Ramadan 2022 Timetable: ಈ ವರ್ಷ ರಂಜಾನ್ ಯಾವಾಗ? ಭಾರತದಲ್ಲಿ ‘ಸೆಹ್ರಿ’ ಮತ್ತು ‘ಇಫ್ತಾರ್’ ಸಮಯದ ಡಿಟೇಲ್ಸ್ ಇಲ್ಲಿದೆ

ರಂಜಾನ್ ತಿಂಗಳಲ್ಲಿ ರೋಜಾ ಅಥವಾ ಉಪವಾಸಕ್ಕೆ ಅದರದೇ ಆದ ಮಹತ್ವವಿದೆ. ಸೂರ್ಯೋದಯಕ್ಕೆ ಮುಂಚಿನ ತಿಂಡಿಯನ್ನು ಸೆಹ್ರಿ ಅಥವಾ ಸೋಹರ್ ಎಂದು ಕರೆಯಲಾಗುತ್ತದೆ ಮತ್ತು ಸೂರ್ಯಾಸ್ತದ ನಂತರ ಉಪವಾಸವನ್ನು ಮುಕ್ತಾಯಗೊಳಿಸುವ ಪ್ರಕ್ರಿಯೆಯನ್ನು ಇಫ್ತಾರ್ ಎಂದು ಕರೆಯಲಾಗುತ್ತದೆ.

Ramadan 2022 Timetable: ಈ ವರ್ಷ ರಂಜಾನ್ ಯಾವಾಗ? ಭಾರತದಲ್ಲಿ 'ಸೆಹ್ರಿ' ಮತ್ತು 'ಇಫ್ತಾರ್' ಸಮಯದ ಡಿಟೇಲ್ಸ್ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Mar 29, 2022 | 6:30 AM

ರಂಜಾನ್ ಮುಸ್ಲಿಮರ ಪವಿತ್ರ ಹಾಗೂ ಅತಿ ದೊಡ್ಡ ಹಬ್ಬ. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಶಬಾನ್ ಕೊನೆಯ ದಿನದ ನಂತರ 9ನೇ ತಿಂಗಳಾದ ರಂಜಾನ್(Ramadan) ಪ್ರಾರಂಭವಾಗುತ್ತದೆ. ಇಸ್ಲಾಮಿಕ್ ಸಂಸ್ಕೃತಿಯ ಪ್ರಕಾರ ಈ ತಿಂಗಳು ಅತ್ಯಂತ ಪವಿತ್ರ ತಿಂಗಳು ಎಂದು ಪರಿಗಣಿಸಲಾಗಿದೆ. ಇದು ಈ ವರ್ಷ ಏಪ್ರಿಲ್ 2ರಿಂದ ನಡೆಯಲಿದೆ. ಏಪ್ರಿಲ್ 2ರಿಂದ ಆರಂಭವಾಗಿ ಮೇ 2ಕ್ಕೆ ಮುಗಿಯುತ್ತೆ. ಸುದೀರ್ಘ ರಂಜಾನ್ನ ಒಂದು ತಿಂಗಳು ಮುಸ್ಲಿಮರಿಗೆ ಅತ್ಯಂತ ಪವಿತ್ರ ಮಾಸ. ಈ ಮಾಸದಲ್ಲಿ ಉಪವಾಸ ಇಟ್ಟು ದೇವರ ಪ್ರಾರ್ಥನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಾಗುತ್ತೆ. ಉಪವಾಸದ ಕೊನೆಯ ದಿನ ಈದ್-ಉಲ್-ಫಿತರ್ ಹಬ್ಬ ಅಂದರೆ ರಂಜಾನ್ ಹಬ್ಬವನ್ನು ಆಚರಿಸಲಾಗುತ್ತೆ. ಇಸ್ಲಾಂ ಧರ್ಮವನ್ನು ಅನುಸರಿಸುವ ಮುಸ್ಲಿಮರು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಇರುತ್ತಾರೆ. ಅನಾರೋಗ್ಯ, ವೃದ್ಧರು, ಗರ್ಭಿಣಿಯರು, ಮಧುಮೇಹ ಅಥವಾ ಮುಟ್ಟಿನಂಥ ಸಮಸ್ಯೆಯಿಂದ ಬಳಲುತ್ತಿರುವವರು ಹೊರತುಪಡಿಸಿ ಎಲ್ಲ ಮುಸ್ಲಿಮರು ಉಪವಾಸವನ್ನು ಕಡ್ಡಾಯವಾಗಿದೆ ಮಾಡುತ್ತಾರೆ. ಈ ಒಂದು ತಿಂಗಳ ಅವಧಿಯನ್ನು ವಿಶ್ವದಾದ್ಯಂತ ಮುಸ್ಲಿಮರು ಪವಿತ್ರ ಕುರಾನ್ ಪಠಣೆ ಮಾಡುವುದು ಹಾಗೂ ಪ್ರಾರ್ಥನೆಗಳನ್ನು ಮಾಡುವ ಮೂಲಕ ದೇವರಿಗೆ ಹತ್ತಿರವಾಗಲೆಂದು ಮೀಸಲಿಡುತ್ತಾರೆ.

ದೇವರು(ಅಲ್ಲಾಹು) ಪ್ರವಾದಿ ಮುಹಮ್ಮದ್‌ಗೆ ಪವಿತ್ರ ಕುರಾನ್‌ನ ಪದ್ಯಗಳನ್ನು ಬಹಿರಂಗಪಡಿಸಿದ ದಿನವಾಗಿ ರಂಜಾನ್ ತಿಂಗಳನ್ನು ಗುರುತಿಸಲ್ಪಟ್ಟಿದೆ ಎಂದು ಮುಸ್ಲಿಮರು ನಂಬುತ್ತಾರೆ. ರಂಜಾನ್ ತಿಂಗಳಲ್ಲಿ ರೋಜಾ ಅಥವಾ ಉಪವಾಸಕ್ಕೆ ಅದರದೇ ಆದ ಮಹತ್ವವಿದೆ. ಸೂರ್ಯೋದಯಕ್ಕೆ ಮುಂಚಿನ ತಿಂಡಿಯನ್ನು ಸೆಹ್ರಿ ಅಥವಾ ಸೋಹರ್ ಎಂದು ಕರೆಯಲಾಗುತ್ತದೆ ಮತ್ತು ಸೂರ್ಯಾಸ್ತದ ನಂತರ ಉಪವಾಸವನ್ನು ಮುಕ್ತಾಯಗೊಳಿಸುವ ಪ್ರಕ್ರಿಯೆಯನ್ನು ಇಫ್ತಾರ್ ಎಂದು ಕರೆಯಲಾಗುತ್ತದೆ. ಇನ್ನು ರಂಜಾನ್ ಸಮಯದಲ್ಲಿ ಕೇವಲ ದೇಹಕ್ಕೆ ಮಾತ್ರವಲ್ಲ ಮನಸ್ಸಿಗೂ ಉಪವಾಸ ಮಾಡಿಸಲಾಗುತ್ತದೆ. ಮುಸ್ಲಿಮರು ಉಪವಾಸದ ವೇಳೆ ಸಿಗರೇಟ್, ಮದ್ಯ, ತಂಬಾಕು ಸೇವನೆ, ಲೈಂಗಿಕ ಸಂಬಂಧವನ್ನು ಬೆಳೆಸುವುದನ್ನೂ ಕೂಡ ತಪ್ಪಿಸುತ್ತಾರೆ. ಏಕೆಂದರೆ ಉಪವಾಸದ ಸಮಯದಲ್ಲಿ ಇಂಥ ಚಟುವಟಿಕೆಗಳನ್ನು ಪಾಪ ಎಂದು ಪರಿಗಣಿಸಲಾಗುತ್ತದೆ. ರಂಜಾನ್ ತಿಂಗಳಲ್ಲಿ ಮುಸ್ಲಿಮರು ತಮ್ಮನ್ನು ಅಧ್ಯಾತ್ಮ ಪ್ರವೃತ್ತಿಗೆ ಅರ್ಪಿಸಿಕೊಳ್ಳುತ್ತಾರೆ.

ಭಾರತದಲ್ಲಿ ರಂಜಾನ್ 2022 ದಿನಾಂಕ: ಈ ವರ್ಷ, ಭಾರತದಲ್ಲಿ ರಂಜಾನ್ ಏಪ್ರಿಲ್ 2 ಅಥವಾ 1ರ ಸಂಜೆಯಿಂದ ಪ್ರಾರಂಭವಾಗಬಹುದು. ಮತ್ತು ಏಪ್ರಿಲ್ 3ರಂದು ಮೊದಲ ಉಪವಾಸ ಆರಂಭವಾಗುತ್ತೆ. ಈ ಪವಿತ್ರ ತಿಂಗಳ ಮೊದಲ ಮತ್ತು ಕೊನೆಯ ದಿನಾಂಕಗಳು ಚಂದ್ರನ ಇಸ್ಲಾಮಿಕ್ ಕ್ಯಾಲೆಂಡರ್ ಅನ್ನು ಅವಲಂಬಿಸಿರುತ್ತದೆ. ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತದೆ. ಒಂದು ತಿಂಗಳ ಅಮಾವಾಸ್ಯೆಯ ನಂತರ ಕಾಣಿಸಿಕೊಳ್ಳುವ ಅರ್ಧಚಂದ್ರಾಕೃತಿಯೊಂದಿಗೆ ಪ್ರಾರಂಭವಾಗುತ್ತದೆ. ರಂಜಾನ್‌ನ ಅರ್ಧಚಂದ್ರಾಕಾರವು ಸೌದಿ ಅರೇಬಿಯಾ ಮತ್ತು ಕೆಲವು ಪಾಶ್ಚಿಮಾತ್ಯ ದೇಶಗಳೊಂದಿಗೆ ಭಾರತದ ಕೆಲವು ಭಾಗಗಳಲ್ಲಿ ಮೊದಲು ಕಂಡುಬರುತ್ತದೆ ಮತ್ತು ಒಂದು ದಿನದ ನಂತರ ಉಳಿದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಇತರ ದೇಶಗಳಲ್ಲಿ ಕಂಡುಬರುತ್ತದೆ. ಹೀಗಾಗಿ ಚಂದ್ರನ ಮೂಲಕ ದಿನವನ್ನು, ಹಬ್ಬವನ್ನು ಲೆಕ್ಕ ಹಾಕಲಾಗುತ್ತೆ.

ಭಾರತದ ನಗರಗಳ ಪ್ರಕಾರ ‘ಸೆಹ್ರಿ’ ಮತ್ತು ‘ಇಫ್ತಾರ್’ ಸಮಯಗಳು ಇಲ್ಲಿವೆ: ಹೈದರಾಬಾದ್ ಬೆಳಗ್ಗೆ 05:01ರಿಂದ ಸಂಜೆ 06:30 ದೆಹಲಿ ಬೆಳಗ್ಗೆ 04:56ರಿಂದ ಸಂಜೆ 06:38 ಅಹಮದಾಬಾದ್ ಬೆಳಗ್ಗೆ 05:20ರಿಂದ ಸಂಜೆ 06:55 ಸೂರತ್ ಬೆಳಗ್ಗೆ 05:21ರಿಂದ ಸಂಜೆ 06:53 ಮುಂಬೈ ಬೆಳಗ್ಗೆ 05:22ರಿಂದ ಸಂಜೆ 06:52 ಪುಣೆ ಬೆಳಗ್ಗೆ 05:19ರಿಂದ ಸಂಜೆ 06:48 ಬೆಂಗಳೂರು ಬೆಳಗ್ಗೆ 05:07ರಿಂದ ಸಂಜೆ 06:32 ಚೆನ್ನೈ ಬೆಳಗ್ಗೆ 04:56ರಿಂದ ಸಂಜೆ 06:21 ಕಲ್ಕತ್ತಾ ಬೆಳಗ್ಗೆ 04:17ರಿಂದ ಸಂಜೆ 05:51 ಕಾನ್ಪುರ ಬೆಳಗ್ಗೆ 04:46ರಿಂದ ಸಂಜೆ 06:25. ಸೂರ್ಯನ ಸ್ಥಾನದಿಂದಾಗಿ ಸೆಹ್ರಿ ಮತ್ತು ಇಫ್ತಾರ್ ವೇಳಾಪಟ್ಟಿ ಬದಲಾವಣೆ ಮಾಡಲಾಗುತ್ತೆ.

ಇದನ್ನೂ ಓದಿ: Happy Ramadan Eid 2021: ರಂಜಾನ್ ಹಬ್ಬದ ಮಹತ್ವ, ಆಚರಣೆಯ ವಿಧಾನ ಹೀಗಿದೆ

ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ