Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮಿತ್ ಶಾರನ್ನು ಪ್ರತ್ಯೇಕವಾಗಿ ಭೇಟಿಮಾಡಿ ಶಾಸಕ ಅರವಿಂದ ಬೆಲ್ಲದ್ ಮತ್ತೇ ಸುದ್ದಿಯಲ್ಲಿದ್ದಾರೆ!

ಅಮಿತ್ ಶಾರನ್ನು ಪ್ರತ್ಯೇಕವಾಗಿ ಭೇಟಿಮಾಡಿ ಶಾಸಕ ಅರವಿಂದ ಬೆಲ್ಲದ್ ಮತ್ತೇ ಸುದ್ದಿಯಲ್ಲಿದ್ದಾರೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 02, 2022 | 5:48 PM

ಕನ್ನಡಿಗರಲ್ಲೇ ಹೆಚ್ಚು ಜನರಿಗೆ ಪರಿಚಯವಿರದ ಅರವಿಂದ ಅವರಿಗೆ ಗೃಹಸಚಿವರು ತಮ್ಮ ಬಿಡುವಿಲ್ಲದ ಶೆಡ್ಯೂಲ್ ಹೊರತಾಗಿಯೂ ಪ್ರತ್ಯೇಕವಾಗಿ ಮಾತಾಡಲು ಅವಕಾಶ ಕಲ್ಪಿಸುತ್ತಾರೆಂದರೆ ಅದು ದೊಡ್ಡ ಸುದ್ದಿ ಅಲ್ಲವೇ?

ಧಾರವಾಡ: ಬಿಜೆಪಿ ಶಾಸಕ ಅರವಿಂದ ಬೆಲ್ಲದ್ (Aravind Bellad) ಅವರು ಮತ್ತೆ ಸುದ್ದಿಯಲ್ಲಿದ್ದಾರೆ ಮಾರಾಯ್ರೇ. ಅವರು ಇದುವರೆಗೆ ಒಮ್ಮೆಯೂ ಮಂತ್ರಿಯಾಗಿಲ್ಲ ಆದರೂ ಮಂತ್ರಿಗಳಿಗಿಂತ ಜಾಸ್ತಿ ಮಾಡುತ್ತಿರುತ್ತಾರೆ ಮತ್ತು ಸುದ್ದಿಯಲ್ಲಿರುತ್ತಾರೆ. ನಿಮಗೆ ನೆನಪಿರಬಹುದು, ಸಮ್ಮಿಶ್ರ ಸರ್ಕಾರ ಪತನಗೊಂಡು ಬಿಜೆಪಿ (BJP) ಅಧಿಕಾರಕ್ಕೆ ಬರುವ ಮೊದಲು ಅರವಿಂದ ಬೆಲ್ಲದ್ ನಾನು ಮುಖ್ಯಮಂತ್ರಿ (chief minister) ಸ್ಥಾನಕ್ಕೆ ರೇಸ್ ನಲ್ಲಿದ್ದೇನೆ ಅಂತ ಹೇಳಿ ಕನ್ನಡಿಗರನ್ನು ಆಶ್ಚರ್ಯಚಕಿತರನ್ನಾಗಿಸಿದ್ದರು. ಯಾಕೆಂದರೆ ಅವರ ಹೆಸರು ಬಹಳಷ್ಟು ಕನ್ನಡಿಗರಿಗೆ ಗೊತ್ತೇ ಇರಲಿಲ್ಲ. ಅರವಿಂದಾ… ಯಾರು? ಅಂತ ಜನ ಕೇಳಿದ್ದರು. ಆಮೇಲೆ ಬಿ ಎಸ್ ಯಡಿಯೂರಪ್ಪ ಸ್ಥಾನ ತ್ಯಜಿಸಿ ಎಂದು ಪಕ್ಷದ ವರಿಷ್ಠರು ಅವರಿಗೆ ಸೂಚನೆ ನೀಡಿದಾಗ ಮತ್ತೊಮ್ಮೆ ಮುನ್ನಲೆಗೆ ಬಂದ ಅರವಿಂದ ಅವರು ನಾನೇ ಮುಂದಿನ ಮುಖ್ಯಮಂತ್ರಿ ಅಂತ ಹೇಳಿಕೊಂಡು ಸುತ್ತಿದ್ದರು.

ಇಂತಿಪ್ಪ ನಮ್ಮ ಧಾರವಾಡದ ಅರವಿಂದ ಅವರು ಈಗ ಮತ್ತೇ ಸುದ್ದಿಯಲ್ಲಿದ್ದಾರೆ. ವಿಷಯ ಏನು ಗೊತ್ತಾ? ಕೇಂದ್ರ ಗೃಹ ಸಚಿವ ಅಮಿತ್ ಶಾ ನಿನ್ನೆ ಅಂದರೆ ಶುಕ್ರವಾರ ಕರ್ನಾಟಕದಲ್ಲಿದ್ದರು. ದಿನವಿಡೀ ಬ್ಯೂಸಿಯಾಗಿದ್ದ ಶಾ ಜೊತೆ ಅರವಿಂದ್ ಪ್ರತ್ಯೇಕವಾಗಿ ಮಾತುಕತೆ ನಡೆಸುವಲ್ಲಿ ಸಫಲರಾಗಿದ್ದಾರೆ.

ಕನ್ನಡಿಗರಲ್ಲೇ ಹೆಚ್ಚು ಜನರಿಗೆ ಪರಿಚಯವಿರದ ಅರವಿಂದ ಅವರಿಗೆ ಗೃಹಸಚಿವರು ತಮ್ಮ ಬಿಡುವಿಲ್ಲದ ಶೆಡ್ಯೂಲ್ ಹೊರತಾಗಿಯೂ ಪ್ರತ್ಯೇಕವಾಗಿ ಮಾತಾಡಲು ಅವಕಾಶ ಕಲ್ಪಿಸುತ್ತಾರೆಂದರೆ ಅದು ದೊಡ್ಡ ಸುದ್ದಿ ಅಲ್ಲವೇ?

ಶನಿವಾರದಂದು ಧಾರವಾಡದಲ್ಲಿ ಮಾಧ್ಯಮದವರು ಅದನ್ನೇ ಕೇಳಿದರು. ಯಾಕೆ ಭೇಟಿಯಾದ್ರಿ, ಏನು ಮಾತಾಡಿದಿರಿ, ಪ್ರತ್ಯೇಕವಾಗಿ ಭೇಟಿಯಾಗುವುದೇನಿತ್ತು ಅಂತ ಕೇಳಿದಾಗ, ಅಯ್ಯೋ, ಅಂಥದ್ದೇನಿಲ್ಲ ಸುಮಾರು 6 ತಿಂಗಳ ಹಿಂದೆ ಭೇಟಿಗೆ ಅವಕಾಶ ಕೇಳಿದ್ದೆ, ಸಿಕ್ಕಿರಲಿಲ್ಲ ಶುಕ್ರವಾರ ಸಿಕ್ಕಿತು ಅಂತ ತಮ್ಮ ಭೇಟಿಯ ಮಹತ್ವವನ್ನು ಹಗುರವಾಗಿಸುವ ಪ್ರಯತ್ನ ಮಾಡಿದರು.

ಬಹಳ ಶಾರ್ಟ್ ನೋಟೀಸಲ್ಲಿ ಅವರನ್ನು ಭೇಟಿಯಾದೆ, ಅದೊಂದು ಸಾಮಾನ್ಯ ಭೇಟಿಯಾಗಿತ್ತು, ರಾಜ್ಯದ ಸ್ಥಿತಿಗತಿ ಬಗ್ಗೆ, ನನ್ನ ಕ್ಷೇತ್ರದ ಅಭಿವೃದ್ಧಿ ಬಗ್ಗೆ ವಿಚಾರಿಸಿದರು, ಅಷ್ಟೇ. ಅಂಥ ಮಹತ್ವದ್ದೇನಾದರೂ ಇದ್ದರೆ ಎಲ್ಲರಿಗಿಂತ ಮೊದಲು ನಿಮಗೆ ಗೊತ್ತಾಗುತ್ತದೆ ಅಂತ ಚಟಾಕಿ ಹಾರಿಸಿದಾಗ ಅವರ ಬೆಂಬಲಿಗರು ನಕ್ಕರು.

ಇದನ್ನೂ ಓದಿ:  ನವೀನ್ ಮೃತದೇಹ ತರಲು ವಿಮಾನದಲ್ಲಿ ಹೆಚ್ಚು ಜಾಗ ಬೇಕಾಗುತ್ತದೆ; ವಿವಾದಕ್ಕೀಡಾದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್