India-Pakistan War Updates; ರಜೌರಿ ಸೆಕ್ಟರ್ ನಿವಾಸಿಗಳು ಸುರಕ್ಷಿತ ತಾಣಗಳೆಡೆಗೆ, ಊರು ಬಿಟ್ಟು ಹೋಗುವ ಜನ ಭಾವುಕ

Updated on: May 09, 2025 | 7:27 PM

ವಿಡಿಯೋದ ಆರಂಭದಲ್ಲಿ ದಂಪತಿ ತಮ್ಮ ಮಗುವನ್ನು ಎತ್ತಿಕೊಂಡು ಭಾರವಾದ ಹೆಜ್ಜೆಗಳನ್ನಿಡುತ್ತಾ ಹೋಗುತ್ತಿರುವುದನ್ನು ನೋಡಬಹುದು. ಒಬ್ಬ ಹಿರಿಯ ವ್ಯಕ್ತಿಯೂ ಅವರೊಂದಿಗಿದ್ದಾರೆ. ಇವರಿಗಾಗಿ ಆಯ್ಕೆ ಮಾಡಿರುವ ಸುರಕ್ಷಿತ ತಾಣ ಹತ್ತಿರದಲ್ಲೇ ಇರಬಹುದು. ಒಬ್ಬ ಹಿರಿಯ ಮಹಿಳೆ ಸಹ ತಮ್ಮ ಸ್ಥಿತಿಯನ್ನು ನೆನೆದು ಅಳುತ್ತಿದ್ದಾರೆ. ವಾಹನದಲ್ಲಿ ಕೂತಿರುವ ಜನರಲ್ಲಿ ಭಯ, ಭೀತಿ ಮತ್ತು ಆತಂಕ.

ಜಮ್ಮು ಮತ್ತು ಕಾಶ್ಮೀರ, ಮೇ 9: ರಜೌರಿ ಸೆಕ್ಟರ್ ನಲ್ಲಿ ಪಾಕಿಸ್ತಾನವು ಅಪ್ರಚೋದಿತ ದಾಳಿ ನಡೆಸುತ್ತಿರುವುದರಿಂದ ಆ ಭಾಗದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿದೆ ಮತ್ತು ನಾಗರಿಕರ ಸುರಕ್ಷತೆಗೆ ಅಪಾಯ ಎದುರಾಗಿದೆ. ಹಾಗಾಗೇ, ಅಲ್ಲಿನ ನಿವಾಸಿಗಳನ್ನು ಸುರಕ್ಷಿತವಾದ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಪ್ರದೇಶದ ಕೆಲ ಸ್ಥಳಗಳಲ್ಲಿ ಶಿಬಿರಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಸರ್ಕಾರವೇ ಊಟ-ತಿಂಡಿಯ ವ್ಯವಸ್ಥೆ ಮಾಡುತ್ತಿದೆ. ಹಿರಿಯ ಪುರಷರೊಬ್ಬರು ದಶಕಗಳಿಂದ ಬದುಕಿದ ಊರನ್ನು ಬಿಡಬೇಕಾದ ಸ್ಥಿತಿ ಎದುರಾಗಿದೆಯಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ. ಅವರನ್ನು ಕರೆದೊಯ್ಯಲು ಮೋಟಾರು ವಾಹನವೊಂದು ಬಂದಿದೆ.

ಇದನ್ನೂ ಓದಿ:  ಗಡಿಭಾಗದಲ್ಲಿ ಪಾಕಿಸ್ತಾನದಿಂದ ಅಪ್ರಚೋದಿತ ದಾಳಿ, ತಕ್ಕ ಉತ್ತರ ನೀಡಿದ ಯುದ್ಧ ಸನ್ನದ್ಧ ಭಾರತೀಯ ಸೇನೆ!

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ