ನಮ್ಮೂರಿಗೆ ರಸ್ತೆ, ಕುಡಿಯುವ ನೀರು ಮಾಡಿಸಿಕೊಡಿ ಅಂತ ಕೇಳಿದ ಯುವಕನ ಕೆನ್ನೆಗೆ ಬಾರಿಸಿದರು ಶಾಸಕ ವೆಂಕಟರವಣಪ್ಪ!

ನಮ್ಮೂರಿಗೆ ರಸ್ತೆ, ಕುಡಿಯುವ ನೀರು ಮಾಡಿಸಿಕೊಡಿ ಅಂತ ಕೇಳಿದ ಯುವಕನ ಕೆನ್ನೆಗೆ ಬಾರಿಸಿದರು ಶಾಸಕ ವೆಂಕಟರವಣಪ್ಪ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 20, 2022 | 5:09 PM

ಶಾಸಕರು ಯುವಕನಿಗೆ ತಾಲ್ಲೂಕು ಕಚೇರಿ ಬಳಿ ಸಿಕ್ಕಿದ್ದಾರೆ. ಯುವಕ ಅವರ ಹತ್ತಿರ ಬಂದು ಸಮಸ್ಯೆ ಹೇಳಿಕೊಂಡಾಗ ಶಾಸಕರಿಗೆ ಉರಿದುಹೋಗಿದೆ. ತನ್ನ ವೈಫಲ್ಯವನ್ನು ಜನರ ಮುಂದೆ ಆಡಿ ತೋರಿಸುವುದೇ? ಕೋಪ ನೆತ್ತಿಗೇರಿ ಅವರ ಯುವಕನ ಕೆನ್ನೆಗೆ ಛಟೀರೆಂದು ಬಾರಿಸುತ್ತಾರೆ.

ಜನ ಪ್ರತಿನಿಧಿಗಳು (representatives of people) ಯಾವ ಪಕ್ಷದವರಾದರೇನು ಅವರು ಪ್ರಶ್ನಾತೀತರು. ಹಾಗಂತ ಎಲ್ಲ ಸಮಯದಲ್ಲಿ ಅವರು ಹಾಗಲ್ಲ. ಉದಾಹರಣೆಗೆ, ಚುನಾವಣೆ ಹತ್ತಿರ ಬಂದಾಗ, ಅದು ನಡೆಯುತ್ತಿರುವಾಗ ಮತ್ತದಾರರ ಮನೆಮನೆಗೆ ವೋಟಿನ ಭಿಕ್ಷೆ ಕೇಳಲು ಹೋದಾಗ ಅವರು ಸದ್ಗುಣಿಗಳು, ವಿನಯಶೀಲರು, ಮತದಾರ (voter) ಬೈದರೆ ಅದನ್ನು ಪ್ರಸಾದದ ಹಾಗೆ ಸ್ವೀಕರಿಸುವವರೂ ಆಗಿರುತ್ತಾರೆ. ಅವರ ಈ ಅವತಾರವನ್ನು ನೋಡಿ ಮೋಸಹೋಗಿ ವೋಟು ನೀಡುವ ಜನರಿಗೆ ಅಸಲೀಯತ್ತು ಅವರು ಗೆದ್ದ ಮೇಲೆಯೇ ಗೊತ್ತಾಗೋದು. ಪಾವಗಡದ ಈ ಯುವಕನಿಗೆ ಆಗಿದ್ದು ಅದೇ. ವಿಡಿಯೋವನ್ನು ಗಮನವಿಟ್ಟು ನೋಡಿ ಮಾರಾಯ್ರೇ. ಈ ಘಟನೆ ನಡೆದಿದ್ದು ತುಮಕೂರು ಪಾವಗಡ ತಾಲ್ಲೂಕು ಕಚೇರಿ ಬಳಿ. ಯುವಕ ಯಾವ ಗ್ರಾಮದವನು ಅಂತ ನಮಗೆ ಗೊತ್ತಾಗಿಲ್ಲ. ತನ್ನ ಕ್ಷೇತ್ರದ ಕಾಂಗ್ರೆಸ್ ಶಾಸಕ (Congress MLA) ವೆಂಕಟರವಣಪ್ಪ (Venkatravanappa) ಅವರನ್ನು ಭೇಟಿಯಾಗಿ ತನ್ನ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳಾದ ನೀರು ಮತ್ತು ರಸ್ತೆ ಇಲ್ಲ ಅಂತ ನಿವೇದನೆ ಮಾಡಿಕೊಳ್ಳಲು ಬಂದಿದ್ದಾನೆ.

ಶಾಸಕರು ಯುವಕನಿಗೆ ತಾಲ್ಲೂಕು ಕಚೇರಿ ಬಳಿ ಸಿಕ್ಕಿದ್ದಾರೆ. ಯುವಕ ಅವರ ಹತ್ತಿರ ಬಂದು ಸಮಸ್ಯೆ ಹೇಳಿಕೊಂಡಾಗ ಶಾಸಕರಿಗೆ ಉರಿದುಹೋಗಿದೆ. ತನ್ನ ವೈಫಲ್ಯವನ್ನು ಜನರ ಮುಂದೆ ಆಡಿ ತೋರಿಸುವುದೇ? ಕೋಪ ನೆತ್ತಿಗೇರಿ ಅವರ ಯುವಕನ ಕೆನ್ನೆಗೆ ಛಟೀರೆಂದು ಬಾರಿಸುತ್ತಾರೆ.

ತನ್ನೂರಿಗೆ ರಸ್ತೆ ಮತ್ತು ಕುಡಿಯುವ ನೀರಿನ ಸೌಕರ್ಯವಿಲ್ಲ ಅಂತ ಕೇಳಿದ್ದು ತಪ್ಪೇ?

ಶಾಸಕರ ಸುತ್ತ ನೆರೆದಿರುವ ಯುವಕನಿಗೆ ಗದರುತ್ತಾರೆಯೇ ಹೊರತು ಅಮಾಯಕನಿಗೆ ಸುಖಾಸುಮ್ಮನೆ ಹೊಡಿದಿದ್ದು ಯಾಕೆ ಅಂತ ಶಾಸಕನಿಗೆ ಯಾರೂ ಕೇಳಲ್ಲ. ಯುವಕನ ಪರ ಸಹಾನುಭೂತಿ ವ್ಯಕ್ತಪಡಿಸುವ ಒಂದೇ ಒಂದು ಆತ್ಮ ಅಲ್ಲಿಲ್ಲ. ಅವನು ಪ್ಯಾಲಿಯಂತೆ ದೂರ ಹೋಗಿ ನಿಂತುಕೊಳ್ಳುತ್ತಾನೆ. ಶಾಸಕ ಮಹಾಶಯರು ಪೊಲೀಸರಿಗೆ ಹೇಳಿ ಒಳಗೆ ಹಾಕಿಸುತ್ತೇನೆ ಅಂತ ಬೆದರಿಕೆಯನ್ನೂ ಒಡ್ಡುತ್ತಾರೆ.

ಯುವಕ ಹೇಳುವ ಮಾತನ್ನು ಕೇಳಿ, ಅವನು ತೆಲುಗು ಭಾಷೆಯಲ್ಲಿ ಹೇಳುತ್ತಿದ್ದಾನೆ: ವಯಸ್ಸಿನಲ್ಲಿ ಹಿರಿಯರು ಅಂತ ಸುಮ್ಮನಾಗಿದ್ದೇನೆ, ಇಲ್ಲಾಂದ್ರೆ ನಾನೂ ಎರಡು ಬಿಗಿಯುತ್ತಿದ್ದೆ, ಈ ಸಲ ನಮ್ಮೂರಿಗೆ ಬರಲಿ, ಹೇಳ್ತೀನಿ!

ಇದನ್ನೂ ಓದಿ:    ಯಾವ ತಾರೆಯೊಂದಿಗೆ ಬಾಲಿವುಡ್​ ಪದಾರ್ಪಣೆ ಮಾಡಲು ಇಚ್ಛಿಸುತ್ತೀರಿ ಎಂಬ ಪ್ರಶ್ನೆಗೆ ಯಶ್ ಉತ್ತರ ಏನಿತ್ತು? ಹಳೆಯ ವಿಡಿಯೋ ಮತ್ತೆ ವೈರಲ್