‘ಕೃಷ್ಣಂ ಪ್ರಣಯ ಸಖಿ’ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಗಳಿಸಿದ್ದು ಇಷ್ಟೊಂದಾ?
ಶ್ರೀನಿವಾಸರಾಜು ಅವರ ನಿರ್ದೇಶನದ, ಪ್ರಶಾಂತ್ ಜಿ. ರುದ್ರಪ್ಪ ಅವರು ನಿರ್ಮಾಣ ಮಾಡಿದ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ವಿದೇಶದಲ್ಲೂ ಈ ಸಿನಿಮಾ ಅಬ್ಬರಿಸಿದೆ. ಈ ಚಿತ್ರದ ಒಟ್ಟಾರೆ ಗಳಿಕೆ ಒಳ್ಳೆಯ ರೀತಿಯಲ್ಲಿ ಇದೆ.
ಕನ್ನಡದಲ್ಲಿ ಇತ್ತೀಚೆಗೆ ರಿಲೀಸ್ ಆದ ಅತ್ಯುತ್ತಮ ಫ್ಯಾಮಿಲಿ ಎಂಟರ್ಟೇನ್ ಸಿನಿಮಾ ಎಂದರೆ ಅದು ‘ಕೃಷ್ಣಂ ಪ್ರಣಯ ಸಖಿ’. ಗಣೇಶ್, ಶರಣ್ಯಾ ಶೆಟ್ಟಿ, ಮಾಳವಿಕಾ ನಾಯರ್ ಮೊದಲಾದವರು ನಟಿಸಿರೋ ಈ ಸಿನಿಮಾ ಗೆದ್ದು ಬೀಗಿದೆ. ಗಣೇಶ್ ವೃತ್ತಿ ಜೀವನಕ್ಕೆ ಈ ಚಿತ್ರ ಮೈಲೇಜ್ ಕೊಟ್ಟಿದೆ. ಪರಭಾಷೆಯ ಹಲವು ಸಿನಿಮಾಗಳ ರಿಲೀಸ್ ಮಧ್ಯೆಯೂ ಈ ಸಿನಿಮಾ ಇನ್ನೂ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗಳಿಕೆ ಮಾಡಿದೆ.
ಬಾಕ್ಸ್ ಆಫೀಸ್ ಬಗ್ಗೆ ಲೆಕ್ಕ ಕೊಡುವ sacnilk ವರದಿ ಮಾಡಿರುವ ಪ್ರಕಾರ ‘ಕೃಷ್ಣಂ ಪ್ರಣಯ ಸಖಿ’ ಈವರೆಗೆ ವಿಶ್ವಮಟ್ಟದಲ್ಲಿ 17.3 ಕೋಟಿ ರೂಪಾಯಿ (ಗ್ರಾಸ್ ಕಲೆಕ್ಷನ್) ಮಾಡಿದೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ 20 ಕೋಟಿ ರೂಪಾಯಿ ಗಳಿಕೆ ಮಾಡಲು ಒದ್ದಾಡುತ್ತಿರುವಾಗ ಕನ್ನಡದ ಸಿನಿಮಾಗಳು ಈ ರೀತಿಯ ಕಲೆಕ್ಷನ್ ಮಾಡುತ್ತಿರುವುದು ನಿಜಕ್ಕೂ ವಿಶೇಷ ಎನ್ನಬಹುದು.
ಗಣೇಶ್ ಅವರಿಗೆ ಇತ್ತೀಚೆಗೆ ದೊಡ್ಡ ಗೆಲುವು ಸಿಕ್ಕಿರಲಿಲ್ಲ. ಒಂದು ದೊಡ್ಡ ಯಶಸ್ಸಿಗಾಗಿ ಅವರು ಕಾದಿದ್ದರು. ಹೀಗಾಗಿ, ‘ಕೃಷ್ಣಂ ಪ್ರಣಯ ಸಖಿ’ ಯಶಸ್ಸು ಅವರ ಜನಪ್ರಿಯತೆ ಹೆಚ್ಚಿಸಿದೆ. ಮಾಳವಿಕಾ ನಾಯರ್ ಅವರು ಕನ್ನಡಕ್ಕೆ ಬಂದು ಮಿಂಚಿದ್ದಾರೆ. ಈ ಚಿತ್ರದ ಗೆಲುವು ಕನ್ನಡ ಚಿತ್ರರಂಗಕ್ಕೆ ಹೊಸ ಸ್ಫೂರ್ತಿ ನೀಡಿದೆ.
ಇದನ್ನೂ ಓದಿ: ದುಬೈನಲ್ಲಿ ‘ಕೃಷ್ಣಂ ಪ್ರಣಯ ಸಖಿ’ ವಿಶೇಷ ಪ್ರದರ್ಶನ; ಗಣೇಶ್ ಸಿನಿಮಾ ಸೂಪರ್ ಹಿಟ್
ಶ್ರೀನಿವಾಸರಾಜು ಅವರ ನಿರ್ದೇಶನದಲ್ಲಿ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಮೂಡಿಬಂದಿದೆ. ಪ್ರಶಾಂತ್ ಜಿ. ರುದ್ರಪ್ಪ ಅವರು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಚಿತ್ರ ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಗಮನ ಸೆಳೆದಿದೆ. ಅಬುದಾಬಿ ಮತ್ತು ದುಬೈನಲ್ಲೂ ಸಿನಿಮಾದ ಪ್ರದರ್ಶನ ಇಡಲಾಗಿತ್ತು. ಅಲ್ಲಿರೋ ಕನ್ನಡಿಗರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.