ಕರ್ನಾಟಕ ಸಂಗೀತದ ದಿಗ್ಗಜ ಮುತ್ತುಸ್ವಾಮಿ ದೀಕ್ಷಿತರ್ 250ನೇ ಜಯಂತಿ ಪ್ರಯುಕ್ತ 250 ರೂ. ನಾಣ್ಯ ಬಿಡುಗಡೆ ಮಾಡಿದ ಸಚಿವೆ ನಿರ್ಮಲಾ ಸೀತಾರಾಮನ್

Updated on: Nov 03, 2026 | 9:31 PM

ಮುತ್ತುಸ್ವಾಮಿ ದೀಕ್ಷಿತರ್ ಅವರು ಭಾರತೀಯ ಶಾಸ್ತ್ರೀಯ ಸಂಗೀತ, ಸಂಸ್ಕೃತ ಹಾಗೂ ದರ್ಶನ ಶಾಸ್ತ್ರಗಳನ್ನು ಮೇಳೈಸಿ 450ಕ್ಕೂ ಹೆಚ್ಚು ಅಮರ ಕೃತಿಗಳನ್ನು ರಚಿಸಿದ್ದಾರೆ. ತಮ್ಮ ಜೀವನದ ಸುದೀರ್ಘ ಅವಧಿಯನ್ನು ಅವರು ಕಾಶಿಯಲ್ಲಿ ಕಳೆದು ಸಾಂಸ್ಕೃತಿಕ ಹಾಗೂ ಸಂಗೀತ ಸಾಧನೆ ಮಾಡಿದ್ದರಿಂದ, ಈ ನಾಣ್ಯ ಬಿಡುಗಡೆ ಕಾರ್ಯಕ್ರಮವನ್ನು ವಾರಾಣಸಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಮುಂಬೈ ಮಿಂಟ್ ತಯಾರಿಸಿರುವ ಈ 250 ರೂ. ನಾಣ್ಯವು ಸಾರ್ವಜನಿಕ ಚಲಾವಣೆಗೆ ಲಭ್ಯವಿರುವುದಿಲ್ಲ. ಬದಲಾಗಿ, ನಾಣ್ಯ ಸಂಗ್ರಾಹಕರು ಮತ್ತು ಸಂಗೀತ ಪ್ರೇಮಿಗಳು 'ಇಂಡಿಯಾ ಗೌರ್ನಮೆಂಟ್ ಮಿಂಟ್'ನ ಅಧಿಕೃತ ವೆಬ್‌ಸೈಟ್ ಮೂಲಕ ಇದನ್ನು ಬುಕ್ ಮಾಡಿ ಖರೀದಿಸಬಹುದಾಗಿದೆ.

ವಾರಾಣಸಿ, ನವೆಂಬರ್ 3: ಕರ್ನಾಟಕ ಸಂಗೀತ ಪ್ರಕಾರದ ತ್ರಿಮೂರ್ತಿಗಳಲ್ಲಿ ಒಬ್ಬರಾದ ಮಹಾನ್ ವಾಗ್ಗೇಯಕಾರ ಶ್ರೀ ಮುತ್ತುಸ್ವಾಮಿ ದೀಕ್ಷಿತರ್ ಅವರ 250ನೇ ಜನ್ಮೋತ್ಸವದ ಸವಿನೆನಪಿಗಾಗಿ ಕೇಂದ್ರ ಆರ್ಥಿಕ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು 250 ರೂ. ಮುಖಬೆಲೆಯ ವಿಶೇಷ ಸ್ಮಾರಕ ನಾಣ್ಯವನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ. ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಐಐಟಿ-ಬಿಎಚ್‌ಯುನ ‘ಸ್ವಾತಂತ್ರ್ಯ ಭವನ’ದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಈ ನಾಣ್ಯವನ್ನು ಅನಾವರಣಗೊಳಿಸಲಾಯಿತು.

ಮುತ್ತುಸ್ವಾಮಿ ದೀಕ್ಷಿತರ್ ಅವರು ಭಾರತೀಯ ಶಾಸ್ತ್ರೀಯ ಸಂಗೀತ, ಸಂಸ್ಕೃತ ಹಾಗೂ ದರ್ಶನ ಶಾಸ್ತ್ರಗಳನ್ನು ಮೇಳೈಸಿ 450ಕ್ಕೂ ಹೆಚ್ಚು ಅಮರ ಕೃತಿಗಳನ್ನು ರಚಿಸಿದ್ದಾರೆ. ತಮ್ಮ ಜೀವನದ ಸುದೀರ್ಘ ಅವಧಿಯನ್ನು ಅವರು ಕಾಶಿಯಲ್ಲಿ ಕಳೆದು ಸಾಂಸ್ಕೃತಿಕ ಹಾಗೂ ಸಂಗೀತ ಸಾಧನೆ ಮಾಡಿದ್ದರಿಂದ, ಈ ನಾಣ್ಯ ಬಿಡುಗಡೆ ಕಾರ್ಯಕ್ರಮವನ್ನು ವಾರಾಣಸಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಮುಂಬೈ ಮಿಂಟ್ ತಯಾರಿಸಿರುವ ಈ 250 ರೂ. ನಾಣ್ಯವು ಸಾರ್ವಜನಿಕ ಚಲಾವಣೆಗೆ ಲಭ್ಯವಿರುವುದಿಲ್ಲ. ಬದಲಾಗಿ, ನಾಣ್ಯ ಸಂಗ್ರಾಹಕರು ಮತ್ತು ಸಂಗೀತ ಪ್ರೇಮಿಗಳು ‘ಇಂಡಿಯಾ ಗೌರ್ನಮೆಂಟ್ ಮಿಂಟ್’ನ ಅಧಿಕೃತ ವೆಬ್‌ಸೈಟ್ ಮೂಲಕ ಇದನ್ನು ಬುಕ್ ಮಾಡಿ ಖರೀದಿಸಬಹುದಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More