ಮಳೆಯಿಂದ ಬೆಂಗಳೂರಲ್ಲಿ ಜನ ಸಾಯುತ್ತಿದ್ದರೆ ನಾಚಿಕೆಗೆಟ್ಟ ಸರ್ಕಾರ ಸಾಧನಾ ಸಮಾವೇಶ ಮಾಡುತ್ತಿದೆ: ಪ್ರಲ್ಹಾದ್ ಜೋಶಿ
ಇದೆಲ್ಲದರ ನಡುವೆ ರಾಹುಲ್ ಗಾಂಧಿ ಕರ್ನಾಟಕಕ್ಕೆ ಹೋಗಿ ಏನೇನೋ ಮಾತಾಡುತ್ತಾರೆ, ಗ್ಯಾರಂಟಿ ಯೋಜನೆಗಳಿಂದ ಸರ್ಕಾರವೇ ದಿವಾಳಿಯೇಳುವ ಸ್ಥಿತಿ ನಿರ್ಮಾಣವಾಯಿತು ಎಂದು ತೆಲಂಗಾಣದ ಮುಖ್ಯಮಂತ್ರಿ ಹೇಳಿದ್ದಾರೆ, ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷಗಿರಿಗೆ ಮತ್ತು ಮುಂದಿನ ಮುಖ್ಯಮಂತ್ರಿಯಾಗಲು ಗುಂಪುಗಾರಿಕೆ ನಡೆದಿದೆ ಎಂದು ಪ್ರಲ್ಹಾದ್ ಜೋಶಿ ಹೇಳಿದರು.
ದೆಹಲಿ, ಮೇ 20: ಬೆಂಗಳೂರಲ್ಲಿ ಭೀಕರ ಮಳೆಯಿಂದಾಗಿ ಮೂರು ಜನ ಸತ್ತಿದ್ದಾರೆ, ನಗರದ ರಸ್ತೆಗಳು ಹದಗೆಟ್ಟು ಹೋಗಿವೆ, ಮಳೆ ನೀರು ಮನೆಗಳಿಗೆ ನುಗ್ಗಿ ಜನ ರಾತ್ರಿಯಿಡೀ ನೀರು ಹೊರಹಾಕುವುದರಲ್ಲಿ ಕಳೆಯುತ್ತಿದ್ದಾರೆ, ಇದ್ಯಾವುದರ ಪರಿವೆ ಇಲ್ಲದೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೊಸಪೇಟೆಯಲ್ಲಿ ಸಾಧನಾ ಸಮಾವೇಶ ಆಚರಿಸುತ್ತಿದ್ದಾರೆ, ಮಾನ ಮರ್ಯದೇ ಇಲ್ಲದ ಇವರಿಗೆ ನಾಚಿಕೆಯಾಗಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ಬೆಂಗಳೂರಿನ ಅವಸ್ಥೆ ರಾಷ್ಟ್ರೀಯ ಚ್ಯಾನೆಲ್ ಗಳಲ್ಲಿ ಬಿತ್ತರಗೊಂಡು ಚರ್ಚೆಯಾಗುತ್ತಿದೆ, ಆದರೆ ಭ್ರಷ್ಟಾಚಾವನ್ನು ಮೈತುಂಬಾ ಹೊದ್ದುಕೊಂಡಿರುವ ಸರ್ಕಾರ ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಎಂಬ ದ್ಯೇಯವನ್ನು ಮೂಲಮಂತ್ರವಾಗಿಸಿಕೊಂಡು ಆಡಳಿತ ನಡೆಸುತ್ತಿದೆ, ಕಾರ್ಮಿಕ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿರುವುದು ಬೆಳಕಿಗೆ ಬಂದಿದೆ, ಭ್ರಷ್ಟಾಚಾರ ನಡೆಸಲು ಸಿದ್ದರಾಮಯ್ಯ ಎಲ್ಲರಿಗೂ ಫ್ರೀ ಹ್ಯಾಂಡ್ ನೀಡಿದ್ದಾರೆ ಎಂದು ಜೋಶಿ ಹೇಳಿದರು.
ಇದನ್ನೂ ಓದಿ: ಹುಬ್ಬಳ್ಳಿ ತಿರಂಗ ಯಾತ್ರೆಯಲ್ಲಿ ಡೊಳ್ಳು ಬಾರಿಸಿ ಸಂತಸ ಪ್ರದರ್ಶಿಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ