ನನ್ನ ಮತ್ತು ಕುಮಾರಸ್ವಾಮಿ ನಡುವೆ ರಾಜಕೀಯ ವೈಷಮ್ಯವಿರಲಿಲ್ಲ; ಬೇರೆ ಬೇರೆ ಪಕ್ಷಗಳಲ್ಲಿದ್ದೆವು, ಅಷ್ಟೇ: ಸಿಪಿ ಯೋಗೇಶ್ವರ್

|

Updated on: Mar 12, 2024 | 5:32 PM

ಕಾರ್ಯಕರ್ತರು ಸಮಾವೇಶಕ್ಕಾಗಿ ಕಾತುರರಾಗಿದ್ದಾರೆ ಎಂದು ರಾಮನಗರಲ್ಲಿಂದು ಮಾಧ್ಯಮದವರವ ಜೊತೆ ಮಾತಾಡುವಾಗ ಹೇಳಿದ ಯೋಗೇಶ್ವರ್, ತನ್ನ ಮತ್ತು ಕುಮಾರಸ್ವಾಮಿ ನಡುವೆ ರಾಜಕೀಯ ವೈಷಮ್ಯವೇನೂ ಇಲ್ಲ, ಇಬ್ಬರೂ ಬೇರೆ ಬೇರೆ ಪಕ್ಷದವರಾಗಿದ್ದೆವು ಎಂದರು. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಪೂರ್ಣ ಜನಾಬ್ದಾರಿ ತಾನೇ ಹೊತ್ತುಕೊಳ್ಳುವುದಾಗಿ ಯೋಗೇಶ್ವರ್ ಹೇಳಿದರು.

ರಾಮನಗರ: ಕೇವಲ ಒಂಭತ್ತು ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮತ್ತು ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ (CP Yogeshwar) ಚನ್ನಪಟ್ಟಣ ಕ್ಷೇತ್ರದಲ್ಲಿ ಎದುರಾಳಿಗಳು ಮತ್ತು ಬದ್ಧ ವೈರಿಗಳು. ಆಗ ಕುಮಾರಸ್ವಾಮಿ 15,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದರು. ಬದಲಾಗಿರುವ ರಾಜಕೀಯ ಸನ್ನಿವೇಶದಲ್ಲಿ (changed political equation) ಅವರಿಬ್ಬರು ದೋಸ್ತಿಗಳು. ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಏರ್ಪಟ್ಟ ನಂತರ ಕಾಂಗ್ರೆಸ್ ಎರಡು ಪಕ್ಷಗಳಿಗೆ ಸಮಾನ ವೈರಿ. ಯೋಗೇಶ್ವರ್ ಮತ್ತು ಕುಮಾರಸ್ವಾಮಿ ಸೇರಿ ರಾಮನಗರದಲ್ಲಿ ಮೈತ್ರಿ ಸಮಾವೇಶವೊಂದನ್ನು ಆಯೋಜಿಸಲಿದ್ದು, ಕುಮಾರಸ್ವಾಮಿ ದೆಹಲಿಗೆ ಹೋಗಿ ವಾಪಸ್ಸಾದ ಬಳಿಕ ದಿನಾಂಕವನ್ನು ನಿಗದಿಗೊಳಿಸಲಾಗುವುದಂತೆ. ಕಾರ್ಯಕರ್ತರು ಸಮಾವೇಶಕ್ಕಾಗಿ ಕಾತುರರಾಗಿದ್ದಾರೆ ಎಂದು ರಾಮನಗರಲ್ಲಿಂದು ಮಾಧ್ಯಮದವರವ ಜೊತೆ ಮಾತಾಡುವಾಗ ಹೇಳಿದ ಯೋಗೇಶ್ವರ್, ತನ್ನ ಮತ್ತು ಕುಮಾರಸ್ವಾಮಿ ನಡುವೆ ರಾಜಕೀಯ ವೈಷಮ್ಯವೇನೂ ಇಲ್ಲ, ಇಬ್ಬರೂ ಬೇರೆ ಬೇರೆ ಪಕ್ಷದವರಾಗಿದ್ದೆವು ಎಂದರು. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಪೂರ್ಣ ಜನಾಬ್ದಾರಿ ತಾನೇ ಹೊತ್ತುಕೊಳ್ಳುವುದಾಗಿ ಯೋಗೇಶ್ವರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಹೆಚ್ ಡಿ ಕುಮಾರಸ್ವಾಮಿ ರಾಜ್ಯಮಟ್ಟದ ನಾಯಕರು: ನಿಖಿಲ್ ಕುಮಾರಸ್ವಾಮಿ 

Follow us on