ಈ ಸರ್ಕಾರ ಅಧಿಕಾರದಲ್ಲಿದ್ದರೆ ಹೆಚ್ಎಂಪಿವಿಯಿಂದ ಭಗವಂತನೇ ಜನರನ್ನು ಕಾಪಾಡಬೇಕು: ಡಾ ಸಿಎನ್ ಅಶ್ವಥ್ ನಾರಾಯಣ
ಹೆಚ್ಎಂಪಿವಿ ಬೆಂಗಳೂರು ಪ್ರವೇಶಿಸುವುದಕ್ಕೂ ಸಿದ್ದರಾಮಯ್ಯ ಸರ್ಕಾರವೇ ಕಾರಣ ಎಂಬಂತಿದೆ ಅಶ್ವಥ್ ನಾರಾಯಣ ಮಾತಿನ ವರಸೆ. ಹೆಚ್ಎಂಪಿವಿ ಲಕ್ಷಣಗಳು ಮಗುವೊಂದರಲ್ಲಿ ಕಂಡುಬಂದ ನಂತರ ನಗರದಲ್ಲಿ ಕೊರೋನಾ ವೈರಸ್ ಭೀತಿ ಶುರುವಾಗಿದೆ ಎಂದು ಹೇಳಿದಾಗ ಅಶ್ವಥ್ ನಾರಾಯಣ ಅವರು ಈ ಸರ್ಕಾರವೇನಾದರೂ ಅಧಿಕಾರದಲ್ಲಿದ್ದರೆ ಭಗವಂತನೇ ಜನರನ್ನು ಕಾಪಾಡಬೇಕು ಅನ್ನುತ್ತಾರೆ.
ಬೆಂಗಳೂರು: ಕೋರೋನಾ ವೈರಸ್ ಮತ್ತೊಂದು ವೇರಿಯಂಟ್ ಎನ್ನಲಾಗುತ್ತಿರುವ ಹೆಚ್ಎಂಪಿವಿ ಕರ್ನಾಟಕದ ರಾಜಧಾನಿಯನ್ನು ಪ್ರವೇಶಿಸಿದ್ದು ಆತಂಕ ಸೃಷ್ಟಿಯಾಗಿದೆ. ವೈದ್ಯರೂ ಆಗಿರುವ ಬಿಜೆಪಿ ಶಾಸಕ ಡಾ ಸಿಎನ್ ಅಶ್ವಥ್ ನಾರಾಯಣ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿ, ವೈರಸ್ ಬಗ್ಗೆ ತಾನೇನೂ ಹೇಳಲಾಗಲ್ಲ, ಅದು ಯಾವ ವೇರಿಯಂಟ್ ಮತ್ತು ಕೊರೋನಾ ವೈರಸ್ ರೂಪಾಂತರ ಹೊಂದಿರಬಹುದುದಾದ ಸಾಧ್ಯತೆಯನ್ನು ಪತ್ತೆ ಮಾಡಲು ರಾಜ್ಯದಲ್ಲಿ ಸಾಕಷ್ಟು ವೈರಾಲಜಿ ಸಂಸ್ಥೆಗಳಿವೆ, ಇನ್ನೂ ಗಾಢ ನಿದ್ರೆಯಲ್ಲಿರುವ ಸರ್ಕಾರ ಎಚ್ಚೆತ್ತುಕೊಂಡು ವೈರಸ್ ಹರಡುವುದನ್ನು ತಡೆಯಲು ಮುಂದಾಗಬೇಕು, ಸರ್ಕಾರಕ್ಕೆ ಸೇವಾ ಶುಲ್ಕ ಸಂಗ್ರಹಿಸುವುಷ್ಟೇ ಗೊತ್ತು ಸೇವೆ ಒದಗಿಸುವುದು ಗೊತ್ತಿಲ್ಲ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: MERS Coronavirus: ಇದ್ಯಾವುದೋ ಕೊರೋನಾ ಮತ್ತೆ ವಕ್ಕರಿಸಿಕೊಂಡಿದೆ, ಸೌದಿ ಒಂಟೆಗಳಿಂದ ಸೋಂಕು ಹರಡುತ್ತಿದೆ, ಏನಿದರ ಲಕ್ಷಣಗಳು?