Video: ತಾಂತ್ರಿಕ ದೋಷ, ನಿಂತಿದ್ದ ರೈಲಿನಿಂದ ಇಳಿದ ಪ್ರಯಾಣಿಕನ ಮೇಲೆ ಹರಿದ ಮತ್ತೊಂದು ರೈಲು

ತಾಂತ್ರಿಕ ದೋಷದಿಂದಾಗಿ ನಿಂತಿದ್ದ ರೈಲಿನಿಂದ ಇಳಿದ ಯುವಕನೊಬ್ಬನಿಗೆ ಮತ್ತೊಂದು ರೈಲು ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಇಟಾವಾದಲ್ಲಿ ನಡೆದಿದೆ. ಅಪಘಾತದ ಬಗ್ಗೆ ರೈಲ್ವೆ ಪೊಲೀಸರು ಯುವಕನ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ.ಓಖಾ-ಗುವಾಹಟಿ ಎಕ್ಸ್‌ಪ್ರೆಸ್ ಇಟಾವಾದಿಂದ ಕಾನ್ಪುರಕ್ಕೆ ಡೌನ್ ಲೈನ್‌ನಲ್ಲಿ ಪ್ರಯಾಣಿಸುತ್ತಿತ್ತು. ಪ್ರಯಾಣದ ಸಮಯದಲ್ಲಿ, 13 ನೇ ಕೋಚ್‌ನ ಚಕ್ರಗಳಿಂದ ಇದ್ದಕ್ಕಿದ್ದಂತೆ ಹೊಗೆ ಬರಲು ಪ್ರಾರಂಭಿಸಿತ್ತು.

ಇಟಾವಾ, ಏಪ್ರಿಲ್ 06: ತಾಂತ್ರಿಕ ದೋಷದಿಂದಾಗಿ ನಿಂತಿದ್ದ ರೈಲಿನಿಂದ ಇಳಿದ ಯುವಕನೊಬ್ಬನಿಗೆ ಮತ್ತೊಂದು ರೈಲು ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಇಟಾವಾದಲ್ಲಿ ನಡೆದಿದೆ. ಅಪಘಾತದ ಬಗ್ಗೆ ರೈಲ್ವೆ ಪೊಲೀಸರು ಯುವಕನ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ.ಓಖಾ-ಗುವಾಹಟಿ ಎಕ್ಸ್‌ಪ್ರೆಸ್ ಇಟಾವಾದಿಂದ ಕಾನ್ಪುರಕ್ಕೆ ಡೌನ್ ಲೈನ್‌ನಲ್ಲಿ ಪ್ರಯಾಣಿಸುತ್ತಿತ್ತು. ಪ್ರಯಾಣದ ಸಮಯದಲ್ಲಿ, 13 ನೇ ಕೋಚ್‌ನ ಚಕ್ರಗಳಿಂದ ಇದ್ದಕ್ಕಿದ್ದಂತೆ ಹೊಗೆ ಬರಲು ಪ್ರಾರಂಭಿಸಿತ್ತು.

ಪ್ರಯಾಣಿಕರು ಹೊಗೆಯಿಂದ ಗಾಬರಿಗೊಂಡರು, ಮತ್ತು ಅನೇಕರು ಭಯದಿಂದ ತಮ್ಮ ಆಸನಗಳಿಂದ ಎದ್ದರು. ತಾಂತ್ರಿಕ ತಂಡವನ್ನು ಸ್ಥಳಕ್ಕೆ ಕರೆಸಿ ಹೊಗೆಯನ್ನು ನಂದಿಸಲಾಯಿತು. ಈ ಸಮಯದಲ್ಲಿ ರೈಲು 10 ನಿಮಿಷಗಳ ಕಾಲ ನಿಂತಿತು. ರೈಲು ನಿಂತಾಗ, ಅನೇಕ ಪ್ರಯಾಣಿಕರು ಇಳಿದರು.

ತಾಂತ್ರಿಕ ದೋಷವನ್ನು ಸರಿಪಡಿಸಿದ ನಂತರ ರೈಲು ಮುಂದೆ ಚಲಿಸಿದ ತಕ್ಷಣ, ಪ್ರಯಾಣಿಕರಲ್ಲಿ ರೈಲು ಹತ್ತಲು ನೂಕುನುಗ್ಗಲು ಉಂಟಾಯಿತು. ಈ ಮಧ್ಯೆ, ಇನ್ನೊಂದು ಮಾರ್ಗವನ್ನು ದಾಟಿ ರೈಲು ಹತ್ತಲು ಓಡುತ್ತಿದ್ದ ಪ್ರಯಾಣಿಕನೊಬ್ಬನಿಗೆ ಕಾನ್ಪುರದಿಂದ ಇಟಾವಾ ಕಡೆಗೆ ಬರುತ್ತಿದ್ದ ಸೀಲ್ಡಾ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ. ಮೃತರನ್ನು ದಿಲಾವರ್ ಹುಸೇನ್ ಎಂದು ಗುರುತಿಸಲಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:12 am, Mon, 6 April 26

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us