ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಪತ್ನಿ ಪ್ರತ್ಯೇಕವಾಗಿ ಬದುಕಲಾರಂಭಿಸಿದ್ದಾರೆಯೇ? ಸುಳ್ಳು ಅಂತಾರೆ ಪತ್ನಿಯ ಆಪ್ತ ಗೆಳತಿ

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಪತ್ನಿ ಪ್ರತ್ಯೇಕವಾಗಿ ಬದುಕಲಾರಂಭಿಸಿದ್ದಾರೆಯೇ? ಸುಳ್ಳು ಅಂತಾರೆ ಪತ್ನಿಯ ಆಪ್ತ ಗೆಳತಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 16, 2022 | 10:47 PM

ಪ್ರಧಾನ ಮಂತ್ರಿ ಮತ್ತು ಬುಶ್ರಾ ಸಂಬಂಧದಲ್ಲಿ ಬಿರುಕು ಮೂಡಿದೆಯೆನ್ನುವ ವದಂತಿಗಳನ್ನು ಬುಶ್ರಾ ಅವರ ಆಪ್ತ ಸ್ನೇಹಿತೆ ಫರ್ಹಾ ಖಾನ್ ಸಾರಾಸಗಟು ತಳ್ಳಿ ಹಾಕಿದ್ದಾರೆ.

ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ (Imran Khan) ಮತ್ತು ಅವರ ಮೂರನೇ ಪತ್ನಿ ಬುಶ್ರಾ ಬೀಬಿ ಮನೇಕಾ (Bushra Bibi Maneka) ನಡುವಿನ ಸಂಬಂಧ ಹಳಸಿರುವ ಬಗ್ಗೆ ಅನೇಕ ವದಂತಿಗಳು ಹಬ್ಬಿವೆ. ಬುಶ್ರಾ ಅವರು ಇಮ್ರಾನ್ ಮನೆ ತೊರೆದು ಲಾಹೋರ್ನಲ್ಲಿರುವ ಒಬ್ಬ ಸ್ನೇಹಿತೆಯ ಜೊತೆ ವಾಸವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಖಾನ್ ಸಾಬ್ ಅವರ ಮೊದಲ ಇಬ್ಬರು ಪತ್ನಿಯರು-ಜೆಮಿಮಾ ಗೋಲ್ಡ್ಸ್ಮಿತ್ (Jemima Goldsmith) ಮತ್ತು ರೆಹಾಮ್ ಖಾನ್ (Reham Khan) ಅವರ ಹಾಗೆ ಯಾವತ್ತೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಬುಶ್ರಾ ಅವರು ಮನೆಯೊಳಗಡೆಯೇ ಇರಲು ಬಯಸುತ್ತಾರೆ.

ಪ್ರಧಾನ ಮಂತ್ರಿ ಮತ್ತು ಬುಶ್ರಾ ಸಂಬಂಧದಲ್ಲಿ ಬಿರುಕು ಮೂಡಿದೆಯೆನ್ನುವ ವದಂತಿಗಳನ್ನು ಬುಶ್ರಾ ಅವರ ಆಪ್ತ ಸ್ನೇಹಿತೆ ಫರ್ಹಾ ಖಾನ್ ಸಾರಾಸಗಟು ತಳ್ಳಿ ಹಾಕಿದ್ದಾರೆ. ಲಾಹೋರನಲ್ಲಿರುವ ತನ್ನ ಮನೆಯಲ್ಲಿ ಬುಶ್ರಾ ವಾಸಿಸುತ್ತಿದ್ದಾರೆ ಅಂತ ಹಬ್ಬಿರುವ ಸುದ್ದಿ ಅಪ್ಪಟ ಸುಳ್ಳು, ಅವರು ಇಸ್ಲಾಮಾಬಾದ್ ನಲ್ಲಿರುವ ಇಮ್ರಾನ್ ಖಾನ್ ಅವರ ಮನೆ ಬನಿ ಗಾಲದಲ್ಲಿ ಇದ್ದಾರೆ ಎಂದು ತಮ್ಮ ಟ್ವಿಟರ್ ಹ್ಯಾಂಡಲ್ ನಲ್ಲಿ ಫರ್ಹಾ ಹೇಳಿದ್ದಾರೆ. ದಂಪತಿಯ ಬಗ್ಗೆ ಸುಖಾಸುಮ್ಮನೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಬೇರೆಯವರ ವೈಯಕ್ತಿಕ ಬದುಕಿನ ಬಗ್ಗೆ ಹೀಗೆ ಸುಳ್ಳು ಸುದ್ದಿಗಳನ್ನು ಹಬ್ಬುವ ಕೀಳು ಹಂತಕ್ಕೆ ಯಾರೂ ಇಳಿಯಬಾರದು ಎಂದು ಫರ್ಹಾ ಹೇಳಿದ್ದಾರೆ.
ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಫರ್ಹಾ ಅವರು ಪಾಕಿಸ್ತಾನದ ಪ್ರಥಮ ಮಹಿಳೆ ನಿಕಟವರ್ತಿಯಾಗಿದ್ದು ಆಸ್ಪತ್ರೆ, ಆಶ್ರಮ ಮೊದಲಾದ ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಬುಶ್ರಾರೊಂದಿಗೆ ಹೋಗುತ್ತಾರೆ.

ಇಮ್ರಾನ್ ಖಾನ್ ಮತ್ತು ಬುಶ್ರಾ ಅವರ ನಡುವೆ ಎಲ್ಲವೂ ಸರಿಯಿಲ್ಲ ಅಂತ ವದಂತಿಗಳು ಹರಡಿರುವುದು ಇದು ಮೊದಲ ಸಲವೇನಲ್ಲ. 2018ರಲ್ಲಿ ಅವರು ಮದುವೆಯಾದ ಬಳಿಕೆ ಅಂಥ ವದಂತಿಗಳು ಜನರ ಕಿವಿಗೆ ಬೀಳುತ್ತಲೇ ಇವೆ.

ಇದನ್ನೂ ಓದಿ:   ಕೇರಳ: 22 ವರ್ಷ ಜತೆಯಾಗಿ ನಿಂತ ವಿಶ್ವಾಸಾರ್ಹ ಸಿಬ್ಬಂದಿಗೆ ಮರ್ಸಿಡಿಸ್ ಎಸ್​ಯುವಿ ಉಡುಗೊರೆ ನೀಡಿದ ಬಾಸ್