ಈಗಿರುವ ಗಾಂಧಿಗಳು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆಯೇ? ನಕಲಿ ಗಾಂಧಿಗಳ ಜಾತ್ರೆ ನಡೆಯುತ್ತಿದೆ: ಅಶೋಕ

|

Updated on: Jan 21, 2025 | 4:59 PM

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ, ಬ್ಯಾಂಜ್ ದರೋಡೆಗಳು ನಡೆಯುತ್ತಿವೆ, ಗೋವುಗಳ ಹತ್ಯೆ ಮತ್ತು ಕೆಚ್ಚಲು ಕೊಯ್ಯುವ ಕೆಲಸ ನಡೆಯುತ್ತಿದೆ, 60 ಪರ್ಸೆಂಟ್ ಕಮೀಶನ್ ತೆಗೆದುಕೊಳ್ಳುವ ಸರ್ಕಾರ ಇದು, ಅದೇ ಹಣದಲ್ಲಿ ಕಾಂಗ್ರೆಸ್ ಅಧಿವೇಶನದ ಹೆಸರಲ್ಲಿ ಜಾತ್ರೆ ನಡೆಸುತ್ತಿದೆ, ಗಾಂಧಿಯ ಹೆಸರು ಹೇಳಿಕೊಳ್ಳುವ ನೈತಿಕತೆ ಇವರಿಗಿಲ್ಲ ಎಂದು ಅಶೋಕ ಹೇಳಿದರು.

ಬೆಂಗಳೂರು: ನಗರದ ಬಿಜೆಪಿ ಕಚೇರಿ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ವಿರೋಧ ಪಕ್ಷದ ನಾಯಕ ಅರ್ ಅಶೋಕ, ಬೆಳಗಾವಿಯಲ್ಲಿ ನಕಲಿ ಗಾಂಧಿಗಳ ಜಾತ್ರೆ ನಡೆಯುತ್ತಿದೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರೇ? ಈಗಿನ ಕಾಂಗ್ರೆಸ್ಸಿಗರಿಗೆ ಗಾಂಧಿ ಮೇಲೆ ಪ್ರೀತಿಯೂ ಇಲ್ಲ ಅಭಿಮಾನವೂ ಇಲ್ಲ, ಅದು ಇದ್ದಿದ್ದೇಯಾದರೆ ಮೊನ್ನೆ ಉದ್ಘಾಟಿಸಿದ ಎಐಸಿಸಿ ಕಚೇರಿಗೆ ಗಾಂಧಿ ಭವನ ಅಂತ ಹೆಸರಿಡುತ್ತಿದ್ದರು ಎಂದು ಹೇಳಿ, ಸರ್ದಾರ್ ವಲ್ಲಭ್​ಭಾಯ್ ಪಟೇಲ್ ಅವರ ಹೆಸರು ಯಾಕಿಟ್ಟಿಲ್ಲವೆಂದು ತಾನು ಕೇಳುತ್ತೇನೆ ಅಂದರು

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ರಮೇಶ್ ಜಾರಕಿಹೊಳಿ ಮಾತಾಡಿದ್ದನ್ನೆಲ್ಲ ಪಕ್ಷದ ವರಿಷ್ಠರಿಗೆ ವರದಿ ಮಾಡಿಯಾಗಿದೆ: ಆರ್ ಅಶೋಕ

Published on: Jan 21, 2025 04:58 PM