Loading video

ತನಿಖಾ ಏಜೆನ್ಸಿಗಳು ಆಡಳಿತ ಪಕ್ಷದ ಒತ್ತಡದಲ್ಲಿ ಕೆಲಸ ಮಾಡುತ್ತಿವೆ ಅಂತ ಜನರಲ್ಲಿ ಸಂಶಯ ಹುಟ್ಟಿದೆ: ಸಂತೋಷ ಹೆಗಡೆ

|

Updated on: Feb 05, 2025 | 6:12 PM

ಮುಡಾ ಪ್ರಕರಣದಲ್ಲಿ ಅರೋಪಗಳು ಎದುರಾದಾಗ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಿ ತನಿಖೆಯನ್ನು ಎದುರಿಸಬೇಕಿತ್ತೇ ಅಂತ ಕೇಳಿದ ಪ್ರಶ್ನೆಗೆ ಸಂತೋಷ ಹೆಗಡೆಯವರು, ಹಿಂದೆ ಅಂಥ ಪ್ರಸಂಗಗಳು ನಡೆದಿವೆ, ತಮಿಳುನಾಡುನಲ್ಲಿ ರೈಲು ದುರ್ಘಟನೆ ನಡೆದಾಗ ಆಗ ರೇಲ್ವೇ ಮಂತ್ರಿಯಾಗಿದ್ದ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಿದ್ದರು ಎಂದು ಹೇಳಿದರು.

ಹಾವೇರಿ: ರಾಜ್ಯದ ತನಿಖಾ ಏಜೆನ್ಸಿಗಳನ್ನು ಆಡಳಿತ ಪಕ್ಷ ತನ್ನ ಇಚ್ಛೆಗನುಸಾರ ನಡೆಸಿಕೊಳ್ಳುತ್ತದೆ, ಸರ್ಕಾರದ ಒತ್ತಡದಲ್ಲಿ ಸಂಸ್ಥೆಗಳು ಸೂಕ್ತವಾದ ವಿಚಾರಣೆ ನಡೆಸಲ್ಲ, ಅದೇ ರೀತಿಯಾಗಿ ಕೇಂದ್ರ ಸರ್ಕಾರದ ಅಧೀನದಲ್ಲಿರುವ ತನಿಖಾ ಸಂಸ್ಥೆಗಳು ಸ್ವತಂತ್ರವಾಗಿ ಮತ್ತು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುವುದು ಸಾಧ್ಯವಾಗುತ್ತಿಲ್ಲ ಎಂಬ ಆರೋಪಗಳಿರುವ ಕಾರಣ ಈ ಸಂಸ್ಥೆಗಳ ಮೇಲೆ ಜನರಿಗೆ ಸಂಶಯ ಹುಟ್ಟಿಕೊಂಡಿದೆ ಮತ್ತು ಇದು ಬಹಳ ಗಂಭೀರವಾದ ವಿಚಾರ ಎಂದು ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ಮತ್ತು ಮಾಜಿ ಲೋಕಾಯುಕ್ತ ಎನ್ ಸಂತೋಷ ಹೆಗಡೆ ಹೇಳಿದರು. ರಾಜಕೀಯಕ್ಕೆ ಸಂಬಂಧಪಟ್ಟ ತನಿಖೆಗಳನ್ನು ನಡೆಸಲು ಒಂದು ಸ್ವತಂತ್ರವಾದ ತನಿಖಾ ಸಂಸ್ಥೆಯನ್ನು ಸ್ಥಾಪಿಸುವೆಡೆ ಗಂಬೀರವಾದ ಚಿಂತನೆ ನಡೆಯಬೇಕು ಎಂದು ನಿವೃತ್ತ ನ್ಯಾಯಮೂರ್ತಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಹೈಕೋರ್ಟ್​​ನಲ್ಲಿ ನ್ಯಾಯ ಸಿಕ್ಕು ಮುಡಾ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸುವ ಭರವಸೆ ಇದೆ: ಸ್ನೇಹಮಯಿ ಕೃಷ್ಣ