ಬಾನಲ್ಲಿ ಚಂದ್ರ ಗೋಚರ, ನಾಳೆಯಿಂದ ಪವಿತ್ರ ರಂಜಾನ್ ತಿಂಗಳು ಆರಂಭ

ಬಾನಲ್ಲಿ ಚಂದ್ರ ಗೋಚರ, ನಾಳೆಯಿಂದ ಪವಿತ್ರ ರಂಜಾನ್ ತಿಂಗಳು ಆರಂಭ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 02, 2022 | 10:40 PM

ರಂಜಾನ್ ತಿಂಗಳಲ್ಲಿ ಪ್ರತಿದಿನ ಇಫ್ತಾರ್ ಕೂಟಗಳು ನಡೆಯುತ್ತವೆ. ವಿವಿಧ ರಾಜಕೀಯ ಪಕ್ಷಗಳ ಧುರೀಣರು ಇಫ್ತಾರ್ ಕೂಟಗಳನ್ನು ಆಯೋಜಿಸುತ್ತಾರೆ. ಕೇವಲ ಮುಸಲ್ಮಾನ ನಾಯಕರಲ್ಲದೆ ಬೇರೆ ಧರ್ಮಗಳ ಧುರೀಣರು ಸಹ ಇಫ್ತಾರ್ ಕೂಟಗಳನ್ನು ಆಯೋಜಿಸಿ ರೋಜೆದಾರರನ್ನು (ಉಪವಾಸ ಮಾಡುವ ಮುಸಲ್ಮಾನರು) ಊಟಕ್ಕೆ ಆಹ್ವಾನಿಸುತ್ತಾರೆ

ಹಬ್ಬಗಳ ಸರಣಿ ಶುರುವಿಟ್ಟುಕೊಂಡಿದೆ ಮಾರಾಯ್ರೇ. ದೇಶದೆಲ್ಲೆಡೆ ಇಂದು ಅಂದರೆ ಶನಿವಾರದಂದು ಹಿಂದೂಗಳು ಯುಗಾದಿ (Ugadi) ಹಬ್ಬವನ್ನು ಸಡಗರ ಸಂಭ್ರಮಗಳಿಂದ ಆಚರಿಸಿದ್ದಾರೆ. ಶನಿವಾರದಂದೇ ಬಾನಲ್ಲಿ ಚಂದ್ರ ಕಾಣಿಸಿಕೊಂಡಿರುವುದನ್ನು ಲಖನೌ ಈದ್ಗಾ ಇಮಾಮ್ ಮೌಲಾನಾ ಖಾಲಿದ್ ರಶೀದ್ ಫಿರಂಗಿ ಮಹಾಲಿ ಮತ್ತು ಕರ್ನಾಟಕ ವಕ್ಫ್ ಬೋರ್ಡ್ ಅಧ್ಯಕ್ಷ ಶಫಿ ಅಸದಿ ಅವರು ದೃಢಪಡಿಸಿರುವುದರಿಂದ ಮುಸಲ್ಮಾನರ ಪವಿತ್ರ ರಂಜಾನ್ (Ramadan) ತಿಂಗಳು ನಾಳೆಯಿಂದ (ರವಿವಾರ) ಆರಂಭಗೊಳ್ಳುತ್ತದೆ. ಮುಸ್ಲಿಂ ಸಮುದಾಯದವರು ನಾಳೆಯಿಂದ 30 ದಿನಗಳವರೆಗೆ ಉಪವಾಸ (fasting) ಅಚರಿಸಿದ ಬಳಿಕ ರಂಜಾನ್ ಹಬ್ಬವನ್ನು ಬಹು ವಿಜೃಂಭಣೆಯಿಂದ ಆಚರಿಸುತ್ತಾರೆ.

ಅಂದಹಾಗೆ, ಇದೇ ತಿಂಗಳು ಮಧ್ಯಭಾಗದಲ್ಲಿ ಕ್ರಿಶ್ಚಿಯನ್ನರು ಈಸ್ಟರ್ (ಯೇಸುವಿನ ಪುನರುತ್ಥಾನದ ಹಬ್ಬ) ಹಬ್ಬವನ್ನು ಆಚರಿಸಲಿದ್ದಾರೆ. ಏಪ್ರಿಲ್ 15 ರಂದು ಗುಡ್ ಫ್ರೈಡೆ ಇದೆ ಮತ್ತು 17 ರಂದು ಈಸ್ಟರ್. ಅದಕ್ಕೂ ಮೊದಲು ಏಪ್ರಿಲ್ 10ರಂದು (ರವಿವಾರ) ರಾಮನವಮಿ ಇದೆ ಮತ್ತು ಮೂರು ದಿನಗಳ ಬಳಿಕ ಅಂದರೆ ಏಪ್ರಿಲ್ 14 (ಗುರುವಾರ) ಅಂಬೇಡ್ಕರ್ ಜಯಂತಿ ಇದೆ. ಹಾಗಾಗೇ, ನಾವು ಹಬ್ಬಗಳ ಸೀಸನ್ ಶುರುವಾಗಿದೆ ಅಂತ ಹೇಳಿದ್ದು!

ರಂಜಾನ್ ತಿಂಗಳಲ್ಲಿ ಪ್ರತಿದಿನ ಇಫ್ತಾರ್ ಕೂಟಗಳು ನಡೆಯುತ್ತವೆ. ವಿವಿಧ ರಾಜಕೀಯ ಪಕ್ಷಗಳ ಧುರೀಣರು ಇಫ್ತಾರ್ ಕೂಟಗಳನ್ನು ಆಯೋಜಿಸುತ್ತಾರೆ. ಕೇವಲ ಮುಸಲ್ಮಾನ ನಾಯಕರಲ್ಲದೆ ಬೇರೆ ಧರ್ಮಗಳ ಧುರೀಣರು ಸಹ ಇಫ್ತಾರ್ ಕೂಟಗಳನ್ನು ಆಯೋಜಿಸಿ ರೋಜೆದಾರರನ್ನು (ಉಪವಾಸ ಮಾಡುವ ಮುಸಲ್ಮಾನರು) ಊಟಕ್ಕೆ ಆಹ್ವಾನಿಸುತ್ತಾರೆ. ಪೇಜಾವರ ಶ್ರೀಗಳಾಗಿದ್ದ ವಿಶ್ವೇಶತೀರ್ಥ ಸ್ವಾಮೀಜಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ಸಹ ಮುಸ್ಲಿಂ ಬಾಂಧವರಿಗೆ ಇಫ್ತಾರ್ ಕೂಟ ಆಯೋಜಿಸುತ್ತಿದ್ದರು.

ಇದನ್ನೂ ಓದಿ:   Ramadan 2022 Timetable: ಈ ವರ್ಷ ರಂಜಾನ್ ಯಾವಾಗ? ಭಾರತದಲ್ಲಿ ‘ಸೆಹ್ರಿ’ ಮತ್ತು ‘ಇಫ್ತಾರ್’ ಸಮಯದ ಡಿಟೇಲ್ಸ್ ಇಲ್ಲಿದೆ