ಕಲ್ಯಾಣ ಕರ್ನಾಟಕದಲ್ಲಿ ಕೇವಲ ಖರ್ಗೆ ಕುಟುಂಬ ಕಲ್ಯಾಣ ಮಾತ್ರ ನಡೆಯುತ್ತಿದೆ: ನಾರಾಯಣಸ್ವಾಮಿ ಚಲವಾದಿ

Updated on: May 24, 2025 | 4:45 PM

ಖರ್ಗೆ ಕುಟುಂಬ ಕೇವಲ ವಿಷಸರ್ಪ ಎಂಬ ಪದ ಮಾತ್ರ ಬಳಸಿಲ್ಲ, ದೇಶದ ಸ್ವಾತಂತ್ರ್ಯಕ್ಕಾಗಿ ಅರೆಸ್ಸೆಸ್ ಮತ್ತು ಬಿಜೆಪಿ ನಾಯಕರ ಮನೆಯಿಂದ ಒಂದು ನಾಯಿ ಕೂಡ ಸಾಯಲಿಲ್ಲ ಅಂತ ಹೇಳಿದ್ದರು, ಮೊದಲ ನಾಯಿ ಪದವನ್ನು ಬಳಸಿ ಬಿಜೆಪಿ ನಾಯಕರನ್ನು ಅದಕ್ಕೆ ಹೋಲಿಸಿದವರು ಯಾರು ಎಂದು ನಾರಾಯಣಸ್ವಾಮಿ ಚಲವಾದಿ ವ್ಯಗ್ರರಾಗಿ ಪ್ರಶ್ನಿಸಿದರು.

ಕಲಬುರಗಿ, ಮೇ 24: ನಗರದಲ್ಲಿ ನಡೆದ ಬಿಜೆಪಿಯ ಪ್ರತಿಭಟನಾ ರ‍್ಯಾಲಿಯಲ್ಲಿ (protest rally) ಮಾತಾಡಿದ ವಿಧಾನ ಪರಿಷತ್ ವಿಪಕ್ಷ ನಾಯಕ ನಾರಾಯಣಸ್ವಾಮಿ ಚಲವಾದಿ ಮತ್ತೊಮ್ಮೆ ಖರ್ಗೆ ಕುಟುಂಬವನ್ನು ತರಾಟೆಗೆ ತೆಗೆದುಕೊಂಡರು. ಕಲ್ಯಾಣ ಕರ್ನಾಟಕದಲ್ಲಿ ಕೇವಲ ಕುಟುಂಬ ಕಲ್ಯಾಣ ಮಾತ್ರ ನಡೆಯುತ್ತಿದೆ, ಎಂದು ಅವರು ಸೂಚ್ಯವಾಗಿ ಹೇಳಿದರು. ಡಾ ಬಿಅರ್ ಅಂಬೇಡ್ಕರ್ ಅವರು ಹೇಳಿದ ಮಾತು ಈ ಕುಟುಂಬಕ್ಕೆ ನೆನಪಿಲ್ಲ, ನಿಮಗೆ ಒಂದೇ ಒಂದು ಚಿಕ್ಕ ಅವಕಾಶ ಸಿಕ್ಕರೂ ನಿಮ್ಮ ಸಮುದಾಯವನ್ನು ಜೊತೆಗೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡಿ ಎಂದು ಅವರು ಹೇಳಿದ್ದರು, ಅದರೆ ಕಲಬುರಗಿಯಲ್ಲಿ ಕುಟುಂಬ ಮಾತ್ರ ಬೆಳೆದಿದ್ದು, ಬೇರೆಯವರು ಉದ್ಧಾರವಾಗೋದು ಕುಟುಂಬಕ್ಕೆ ಬೇಕಿಲ್ಲ ಎಂದು ನಾರಾಯಣ ಸ್ವಾಮಿ ಹೇಳಿದರು.

ಇದನ್ನೂ ಓದಿ:  ನನ್ನ ಹೆಸರೇ ಚಲವಾದಿ, ಪ್ರಿಯಾಂಕ್ ಖರ್ಗೆ ನನ್ನ ತಂಟೆಗೆ ಬಂದರೆ ಇನ್ನು ಸಮ್ಮನಿರಲ್ಲ: ಚಲವಾದಿ ನಾರಾಯಣಸ್ವಾಮಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ