ಆಕ್ಸಿಜನ್ ಸಿಲಿಂಡರ್ ಹಿಡ್ಕೊಂಡೇ ಮಾಯಕ್ಕಾ ದೇವಿ ದರ್ಶನ: ಪತ್ನಿಯ ಹರಕೆ ಸಲ್ಲಿಸಲು ಪತಿಯ ಪ್ರೀತಿಯ ಆಸರೆ

Edited By:

Updated on: Feb 05, 2026 | 10:51 AM

ಚಿಂಚಲಿ ಗ್ರಾಮದ ಮಾಯಕ್ಕಾ ದೇವಿ ಜಾತ್ರೆಯ ಸಂದರ್ಭದಲ್ಲಿ ಮಹಾರಾಷ್ಟ್ರದ ಪಂಢರಪುರದ ದಂಪತಿ ಅನಾರೋಗ್ಯದ ನಡುವೆಯೂ ಆಕ್ಸಿಜನ್ ಸಿಲಿಂಡರ್​​ ಹಿಡಿದುಕೊಂಡೇ ಬಂದು ದೇವಿಯ ದರ್ಶನ ಮಾಡಿರುವುದು ಗಮನ ಸೆಳೆದಿದೆ. ಸದ್ಯ, ದಂಪತಿ ಆಕ್ಸಿಜನ್ ಸಿಲಿಂಡರ್ ಜತೆ ದೇಗುಲದ ಆವರಣದಲ್ಲಿ ಮಾತನಾಡಿಡುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಈ ದೃಶ್ಯ ಕಂಡ ಭಕ್ತರು ದಂಪತಿಯ ಭಕ್ತಿ ಹಾಗೂ ಪರಸ್ಪರದ ಬಾಂಧವ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಿಕ್ಕೋಡಿ, ಫೆಬ್ರವರಿ 5: ಅಚಲವಾದ ಶ್ರದ್ಧೆ, ಭಕ್ತಿ, ನಂಬಿಕೆ ಇದ್ದರೆ ಯಾವುದೂ ಅಡ್ಡಿಯಾಗಲ್ಲ ಎಂಬುದಕ್ಕೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದ ಮಾಯಕ್ಕಾ ದೇವಿ ಜಾತ್ರೆಯಲ್ಲಿ ಕಂಡು ಬಂದ ಅಪರೂಪದ ವಿದ್ಯಮಾನ ಸಾಕ್ಷಿಯಾಗಿದೆ. ತೀವ್ರ ಉಸಿರಾಟದ ತೊಂದರೆ ಇದ್ದರೂ ಪತ್ನಿಯ ಇಚ್ಛೆಯನ್ನು ನೆರವೇರಿಸಲು ಪತಿ ಆಕ್ಸಿಜನ್ ಸಿಲಿಂಡರ್ ಜೊತೆಗೇ ಬಂದು ದೇವಿಯ ದರ್ಶನ ಮಾಡಿಸಿದ್ದು ಭಕ್ತರ ಮನಸೂರೆಗೊಳ್ಳುವಂತೆ ಮಾಡಿದೆ.

ಭಾರತ ಹುಣ್ಣಿಮೆ ಪ್ರಯುಕ್ತ ನಡೆಯುತ್ತಿರುವ ಚಿಂಚಲಿ ಮಾಯಕ್ಕಾ ದೇವಿ ಜಾತ್ರೆಗೆ ಲಕ್ಷಾಂತರ ಭಕ್ತರು ಬರುತ್ತಿದ್ದಾರೆ. ಭಕ್ತಸಾಗರದ ನಡುವೆಯೇ ಮಹಾರಾಷ್ಟ್ರದ ಪಂಢರಪುರದಿಂದ ದಂಪತಿ ದರ್ಶನಕ್ಕೆ ಆಗಮಿಸಿದ್ದಾರೆ. ಪತ್ನಿಗೆ ಉಸಿರಾಟದ ತೊಂದರೆ ಇರುವ ಕಾರಣ, ಆಕ್ಸಿಜನ್ ಸಿಲಿಂಡರ್ ಕೈಯಲ್ಲಿ ಹಿಡಿದುಕೊಂಡೇ ಪತಿ ದೇವಸ್ಥಾನದವರೆಗೆ ಹೆಜ್ಜೆ ಹಾಕಿ ದೇವಿಯ ದರ್ಶನ ಮಾಡಿಸಿದ್ದಾರೆ.

ಅನಾರೋಗ್ಯವನ್ನೇ ಲೆಕ್ಕಿಸದೇ ದೇವಿಯ ದರ್ಶನ ಪಡೆದ ದಂಪತಿಯ ಭಕ್ತಿ ಸ್ಥಳೀಯರ ಮನಸೆಳೆದಿದೆ. ‘ನಾವು ಮಹಾರಾಷ್ಟ್ರದ ಪಂಢರಪುರದಿಂದ ಬಂದಿದ್ದೇವೆ. ಕಳೆದ 15 ವರ್ಷಗಳಿಂದ ನಿರಂತರವಾಗಿ ಮಾಯಕ್ಕಾ ದೇವಿ ದರ್ಶನಕ್ಕೆ ಬರುತ್ತಿದ್ದೇವೆ. ಈ ಬಾರಿ ಪತ್ನಿಯ ಆರೋಗ್ಯ ಸಮಸ್ಯೆ ಇದ್ದರೂ ದೇವಿಯ ಕೃಪೆಯಿಂದ ದರ್ಶನ ಚೆನ್ನಾಗಿ ಆಯಿತು’ ಎಂದು ಪತಿ ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More