AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆ ಬಾಗಿಲಿನ ಮೇಲೆ ಓಂ - ಸ್ವಸ್ತಿಕ್ ಚಿಹ್ನೆ ಹಾಕುವುದರ​ ಹಿಂದಿನ ಮಹತ್ವ ವೇನು?

ಮನೆ ಬಾಗಿಲಿನ ಮೇಲೆ ಓಂ – ಸ್ವಸ್ತಿಕ್ ಚಿಹ್ನೆ ಹಾಕುವುದರ​ ಹಿಂದಿನ ಮಹತ್ವ ವೇನು?

ಆಯೇಷಾ ಬಾನು
|

Updated on: Sep 26, 2024 | 6:58 AM

Share

ಹಿಂದೂ ಶಾಸ್ತ್ರದಲ್ಲಿ ಸ್ವಸ್ತಿಕ, ಓಂ ಮತ್ತು ತ್ರಿಶೂಲವನ್ನು ಅತ್ಯಂತ ಮಂಗಳಕರ ಚಿಹ್ನೆ ಎಂದು ಪರಿಗಣಿಸಲಾಗಿದೆ. ಈ ಚಿಹ್ನೆಗಳನ್ನು ಮನೆ ಗೋಡೆಗೆ ಅಂಟಿಸುವುದರಿಂದ ಅನೇಕ ಲಾಭಗಳಿವೆ. ಈ ವಿಡಿಯೋದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಓಂ - ಸ್ವಸ್ತಿಕ್ ಚಿಹ್ನೆಗಳ ಮಹತ್ವವನ್ನು ವಿವರಿಸಿದ್ದಾರೆ.

ಹಿಂದೂ ಶಾಸ್ತ್ರದಲ್ಲಿ ಸ್ವಸ್ತಿಕ, ಓಂ ಮತ್ತು ತ್ರಿಶೂಲವನ್ನು ಅತ್ಯಂತ ಮಂಗಳಕರ ಚಿಹ್ನೆ ಎಂದು ಪರಿಗಣಿಸಲಾಗಿದೆ. ಈ ಚಿಹ್ನೆಗಳು ಮನೆಯಿಂದ ದೃಷ್ಟಿ ದೋಷವನ್ನು ದೂರಾಗಿಸುತ್ತವೆ ಎಂಬ ನಂಬಿಕೆ ಇದೆ. ಈ ವಿಡಿಯೋದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಓಂ – ಸ್ವಸ್ತಿಕ್ ಚಿಹ್ನೆಗಳ ಮಹತ್ವವನ್ನು ವಿವರಿಸಿದ್ದಾರೆ. ಓಂ ಎಂಬುದು ಅನ್ಹದ ನಾದದ ಸಂಕೇತವಾಗಿದೆ. ಓಂ ಶಬ್ದವು ಮೂರು ಶಬ್ದಗಳಿಂದ ಮಾಡಲ್ಪಟ್ಟಿದೆ – ಅ, ಉ, ಮ, ಈ ಮೂರು ಶಬ್ದಗಳ ಅರ್ಥ ಉಪನಿಷತ್ತುಗಳಲ್ಲಿಯೂ ಬರುತ್ತದೆ. ಭೂ: ಲೋಕ, ಭೂವಃ ಲೋಕ ಮತ್ತು ಸ್ವರ್ಗ ಲೋಕದ ಪ್ರತೀಕ.

ಸ್ವಸ್ತಿಕ ಪದವು ‘ಸು’ ಮತ್ತು ‘ಅಸ್ತಿ’ ಎರಡರಿಂದಲೂ ಕೂಡಿದೆ. ‘ಸು’ ಎಂದರೆ ಮಂಗಳಕರ ಮತ್ತು ‘ಅಸ್ತಿಕ’ ಎಂದರೆ ‘ಕಲ್ಯಾಣ’ ಎಂದರ್ಥ. ಬಾಗಿಲು ಮತ್ತು ಹೊರಭಾಗದಲ್ಲಿ ಸುತ್ತುವರಿದ ಎರಡೂ ಗೋಡೆಗಳ ಮೇಲೆ ಸ್ವಸ್ತಿಕವನ್ನು ಗುರುತಿಸುವುದು ವಾಸ್ತು ದೋಷಗಳನ್ನು ನಿವಾರಿಸುತ್ತದೆ ಮತ್ತು ಅದೃಷ್ಟವನ್ನು ತರುತ್ತದೆ. ಇದು ಬಡತನವನ್ನು ನಾಶಪಡಿಸುತ್ತದೆ ಎಂಬ ನಂಬಿಕೆಗಳಿವೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ