ಸಂವಿಧಾನ ಒಪ್ಪದ ಮತ್ತು ಕೋರ್ಟಿನ ತೀರ್ಮಾನಕ್ಕೆ ಬದ್ಧರಾಗದ ಜನರಿಂದ ನಾವು ಏನನ್ನೂ ಕಲಿಯಬೇಕಿಲ್ಲ: ಸದಾನಂದ ಗೌಡ
ಯಾಕೆಂದರೆ ಅವರು ನಮ್ಮ ಸಂವಿಧಾನವನ್ನು ಒಪ್ಪುವುದಿಲ್ಲ, ಕೋರ್ಟಿನ ತೀರ್ಪುಗಳನ್ನು ಅಂಗೀಕರಿಸುವುದಿಲ್ಲ. ತಮ್ಮ ಬೆಂಬಲಿಗರ ಮೂಲಕ ಗೂಂಡಾಗಿರಿ ಮಾಡುವ ಜನರಿಂದ ನಾವೇನೂ ಕಲಿಯಬೇಕಿಲ್ಲ ಎಂದು ಸದಾನಂದ ಗೌಡರು ಹೇಳಿದರು.
ಮಂಗಳೂರು: ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಕೇಂದ್ರ ಸಚಿವ ಸದಾನಂದ ಗೌಡರು (Sadananda Gowda) ಬಹಳ ದಿನಗಳ ಬಹಳ ದಿನಗಳ ಮಾಧ್ಯಮಗಳ ಕಣ್ಣಿಗೆ ಬಿದ್ದಿದ್ದಾರೆ. ಶನಿವಾರದಂದು ಮಂಗಳೂರಿನಲ್ಲಿ (Mangaluru) ಅವರು ಈಗ ವಿವಾದಕ್ಕೆ ಗುರಿಯಾಗಿರುವ ಹಲಾಲ್ ಕಟ್ (Halal Cut) ಮತ್ತು ಜಟ್ಕಾ (Jatka Cut) ಕಟ್ ಬಗ್ಗೆ ಪ್ರತಿಕ್ರಿಯೆ ನೀಡಿದರು. ಅವರ ಟಾರ್ಗೆಟ್ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆಗಿದ್ದರು. ಕುಮಾರಸ್ವಾಮಿ ಹಲಾಲ್ ಕಟ್ ಮಾಂಸದ ಪರ ವಹಿಸಿಕೊಂಡು ಮಾತಾಡುತ್ತಿರುವುದು ಸದಾನಂದ ಗೌಡರಿಗೆ ಅಸಮಾಧಾನ ತರಿಸಿದೆ. ಅವರು ಕುಮಾರಸ್ವಾಮಿಯವರ ಹೆಸರು ಉಲ್ಲೇಖಿಸುತ್ತಿಲ್ಲವಾದರೂ ಯಾರನ್ನು ಕುರಿತು ಮಾತಾಡುತ್ತಿದ್ದಾರೆ ಅಂತ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು.
ಜನರ ಧಾರ್ಮಿಕ ನಂಬುಗೆ ಅವರ ಆಚಾರ ವಿಚಾರದ ಬಗ್ಗೆ ಮಾತಾಡಬಾರದು, ಧಾರ್ಮಿಕ ಆಚರಣೆಗಳ ಪ್ರಹಾರ ಮಾಡುವುದು ಸರ್ವಥಾ ತಪ್ಪು. ಇಂಥ ನಾಯಕರ ಸಮಸ್ಯೆ ಏನೆಂದರೆ ಅವರೇ ಹೇಳಿಕೆಗಳನ್ನು ನೀಡಿ ವಿವಾದಗಳನ್ನು ಸೃಷ್ಟಿಸುತ್ತಾರೆ. ಇವರ ಮನಸ್ಥಿತಿಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಯಾಕೆಂದರೆ ಅವರು ನಮ್ಮ ಸಂವಿಧಾನವನ್ನು ಒಪ್ಪುವುದಿಲ್ಲ, ಕೋರ್ಟಿನ ತೀರ್ಪುಗಳನ್ನು ಅಂಗೀಕರಿಸುವುದಿಲ್ಲ. ತಮ್ಮ ಬೆಂಬಲಿಗರ ಮೂಲಕ ಗೂಂಡಾಗಿರಿ ಮಾಡುವ ಜನರಿಂದ ನಾವೇನೂ ಕಲಿಯಬೇಕಿಲ್ಲ ಎಂದು ಸದಾನಂದ ಗೌಡರು ಹೇಳಿದರು.
ಯಾವುದನ್ನು ಮಾಡಬಾರದು ಅಂತ ಜನರಿಗೆ ಬೋಧಿಸುವುದನ್ನೇ ಅವರು ಮಾಡುತ್ತಾರೆ. ವಿವಾದ ಸೃಷ್ಟಿಸುವ ಇವರ ಮಾತುಗಳಿಂದ ಜನ ಸ್ವಯಂಪ್ರೇರಿತರಾಗಿ ಪ್ರತಿಭಟನೆ ಇಳಿಯುತ್ತಾರೆ. ಹಾಗಾಗಿ ಅವರಾಡಿದ ಮಾತುಗಳಿಗೆ ಕೌಂಟರ್ ಕೊಡುವುದಕ್ಕಾಗಿ ಸ್ವಲ್ಪ ಸಮಯದವರೆಗೆ ಗಲಾಟೆಗಳು ನಡೆಯುತ್ತವೆ, ಏನು ತಾನೆ ಮಾಡಲು ಸಾಧ್ಯ ಎಂದು ಸದಾನಂದ ಗೌಡರು ಹೇಳಿದರು.
ಇದನ್ನೂ ಓದಿ: ಕುಮಾರಸ್ವಾಮಿ ರಾಜಕೀಯ ಜೀವನವೇ ಒಂದು ಡ್ರಾಮ; ಸದಾರಮೆ ನಾಟಕ ಕುಮಾರಸ್ವಾಮಿಗೆ ಹೊಸತಲ್ಲ, ಟ್ವೀಟ್ ಮೂಲಕ ಬಿಜೆಪಿ ವಾಗ್ದಾಳಿ