ಹೊಂಡ ಕಂಡಾಕ್ಷಣ ದೇಹ ತಂಪಾಗಿಸಿಕೊಳ್ಳಲು ನೀರಿಗಿಳಿದ ಆನೆಹಿಂಡು, ಜಲಕ್ರೀಡೆಯ ಸುಂದರ ದೃಶ್ಯ
ಈಗಾಗಲೇ ವರದಿಯಾಗಿರುವ ಹಾಗೆ ಈ ಬಾರಿಯ ಬೇಸಿಗೆ ಹಿಂದೆಂದಿಗಿಂತಲೂ ತೀಕ್ಷ್ಣವಾಗಿದೆ. ವಿಶ್ವದಾದ್ಯಂತ ಕನಿಷ್ಠ ಮತ್ತು ಗರಿಷ್ಠ ಉಷ್ಣಾಂಶದಲ್ಲಿ 2 ಡಿಗ್ರೀ ಸೆಲ್ಸಿಯಸ್ ನಷ್ಟು ಏರಿಕೆಯಾಗಿದೆ. ನಾಗರಹೊಳೆ ಅರಣ್ಯ ಪ್ರದೇಶದಲ್ಲಿರುವ ಕೆರೆಕುಂಟೆಗಳಲ್ಲಿ ನೀರು ಬತ್ತಿ ಹೋಗಿರುವುದರಿಂದ ಹೊಂಡಗಳಲ್ಲಿ ಟ್ಯಾಂಕರ್ಗಳಿಂದ ನೀರು ತುಂಬಿಸುವ ಕೆಲಸವನ್ನು ಅರಣ್ಯ ಇಲಾಖೆ ಮಾಡುತ್ತಿದೆ.
ಚಾಮರಾಜನಗರ, ಏಪ್ರಿಲ್ 3: ಕಡು ಬೇಸಿಗೆಯ ಮಧ್ಯಭಾಗವಿದು, ರಾಜ್ಯದೆಲ್ಲೆಡೆ ರಣಬಿಸಿಲು. ಅರಣ್ಯಪ್ರದೇಶಗಳಲ್ಲಿ ವನ್ಯಪ್ರಾಣಿಗಳಿಗೆ (wild animals ) ನೀರಿನ ಸಮಸ್ಯೆ ಎದುರಾಗಿದೆ. ಜಿಲ್ಲೆಯ ಹನೂರು ತಾಲ್ಲೂಕಿನ ವಡಕೆಹಳ್ಳ ರಸ್ತೆಯಲ್ಲಿರುವ ಚಿಕ್ಕ ನೀರಿನ ಹೊಂಡವೊಂದರಲ್ಲಿ ಸ್ವಚ್ಛವಲ್ಲದಿದ್ದರೂ ನೀರನ್ನು ಕಂಡ ಆನೆಗಳ ಗುಂಪಿಗೆ ಖುಷಿಯೋ ಖುಷಿ. ನಾಲ್ಕು ಆನೆಗಳು ಜಲಕ್ರೀಡೆ ನಡೆಸುವ ದೃಶ್ಯ ವಾಹನವಾರರ ಮೊಬೈಲ್ ಫೋನ್ಗಳಲ್ಲಿ ಸೆರೆಯಾಗಿದೆ. ಆನೆಗಳು ಸೊಂಡಿಲುಗಳಿಂದ ನೀರನ್ನು ಮೈಮೇಲೆ ಹುಯ್ಯಿದುಕೊಂಡು ಸುಡುವ ಬಿಸಿಲಿಂದ ತಾತ್ಕಾಲಿಕ ನಿರಾಳತೆ ಪಡೆಯುವ ಪ್ರಯತ್ನದಲ್ಲಿವೆ.
ಇದನ್ನೂ ಓದಿ: ನಾಗರಹೊಳೆ ಅಭಯಾರಣ್ಯದಲ್ಲಿ ವನ್ಯಜೀವಿಗಳಿಗೆ ನೀರಿನ ಹಾಹಾಕಾರ, ಟ್ಯಾಂಕರ್ ಮೂಲಕ ಕೆರೆಕುಂಟೆಗಳಿಗೆ ನೀರು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Published on: Apr 03, 2025 10:35 AM
Latest Videos

ಸೊಂಟದ ಕೆಳಗಿನ ಮಾತು; ಮನೆಯಲ್ಲಿ ಸ್ಟ್ಯಾಂಡಪ್ ಕಾಮಿಡಿಯನ್ಸ್ಗೆ ಸಖತ್ ತೊಂದರೆ

ಘಟನೆ ನಡೆದ 2 ತಾಸು ಬಳಿಕ ಬಿಎಂಅರ್ಸಿಎಲ್ನವರು ಬಂದರು: ಪ್ರತ್ಯಕ್ಷದರ್ಶಿ

Video:ಅಕ್ರಮವಾಗಿ ನಿರ್ಮಿಸಿದ್ದ ದರ್ಗಾ ನೆಲಸಮ, ಪೊಲೀಸರ ಮೇಲೆ ಕಲ್ಲು ತೂರಾಟ

ಚಹಲ್ ಚಮತ್ಕಾರ: 3 ಓವರ್ಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಯುಝಿ
