‘ಅಮ್ಮ ಮತ್ತು ಚಂದು ಒಡನಾಟ ಏನು ಅಂತ ನಮಗೆ ಗೊತ್ತು’: ಮಗ ಪ್ರಜ್ವಲ್​

| Updated By: ಮದನ್​ ಕುಮಾರ್​

Updated on: May 19, 2024 | 2:45 PM

ಕಿರುತೆರೆ ಕಲಾವಿದೆ ಪ್ರವಿತ್ರಾ ಜಯರಾಮ್​ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತರಾದರು. ನಂತರದ ಕೆಲವೇ ದಿನಗಳಲ್ಲಿ ಪವಿತ್ರಾ ಅವರ ಸ್ನೇಹಿತ ಚಂದು ಕೂಡ ಆತ್ಮಹತ್ಯೆ ಮಾಡಿಕೊಂಡು ನಿಧನರಾದರು. ಪವಿತ್ರಾ ಜಯರಾಮ್​ ಮತ್ತು ಚಂದು ಮದುವೆಯಾಗಲು ತೀರ್ಮಾನಿಸಿದ್ದರು ಎಂಬ ಗಾಸಿಪ್​ ಹಬ್ಬಿದೆ. ಆ ಕುರಿತು ಇದೇ ಮೊದಲ ಬಾರಿಗೆ ಪವಿತ್ರಾ ಅವರ ಮಗ ಪ್ರಜ್ವಲ್​ ಮಾತನಾಡಿದ್ದಾರೆ.

‘ತ್ರಿನಯನಿ’ ಧಾರಾವಾಹಿ ನಟಿ ಪ್ರವಿತ್ರಾ ಜಯರಾಮ್​ (Pavithra Jayaram) ಅವರು ಇತ್ತೀಚೆಗೆ ಕಾರು ಅಪಘಾತದಲ್ಲಿ ನಿಧನರಾದರು. ಅದಾಗಿ ಕೆಲವೇ ದಿನಗಳ ಕಳೆಯುವುದರೊಳಗೆ ಪವಿತ್ರಾ ಅವರ ಗೆಳೆಯ ಚಂದು ಅಲಿಯಾಸ್​ ಚಂದ್ರಕಾತ್​ ಆತ್ಮಹತ್ಯೆ (Chandu Suicide) ಮಾಡಿಕೊಂಡು ಕೊನೆಯುಸಿರು ಎಳೆದರು. ಚಂದು ಮತ್ತು ಪವಿತ್ರಾ ಮದುವೆ ಆಗಲು ನಿರ್ಧರಿಸಿದ್ದರು ಎಂಬ ಸುದ್ದಿ ಹರಿದಾಡಿದೆ. ಆ ಬಗ್ಗೆ ಇದೇ ಮೊದಲ ಬಾರಿಗೆ ಪವಿತ್ರಾ ಜಯರಾಮ್​ ಅವರ ಪುತ್ರ ಪ್ರಜ್ವಲ್​ ಪ್ರತಿಕ್ರಿಯೆ ನೀಡಿದ್ದಾರೆ. ‘ಚಿತ್ರರಂಗ ಹೇಗೆ ಅಂತ ನಿಮಗೂ ಗೊತ್ತು. ನಾನು ಇಂಡಸ್ಟ್ರಿಗೆ ಬಂದರೂ ಕೂಡ ಹಾಗೆಯೇ. ನನ್ನ ಜೊತೆ ಯಾರಾದರೂ ಇದ್ದರೆ ಮೊದಲು ಆ ರೀತಿಯ ಗಾಸಿಪ್ ಹುಟ್ಟಿಕೊಳ್ಳುತ್ತದೆ. ಅಮ್ಮ ಮತ್ತು ಚಂದು ಅವರು ಎಷ್ಟು ಒಳ್ಳೆಯ ಸ್ನೇಹಿತರು ಎಂಬುದು ನಮಗೆ ಮತ್ತು ಇಂಡಸ್ಟ್ರಿಯವರಿಗೆ ಗೊತ್ತು. ಅವರ ಒಡನಾಟ ಹೇಗಿತ್ತು ಅಂತ ನಾವು ನೋಡಿದ್ದೇವೆ. ಮದುವೆ ಆಗುವ ಪ್ಲ್ಯಾನ್​ ಇತ್ತು ಎಂಬುದನ್ನೆಲ್ಲ ನಾನು ಸಂದರ್ಶನದಲ್ಲಿ ನೋಡಿದೆ. ಆದರೆ ಅಷ್ಟೊಂದು ಮಾತುಕತೆ ಆಗಿರಲಿಲ್ಲ. ಅಷ್ಟೊಂದು ನಮಗೂ ಗೊತ್ತಿರಲಿಲ್ಲ’ ಎಂದು ಪ್ರಜ್ವಲ್​ ಹೇಳಿದ್ದಾರೆ. ಮಂಡ್ಯದಲ್ಲಿ ಪವಿತ್ರಾ ಜಯರಾಮ್​ ಅವರ ಅಂತ್ಯಕ್ರಿಯೆ ಮಾಡಲಾಗಿತ್ತು. ಆಗ ಚಂದು (Chandu) ಕೂಡ ಬಂದಿದ್ದರು. ಪವಿತ್ರಾ ಅಗಲಿಕೆಯಿಂದ ಮನನೊಂದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: May 19, 2024 11:22 AM