ನಮ್ಮ ಅಧ್ಯಕ್ಷರು ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತಾಡಕೂಡದು ಅಂತ ಹೇಳಿದ್ದಾರೆ: ಹೆಚ್​ಸಿ ಬಾಲಕೃಷ್ಣ

Updated on: Jul 01, 2025 | 7:17 PM

ಆಳಂದ್ ಶಾಸಕ ಬಿಅರ್ ಪಾಟೀಲ್ ಮತ್ತು ರಾಜು ಕಾಗೆ ಅವರು ಮಾಡಿರುವ ಅರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಬಾಲಕೃಷ್ಣ, ಅವರನ್ನು ಸಿಎಂ ಮತ್ತು ಡಿಸಿಎಂ ಕರೆಸಿ ಮಾತಾಡಿದ್ದಾರೆ, ಪಾಟೀಲ್ ಮತ್ತು ಕಾಗೆ ಇಬ್ಬರೂ ಹಿರಿಯ ನಾಯಕರು ಮತ್ತು ಅನುಭವಸ್ಥರು, ಸ್ವಲ್ಪ ತಾಳ್ಮೆಯಿಟ್ಟುಕೊಳ್ಳಬೇಕು ಅಂತ ಮನವಿಯನ್ನು ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.

ಬೆಂಗಳೂರು, ಜುಲೈ 1: ಹೆಚ್ ಸಿ ಬಾಲಕೃಷ್ಣ ಅವರಿಗಿರುವಷ್ಟು ವಿವೇಕ, ವಿವೇಚನೆ ರಾಮನಗರ ಶಾಸಕ ಇಕ್ಬಾಲ್ ಹುಸ್ಸೇನ್ (Iqbal Hussain) ಅವರಿಗಿಲ್ಲ ಅನ್ನೋದು ಮಾಗಡಿ ಶಾಸಕನ ಮಾತು ಕೇಳಿದರೆ ಅನಿಸುತ್ತದೆ ಮಾರಾಯ್ರೇ. ನಮ್ಮ ವರದಿಗಾರ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಏನಾದರೂ ಮಾತುಕತೆ ನಡೀತಾ ಅಂತ ಕೇಳಿದರೆ, ರಾಜಕೀಯ ವಿಷಯಗಳು ಚರ್ಚೆಗೆ ಬರಲಿಲ್ಲ, ಅವರು ಪಕ್ಷ ಸಂಘಟನೆ, ಅಭಿವೃದ್ಧಿ, ನಾಮಿನೇಷನ್ ಮತ್ತು ಪಾರ್ಟಿ ಕಚೇರಿಯ ಬಗ್ಗೆ ಕೇಳಿದರು, ಅದಕ್ಕೆಲ್ಲ ಉತ್ತರ ಕೊಟ್ಟಿದ್ದೇನೆ ಎಂದು ಬಾಲಕೃಷ್ಣ ಹೇಳಿದರು. ಡಿಕೆ ಶಿವಕುಮಾರ್​ಗೆ ಮುಖ್ಯಮಂತ್ರಿಯಾಗುವ ಒಂದು ಅವಕಾಶ ಸಿಗಬೇಕು ಅಂತ ನೀವು ಹೇಳಿದ್ರಲ್ಲ ಅಂತ ಕೇಳಿದರೆ, ನಮ್ಮ ಅಧ್ಯಕ್ಷರು ಆ ವಿಷಯದಲ್ಲಿ ಮಾತಾಡಕೂಡದು ಅಂತ ಹೇಳಿದ್ದಾರೆ, ಹಾಗಾಗಿ ಅದನ್ನು ಬಿಟ್ಟು ಬೇರೆ ವಿಷಯ ಮಾತಾಡುತ್ತೇನೆ ಎಂದು ಬಾಲಕೃಷ್ಣ ಹೇಳಿದರು.

ಇದನ್ನೂ ಓದಿ:   ಸಿಎಂ ಮತ್ತು ಡಿಸಿಎಂ ಪ್ರಾಮಿಸ್ ಮಾಡವ್ರೆ, ನನ್ನನ್ನು ಮಂತ್ರಿ ಮಾಡಲೇಬೇಕು: ಹೆಚ್ ಸಿ ಬಾಲಕೃಷ್ಣ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ