ಜನ ನಮ್ಮನ್ನು ಅಯ್ಕೆ ಮಾಡಿದ್ದು ಸರ್ಕಾರದ ಪರ ಜೈಕಾರ ಹಾಕಲು ಅಲ್ಲ: ಆರ್ ಅಶೋಕ, ವಿಪಕ್ಷ ನಾಯಕ

|

Updated on: Aug 22, 2024 | 3:34 PM

ಕುಮಾರಸ್ವಾಮಿ ಕುಟುಂಬದ ವಿರುದ್ಧ ಸಿದ್ದರಾಮಯ್ಯ ಸರ್ಕಾರ ಹಗೆ ಸಾಧಿಸುತ್ತಿದೆ, ಆ ದ್ವೇಷದಿಂದಾಗೇ ಹೆಚ್ ಡಿ ರೇವಣ್ಣ ಮತ್ತು ಅವರ ಇಬ್ಬರು ಮಕ್ಕಳನ್ನು ಜೈಲಿಗೆ ಹಾಕಲಾಗಿತ್ತು ಹಾಗೂ ಅವರ ಪತ್ನಿ ಭವಾನಿ ಅವರನ್ನೂ ಜೈಲಿಗೆ ಕಳಿಸುವ ಹುನ್ನಾರ ನಡೆದಿತ್ತು, ಅದರೆ ಅವರು ಸ್ವಲ್ಪದರಲ್ಲಿ ಪಾರಾದರು ಎಂದು ಅಶೋಕ ಹೇಳಿದರು.

ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತನ್ನಿಂದ ಪ್ರಮಾದವಾಗಿದ್ದು ಅರಿವಿಗೆ ಬಂದಿದೆ, ಅದನ್ನು ಒಪ್ಪಿಕೊಳ್ಳಲೆಂದೇ ಸಿಎಲ್ ಪಿ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಹೋಗುತ್ತಿದ್ದಾರೆ ಎಂದು ವಿರೋಧಪಕ್ಷದ ನಾಯಕ ಆರ್ ಅಶೋಕ ಹೇಳಿದರು. ನಗರದಲ್ಲಿಂದು ಬಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತಾಡಿದ ಅಶೋಕ, ಸಿದ್ದರಾಮಯ್ಯ ತನ್ನಿಂದೇನೂ ತಪ್ಪಾಗಿಲ್ಲ ಅಂತ ಜನರ ಮುಂದೆ ಪೋಸು ಬಿಗಿಯುತ್ತಿದ್ದಾರೆ, ಅದರೆ ಜನರಿಗೆ ಕಾಂಗ್ರೆಸ್ ಪಕ್ಷ ಒಂದು ಭ್ರಷ್ಟರ ಪಕ್ಷ ಅಂತ ಗೊತ್ತಾಗಿಬಿಟ್ಟಿದೆ, ರಾಜ್ಯದ ಆರೂವರೆ ಕೋಟಿ ಜನರಿಗೆ ಅದು ಮನವರಿಕೆಯಾಗಿದೆ ಎಂದು ಅಶೋಕ ಹೇಳಿದರು. ಸಿದ್ದರಾಮಯ್ಯ ಮತ್ತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ನಡುವೆ ಜೈಲಿಗೆ ಹಾಕುವ ವಿಷಯದ ಮೇಲೆ ನಡೆದ ಮಾತಿನ ಸರಣಿಗೆ ಪ್ರತಿಕ್ರಿಯೆ ನೀಡಿದ ಅಶೋಕ ಯಾರನ್ನು ಬೇಕಾದರೂ ಜೈಲಿಗೆ ಹಾಕಲು ಇದು ತೊಘಲಕ್ ದರ್ಬಾರ್ ಅಲ್ಲ, ಯಾರಿಗೆ ಜೈಲು ಯಾರಿಗೆ ಬೇಲು ಅಂತ ನಿರ್ಧರಿಸುವುದು ನಾಡಿನ ನ್ಯಾಯಾಂಗ ವ್ಯವಸ್ಥೆ ಎಂದರು. ಕುಮಾರಸ್ವಾಮಿಯವರಿಗೆ ಸಂಕಷ್ಟ ಎದುರಾದರೆ ಬಿಜೆಪಿ ಅವರರೊಂದಿಗೆ ನಿಲ್ಲುತ್ತದೆ, ಇದು ಎನ್ ಡಿಎ ಒಕ್ಕೂಟದ ಹೋರಾಟ, ವಿರೋಧ ಪಕ್ಷವಾಗಿ ಜನ ನಮ್ಮನ್ನು ಆರಿಸಿರೋದು ಸರ್ಕಾರಕ್ಕೆ ಜೈಕಾರ ಹಾಕಲು ಅಲ್ಲ, ಅದು ಮಾಡುವ ತಪ್ಪುಗಳನ್ನು ಜನರಿಗೆ ತಿಳಿಸಲು ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ‘ಯಾವ ನಾಲಗೆಯಲ್ಲಿ ನನ್ನ ರಾಜೀನಾಮೆ ಕೇಳುತ್ತಿದ್ದೀರಿ?, ಹಳೆಯದನ್ನೆಲ್ಲ ಒಮ್ಮೆ ನೆನಪಿಸಿಕೊಳ್ಳಿ’ -ಆರ್​ ಅಶೋಕ್​ಗೆ ಸಿದ್ದರಾಮಯ್ಯ ತಿರುಗೇಟು