ಅಕ್ಕಿ ವಿತರಣೆಯಲ್ಲಿ ಅಂಗಡಿ ಮಾಲೀಕನಿಂದ ವಂಚನೆ, ತರಾಟೆಗೆ ತೆಗೆದುಕೊಂಡ ಮಲ್ಲೇನಹಳ್ಳಿ ಗ್ರಾಮಸ್ಥರು
ಇದು ಕೇವಲ ಮಲ್ಲೇನಹಳ್ಳಿಯ ಕತೆ ಮಾತ್ರ ಅಲ್ಲ, ಬಹಳಷ್ಟು ನ್ಯಾಯಬೆಲೆ ಅಂಗಡಿಗಳಲ್ಲಿ ಹೀಗೆ ದೋಖಾ ನಡೆಯುತ್ತಿದೆ. ಅಮಾಯಕ ಮತ್ತು ಅನಕ್ಷರಸ್ಥ ಬಡವರು ಕೊಟ್ಟಿದ್ದನ್ನು ಮರುಮಾತಾಡದೆ ತೆಗೆದುಕೊಂಡು ಹೋಗುತ್ತಾರೆ. ಅಥವಾ ಕೇಳಲು ಹೋದರೆ ಕೆಲ ಗೂಂಡಾಗಳನ್ನು ಜೊತೆಗಿಟ್ಟುಕೊಳ್ಳುವ ಅಂಗಡಿ ಮಾಲೀಕ ದಬಾಯಿಸುತ್ತಾನೆ. ಅವನ ಅಂಗಡಿಯಲ್ಲೇ 2-3 ಜನ ಕೆಲಸ ಮಾಡುತ್ತಿರುತ್ತಾರೆ.
ಚಿಕ್ಕಮಗಳೂರು, 19 ಮಾರ್ಚ್: ದೇವರು ವರ ಕೊಟ್ಟರೂ ಪೂಜಾರಿ ಕೊಡ ಅಂತ ಕನ್ನಡದಲ್ಲಿ ಮಾತೊಂದಿದೆ. ಅನ್ನಭಾಗ್ಯ ಸ್ಕೀಮಿನಡಿ ರಾಜ್ಯಸರ್ಕಾರವು 5ಕೆಜಿ ಅಕ್ಕಿ ಬದಲಿಗೆ ಹಣ ಕೊಡುತ್ತಿದ್ದುದನ್ನು ನಿಲ್ಲಿಸಿ ಫೆಬ್ರುವರಿ ತಿಂಗಳಿಂದ ಅಕ್ಕಿಯನ್ನೇ ಕೊಡುತ್ತಿದೆ. ಆದರೆ, ಜಿಲ್ಲೆಯ ಕಡೂರು ತಾಲ್ಲೂಕಿನ ಬಿ ಮಲ್ಲೇನಹಳ್ಳಿ ಗ್ರಾಮದಲ್ಲಿ ಪಡಿತರ ಅಂಗಡಿ (fair price shop) ನಡೆಸುವ ವ್ಯಕ್ತಿ ಬಡವರ ಅಕ್ಕಿಗೆ ಕನ್ನ ಹಾಕಿ ತಾನು ದುಂಡಗಾಗುತ್ತಿದ್ದಾನೆ. ಇಲ್ಲೊಬ್ಬ ಬಡವ್ಯಕ್ತಿಗೆ ಅವನು 60 ಕೆಜಿ ಅಕ್ಕಿ ಕೊಟ್ಟು ಕಾರ್ಡಲ್ಲಿ 75 ಕೇಜಿ ಅಂತ ಎಂಟ್ರಿ ಮಾಡಿದ್ದಾನೆ. ಅವನ ವಂಚನೆ ಗೊತ್ತಾಗಿ ಗ್ರಾಮಸ್ಥರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿಗೆ ನೀಡುತ್ತಿದ್ದ ಹಣದ ಬದಲು ಫೆಬ್ರುವರಿ ತಿಂಗಳಿಂದ ಅಕ್ಕಿಯೇ ಸಿಗಲಿದೆ: ಕೆಹೆಚ್ ಮುನಿಯಪ್ಪ