ತೆಲಂಗಾಣ: ತಾಯಿಯ ಅಂತ್ಯಸಂಸ್ಕಾರಕ್ಕಾಗಿ ಭಿಕ್ಷೆ ಬೇಡಿದ ಮಗಳು
ತಾಯಿಯ ಅಂತ್ಯಸಂಸ್ಕಾರಕ್ಕಾಗಿ ಮಗಳೊಬ್ಬಳು ಊರಿನ ಜನರ ಮುಂದೆ ಭಿಕ್ಷೆ ಬೇಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. ತೆಲಂಗಾಣದ ಬಾಲಕಿಯೊಬ್ಬಳು ಇತ್ತೀಚೆಗಷ್ಟೇ ತಂದೆಯನ್ನು ಕಳೆದುಕೊಂಡಿದ್ದಳು, ಈಗ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆಗೆ ತನ್ನವರು ಎಂದೂ ಯಾರೂ ಇಲ್ಲ, ಈಗ ತಾಯಿಯ ಅಂತ್ಯಸಂಸ್ಕಾರ ಮಾಡಲು ಸಹಾಯ ಕೋರಿದ್ದಾಳೆ.
ವಿಧಿ ಆಟ ವಿಚಿತ್ರ, ಯಾವ ಮಗುವಿಗೂ ಇಂಥಾ ಕಷ್ಟ ಬರಬಾರದು, ಇದು ಊಹೆಗೂ ನಿಲುಕದ ಘಟನೆ. ತಾಯಿಯ ಅಂತ್ಯಸಂಸ್ಕಾರಕ್ಕಾಗಿ ಹಣ ನೀಡುವಂತೆ ಊರಿನ ಜನರೆದುರು ಅಂಗಲಾಚಿ ಬೇಡುತ್ತಿರುವ ವಿಡಿಯೋ ವೈರಲ್ ಆಗಿದೆ. ಆಕೆಗೆ ಈಗ 11 ವರ್ಷ, ಒಂದು ತಿಂಗಳ ಹಿಂದಷ್ಟೇ ತಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು, ಈಗ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕೆಗೆ ದಿಕ್ಕೇ ತೋಚದಂತಾಗಿದೆ.
ಈ ಘಟನೆ ತೆಲಂಘಾಣದ ನಿರ್ಮಲ್ನಲ್ಲಿ ನಡೆದಿದೆ. ಮಹಿಳೆಯ ಅಂತ್ಯಕ್ರಿಯೆ ಮಾಡುವವರೂ ಯಾರೂ ಇಲ್ಲ, ದೂರದ ಬಂಧುಗಳು ಕೂಡ ಸಹಾಯಕ್ಕೆ ಬಂದಿಲ್ಲ. ಮಗಳು ತನ್ನ ತಾಯಿಯ ಅಂತ್ಯಸಂಸ್ಕಾರಕ್ಕೆ ಸಹಾಯ ಮಾಡಿ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದಾಳೆ.
ಸ್ಥಳೀಯರು ಸ್ವಲ್ಪ ಸ್ವಲ್ಪ ಹಣ ಸಂಗ್ರಹಿಸಿ ಮಹಿಳೆಯ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ನಿರ್ಮಲ್ ಜಿಲ್ಲೆ ತಾನೂರ ಮಂಡಲದ ಮುಧೋಳ ತಾಲೂಕಿನ ಬೆಳ್ ತರೋಡ ಗ್ರಾಮದ ನಿವಾಸಿ ಗಂಗಾಮಣಿ(36) ಪತಿಯೊಂದಿಗೆ ಜಗಳವಾಡಿ 11 ವರ್ಷದ ಮಗಳು ದುರ್ಗಾ ಜತೆ ಒಂಟಿ ಜೀವನ ನಡೆಸುತ್ತಿದ್ದರು. ಸ್ವಲ್ಪ ಸಮಯದ ಬಳಿಕ ಪತಿ ಮೃತಪಟ್ಟಿದ್ದರು. ಆದರೆ ಈಗ ಮಹಿಳೆಯೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮತ್ತಷ್ಟು ಓದಿ: ರಾಜಸ್ಥಾನ: ಬೈಕ್ಗೆ ಪತ್ನಿಯನ್ನು ಕಟ್ಟಿ ಎಳೆದೊಯ್ದ ಪತಿ, ವಿಡಿಯೊ ವೈರಲ್
ತಾಯಿಯ ಮೃತದೇಹದ ಬಳಿ ಸಣ್ಣ ಬಟ್ಟೆಯನ್ನು ಹಾಸಿ ಸಹಾಯಕ್ಕಾಗಿ ಅಂಗಲಾಚಿದ್ದಾಳೆ. ಈ ಮಾಹಿತಿ ತಿಳಿದ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ಆಗಮಿಸಿ ಧನಸಹಾಯ ಮಾಡಿದರು. ತನಿಖೆಗೆ ಬಂದ ಪೊಲೀಸ್ ಸಿಬ್ಬಂದಿಯೂ ನೆರವು ನೀಡಿದ್ದಾರೆ.
ಇದೇ ವೇಳೆ ಭಾರತ್ ರಾಷ್ಟ್ರ ಸಮಿತಿ ಮುಖಂಡ ಕೆ.ಟಿ.ರಾಮರಾವ್ ಅವರು ತಾನೂರ್ ಮಂಡಲದ ಬೆಲ್ ತರೋಡ ಗ್ರಾಮದ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿ, ಆದಷ್ಟು ಬೇಗ ಬಾಲಕಿಗೆ ನೆರವು ನೀಡುವುದಾಗಿ ಭರವಸೆ ನೀಡಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ