ಪಾವಗಡದ ಐತಿಹಾಸಿಕ ಏಳು ಸುತ್ತಿನ ಕೋಟೆ ಗೋಡೆ ಕುಸಿತ; ವಿಡಿಯೋ ನೋಡಿ

ಪಾವಗಡದ ಐತಿಹಾಸಿಕ ಏಳು ಸುತ್ತಿನ ಕೋಟೆ ಗೋಡೆ ಕುಸಿತ; ವಿಡಿಯೋ ನೋಡಿ

ಮಹೇಶ್ ಇ, ಭೂಮನಹಳ್ಳಿ
| Updated By: ಆಯೇಷಾ ಬಾನು

Updated on: Aug 19, 2024 | 9:48 AM

ಪಾವಗಡ ಐತಿಹಾಸಿಕ ಮಹತ್ವವುಳ್ಳ ಪ್ರದೇಶ. ಇಲ್ಲಿ ಗಂಗರು, ನೊಳಂಬರು, ಪಲ್ಲವರು, ಚೋಳರು, ಪಾಳೇಗಾರರ ಆಳ್ವಿಕೆ ಮಾಡಿದ್ದಾರೆ. ಸದ್ಯ ಧಾರಾಕಾರ ಮಳೆಗೆ ಪಾವಗಡ ಪಟ್ಟಣದ ಐತಿಹಾಸಿಕ ಹಿನ್ನೆಲೆ ಇರುವ 7 ಸುತ್ತಿನ ಕೋಟೆಯ ಗೋಡೆ ಕುಸಿದಿದೆ. ಪಾವಗಡ ಪಟ್ಟಣದ ಐತಿಹಾಸಿಕ ಹಿನ್ನೆಲೆ ಇರುವ 7 ಸುತ್ತಿನ ಕೋಟೆಯ ಗೋಡೆ ಕುಸಿದಿದೆ.

ತುಮಕೂರು, ಆಗಸ್ಟ್​.19: ತುಮಕೂರು ಜಿಲ್ಲೆ ಪಾವಗಡ ಪಟ್ಟಣದ ಐತಿಹಾಸಿಕ ಹಿನ್ನೆಲೆ ಇರುವ 7 ಸುತ್ತಿನ ಕೋಟೆಯ ಗೋಡೆ ಕುಸಿದಿದೆ. ಧಾರಾಕಾರ ಮಳೆಗೆ ರಾಜರ ಕಾಲದಲ್ಲಿ ನಿರ್ಮಾಣವಾಗಿದ್ದ ಏಳು ಸುತ್ತಿನ ಕೋಟೆಯಲ್ಲಿ ಮೊದಲ ಸುತ್ತಿನ ಗೋಡೆ ಕುಸಿದಿದೆ. ಕೋಟೆ ಒಂದು ಭಾಗ ಕುಸಿತ ಹಿನ್ನೆಲೆ ಜಾಗ ಕಬಳಿಸುವ ಆತಂಕ ಎದುರಾಗಿದೆ. ಕೋಟೆಯನ್ನ ಉಳಿಸುವಂತೆ ತಾಲೂಕು ಆಡಳಿತಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ