಬಂದಿದ್ದವು. ಈ ರೀತಿಯ ಸಮಿತಿ ಕನ್ನಡ ಚಿತ್ರಂಗಕ್ಕೂ ಅಗತ್ಯವಿದೆ ಎಂದು ಶ್ರುತಿ ಹರಿಹರನ್ ಹೇಳಿದ್ದಾರೆ.

‘ಹೇಮಾ ಸಮಿತಿ ರೀತಿಯೇ ಸ್ಯಾಂಡಲ್​ವುಡ್​ನಲ್ಲೂ ಒಂದು ಸಮಿತಿಯ ಅಗತ್ಯವಿದೆ’; ಶ್ರುತಿ ಹರಿಹರನ್
ಶ್ರುತಿ ಹರಿಹರನ್
ರಾಜೇಶ್ ದುಗ್ಗುಮನೆ
|

Updated on:Sep 03, 2024 | 1:07 PM

Share

ಜಸ್ಟೀಸ್ ಹೇಮಾ ಸಮಿತಿ ವರದಿ ಸಂಚಲನ ಸೃಷ್ಟಿ ಮಾಡಿದೆ. ಮಲಯಾಳಂ ಚಿತ್ರರಂಗದಲ್ಲಿ ಹೀರೋಯಿನ್​ಗಳು ಎದುರಿಸುತ್ತಿರುವ ಲೈಂಗಿಕ ಕಿರುಕುಳ ಹಾಗೂ ಶೋಷಣೆಗಳ ಬಗ್ಗೆ ಈ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಈ ವರದಿ 2019ರಲ್ಲೇ ಸರ್ಕಾರದ ಕೈ ಸೇರಿತ್ತು. ಈಗ ವರದಿಯ ವಿಚಾರಗಳನ್ನು ಬಹಿರಂಗ ಮಾಡಲಾಗಿದೆ. ಈ ಬಗ್ಗೆ ಅನೇಕರು ಮಾತನಾಡುತ್ತಿದ್ದಾರೆ. ಕನ್ನಡದ ನಟಿ ಶ್ರುತಿ ಹರಿಹರನ್ ಕೂಡ ಈ ಬಗ್ಗೆ‘ಟಿವಿ9 ಕನ್ನಡ ಡಿಜಿಟಲ್​’ಗೆ  ಪ್ರತಿಕ್ರಿಯೆ ನೀಡಿದ್ದು, ಕನ್ನಡದಲ್ಲಿ ಈ ರೀತಿಯ ಸಮಿತಿಯ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ನನಗೆ ಹೇಮಾ ಸಮಿತಿಯ ವರದಿ​ ಬಗ್ಗೆ ತುಂಬಾನೇ ಗೌರವ ಇದೆ. ಇಷ್ಟು ದಿನಗಳಿಂದ ಈ ಬಗ್ಗೆ ನಾವು ಇದನ್ನು ಮುಚ್ಚುಮರೆಯಲ್ಲಿ ಮಾತನಾಡುತ್ತಿದ್ದೆವು. ಸೆಕ್ಷುವಲ್ ಫೇವರ್ ಅತಿಯಾಗಿದೆ ಎಂದು ಹೇಳುತ್ತಿದ್ದೆವು. ಈ ವಿಚಾರವನ್ನು ಆಪ್ತ ಬಳಗದಲ್ಲಿ ಕೆಲವರು ಜೋಕ್ ಕೂಡ ಮಾಡುತ್ತಿದ್ದರು. ಆದರೆ, ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದರೆ ನಿಜಕ್ಕೂ ಹೆಮ್ಮೆಯ ವಿಚಾರ’ ಎಂದಿದ್ದಾರೆ ಅವರು.

‘ಈ ವರದಿ ಮಲಯಾಳಂ ಚಿತ್ರರಂಗದ ಗೌರವ ಕಡಿಮೆ ಮಾಡುತ್ತಿದೆ, ಮಲಯಾಳಂ ಚಿತ್ರರಂಗದ ಘನತೆಗೆ ಧಕ್ಕೆ ತಂದಿದೆ’ ಎಂದು ಮಾತನಾಡಿಕೊಂಡಿದ್ದೂ ಇದೆ. ಆದರೆ, ಇದನ್ನು ಶ್ರುತಿ ಹರಿಹರನ್ ತಪ್ಪು ಎಂದಿದ್ದಾರೆ. ‘ಇದು ಖಂಡಿತವಾಗಿಯೂ ತಪ್ಪು. ಆ ರೀತಿ ನೋಡಬಾರದು. ಸಿನಿಮಾ ಕಲೆಗೆ ಸಂಬಂಧಿಸಿದ್ದು. ಅದರೊಳಗೆ ಇರುವ ಕೆಲವ ವಿಚಾರಗಳನ್ನು ಸ್ವಚ್ಛ ಮಾಡಲು ಇದು ಸರಿಯಾದ ಸಮಯ. ನಮ್ಮ ಮನೆಯನ್ನು ನಾವು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು’ ಎಂದಿದ್ದಾರೆ ಶ್ರುತಿ ಹರಿಹರನ್.

ಸಮಂತಾ ಅವರು ಈ ಬಗ್ಗೆ ಮಾತನಾಡುವಾಗ ತೆಲುಗು ಚಿತ್ರರಂಗದಲ್ಲೂ ಈ ರೀತಿಯ ಸಮಿತಿಯ ಅಗತ್ಯವಿದೆ ಎಂದು ಹೇಳಿದ್ದರು. ಅದೇ ರೀತಿ, ಕನ್ನಡದಲ್ಲೂ ಈ ರೀತಿಯ ಸಮಿತಿಯ ರಚನೆ ಆಗಬೇಕು ಎಂದು ಶ್ರುತಿ ಹರಿಹರನ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ‘ಸಂಭವಾಮಿ ಯುಗೇ ಯುಗೇ’ ಸಿನಿಮಾದ ಸಾಂಗ್​ ಬಿಡುಗಡೆ ಮಾಡಿದ ಶ್ರುತಿ ಹರಿಹರನ್

ಶ್ರುತಿ ಹರಿಹರನ್ ಸಿನಿಮಾ ವಿಚಾರಗಳ ಬಗ್ಗೆಯೂ ಮಾತನಾಡಿದ್ದಾರೆ. ‘ಚೀತಾ ಹೆಸರಿನ ಸಿನಿಮಾಗೆ ಸಹಿ ಹಾಕಿದ್ದೆ. ಅದರ ಕೆಲಸ ಮುಗಿಯುತ್ತಾ ಬಂತು. ತಮಿಳಿನಲ್ಲಿ ಎರಡುಮೂರು ಸಿನಿಮಾಗಳನ್ನು ಮಾಡುತ್ತಿದ್ದೇನೆ’ ಎಂದಿದ್ದಾರೆ. ಅವರು ಕನ್ನಡದಲ್ಲಿ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:02 pm, Tue, 3 September 24