ಹಲವು ದಿನಗಳ ಬಳಿಕ ದರ್ಶನ್ ಮುಖದಲ್ಲಿ ನಗು; ಜಾಮೀನು ಸಿಗುವ ಮುನ್ಸೂಚನೆಯೇ?
ಬಳ್ಳಾರಿ ಜೈಲಿಗೆ ಶಿಫ್ಟ್ ಆದ ಬಳಿಕ ದರ್ಶನ್ ಮಂಕಾಗಿದ್ದರು. ಅವರ ವಿರುದ್ಧ ಚಾರ್ಜ್ಶೀಟ್ನಲ್ಲಿ ಗಂಭೀರ ಆರೋಪಗಳು ಇರುವುದು ಬಹಿರಂಗ ಆಯಿತು. ಜಾಮೀನು ಅರ್ಜಿ ಅರ್ಜಿಯ ವಿಚಾರಣೆ ಮುಂದೂಡಿಕೆ ಆಯಿತು. ಈ ಎಲ್ಲ ಕಾರಣಗಳಿಂದ ಅವರು ಸೈಲೆಂಟ್ ಆಗಿದ್ದರು. ಆದರೆ ಇಂದು (ಸೆ.25) ದರ್ಶನ್ ನಗು ನಗುತ್ತಾ ಇರುವುದು ಕಾಣಿಸಿದೆ. ಆ ವಿಡಿಯೋ ಇಲ್ಲಿದೆ ನೋಡಿ..
ಇಷ್ಟು ದಿನಗಳ ಕಾಲ ಕೊಂಚ ಟೆನ್ಷನ್ ಆಗಿದ್ದ ದರ್ಶನ್ ಈಗ ರಿಲ್ಯಾಕ್ಸ್ ಆದಂತಿದೆ. ಅವರ ಮುಖದಲ್ಲಿ ನಗು ಕಾಣಿಸಿದೆ. ಜಾಮೀನು ಸಿಗುವ ನಿರೀಕ್ಷೆಯಲ್ಲಿ ಅವರು ಇದ್ದಾರೆ. ದರ್ಶನ್ ಪರ ವಕೀಲರು ಬಳ್ಳಾರಿ ಜೈಲಿಗೆ ಹೋಗಿ ಒಂದಷ್ಟು ವಿಚಾರಗಳ ಬಗ್ಗೆ ಚರ್ಚೆ ಮಾಡಿ ಬಂದಿದ್ದಾರೆ. ಸೆಷನ್ಸ್ ಕೋರ್ಟ್ನಲ್ಲಿ ಜಾಮೀನು ಸಿಗದಿದ್ದರೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗುವುದು. ಅದಕ್ಕೆ ಎಲ್ಲ ತಯಾರಿ ನಡೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:38 pm, Wed, 25 September 24