ಕಾಂಗ್ರೆಸ್ ಪದಾಧಿಕಾರಿಗಳಿಗೆ ಸಚಿವ ಶಿವಲಿಂಗೇಗೌಡ ಭರ್ಜರಿ ಗಿಫ್ಟ್
ವರ್ಷಕ್ಕೊಮ್ಮೆ ದರ್ಶನ ಕರುಣಿಸುವ ಹಾಸನಾಂಬೆ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಇನ್ನೊಂದೆಡೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ತಮ್ಮ ಆಪ್ತರಿಗೆ ಬಂಪರ್ ಗಿಫ್ಟ್ ನೀಡಿದ್ದಾರೆ. ಹೌದು...ಹಾಸನಾಂಬೆ ದರ್ಶನಕ್ಕೆ ಸಚಿವ ಶಿವಲಿಂಗೇಗೌಡ್ರು ತಮ್ಮ ಆಪ್ತರಿಗಾಗಿ 5 ಲಕ್ಷ ರೂಪಾಯಿ ನೀಡಿ 500 ಟಿಕೆಟ್ ಖರೀದಿಸಿದ್ದಾರೆ.
ಹಾಸನ, (ನವೆಂಬರ್ 03): ವರ್ಷಕ್ಕೊಮ್ಮೆ ದರ್ಶನ ಕರುಣಿಸುವ ಹಾಸನಾಂಬೆ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಇನ್ನೊಂದೆಡೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ತಮ್ಮ ಆಪ್ತರಿಗೆ ಬಂಪರ್ ಗಿಫ್ಟ್ ನೀಡಿದ್ದಾರೆ. ಹೌದು…ಹಾಸನಾಂಬೆ ದರ್ಶನಕ್ಕೆ ಸಚಿವ ಶಿವಲಿಂಗೇಗೌಡ್ರು ತಮ್ಮ ಆಪ್ತರಿಗಾಗಿ 5 ಲಕ್ಷ ರೂಪಾಯಿ ನೀಡಿ 500 ಟಿಕೆಟ್ ಖರೀದಿಸಿದ್ದಾರೆ. ಖುದ್ದು ತಾವೇ ಕೌಂಟರ್ಗೆ ತೆರಳಿ 1 ಸಾವಿರ ರೂ. ಮೌಲ್ಯದ 500 ಟಿಕೆಟ್ ಖರೀದಿಸಿದ್ದು, ಬಳಿಕ ಟಿಕೆಟ್ ಗಳನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಅವರಿಗೆ ಹಸ್ತಾಂತರಿಸಿದರು. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಶಿವಲಿಂಗೇಗೌಡ, ಹೆಚ್ಚುವರಿ ಟಿಕೆಟ್ ಪ್ರಿಂಟ್ ಮಾಡಿಸಲು ಆಗಲ್ಲ. ಹೆಚ್ಚು ಟಿಕೆಟ್ ಹಂಚಿದರೆ ಸಾಮಾನ್ಯ ಭಕ್ತರಿಗೆ ತೊಂದರೆ ಆಗುತ್ತದೆ. ಹೀಗಾಗಿ ಪಕ್ಷದ ಪದಾಧಿಕಾರಿಗಳಿಗೆ 500 ಟಿಕೆಟ್ ಖರೀದಿಸಿದ್ದೇನೆ ಎಂದಿದ್ದಾರೆ.

