AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ಯಾಸ್ ಟ್ರಬಲ್: ನಾಡಿನಿಂದ ಕಾಡಿಗೆ, ಅರಣ್ಯದಲ್ಲಿ ಸೌದೆಗಾಗಿ ಮುಗಿಬಿದ್ದ ಜನ

ಗ್ಯಾಸ್ ಟ್ರಬಲ್: ನಾಡಿನಿಂದ ಕಾಡಿಗೆ, ಅರಣ್ಯದಲ್ಲಿ ಸೌದೆಗಾಗಿ ಮುಗಿಬಿದ್ದ ಜನ

ಸೂರಜ್​, ಮಹಾವೀರ್​ ಉತ್ತರೆ
| Edited By: |

Updated on: Mar 31, 2026 | 9:15 PM

Share

ಗಲ್ಫ್​ ರಾಷ್ಟ್ರಗಳ ಕಾಳಗ ಕೊನೆ ಆಗುತ್ತಿಲ್ಲ. ಜನರ ಪರದಾಟ ಅಂತ್ಯವಾಗುತ್ತಿಲ್ಲ. ಗ್ಯಾಸ್​​ ಅಭಾವದಿಂದ ಹತ್ತಾರು ಸಮಸ್ಯೆ ಉದ್ಭವ ಆಗಿವೆ. ಗ್ಯಾಸ್ ಸಿಲಿಂಡರ್ ಸಿಗದಿದ್ದಕ್ಕೆ ಹಳ್ಳಿ ಕಡೆ ಜನರು ಸೌದೆ ಒಲೆ ಮೊರೆ ಹೋಗಿದ್ದು, ಸೌದೆಗಾಗಿ ಅರಣ್ಣದಲ್ಲಿ ಮುಗಿಬಿದ್ದಿದ್ದಾರೆ. ಹೌದು...ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಕೆಎಫ್​ಡಿಸಿ ಅರಣ್ಯ ಪ್ರದೇಶದಲ್ಲಿ ಜನರು ಸೌದೆಗಾಗಿ ಮುಗಿದ್ದಿದ್ದಾರೆ.

ಕಾರವಾರ, (ಮಾರ್ಚ್ 31): ಗಲ್ಫ್​ ರಾಷ್ಟ್ರಗಳ ಕಾಳಗ ಕೊನೆ ಆಗುತ್ತಿಲ್ಲ. ಜನರ ಪರದಾಟ ಅಂತ್ಯವಾಗುತ್ತಿಲ್ಲ. ಗ್ಯಾಸ್​​ ಅಭಾವದಿಂದ ಹತ್ತಾರು ಸಮಸ್ಯೆ ಉದ್ಭವ ಆಗಿವೆ. ಗ್ಯಾಸ್ ಸಿಲಿಂಡರ್ (lpg Gas cylinder) ಸಿಗದಿದ್ದಕ್ಕೆ ಹಳ್ಳಿ ಕಡೆ ಜನರು ಸೌದೆ ಒಲೆ ಮೊರೆ ಹೋಗಿದ್ದು, ಸೌದೆಗಾಗಿ (Wood) ಅರಣ್ಣದಲ್ಲಿ ಮುಗಿಬಿದ್ದಿದ್ದಾರೆ. ಹೌದು…ಉತ್ತರ ಕನ್ನಡ (Uttara Kananda) ಜಿಲ್ಲೆಯ ಮುಂಡಗೋಡಿನ ಕೆಎಫ್​ಡಿಸಿ ಅರಣ್ಯ ಪ್ರದೇಶದಲ್ಲಿ ಜನರು ಸೌದೆಗಾಗಿ ಮುಗಿದ್ದಿದ್ದಾರೆ.

ಪ್ರತಿ ವರ್ಷ ಅಕೇಶಿಯಾ ಮರಗಳ ಕಟಾವಿನ ಬಳಿಕ ಅರಣ್ಯ ಇಲಾಖೆ, ಸಣ್ಣಪುಟ್ಟ ಕಟ್ಟಿಗೆಗೆ ಬೆಂಕಿ ಹಾಕುತ್ತಿತ್ತು.ಆದ್ರೆ ಇದೀಗ ಗ್ಯಾಸ್ ಸಿಗದಿದ್ದಕ್ಕೆ ಸೌದೆಯನ್ನ ಕೊಂಡೊಯ್ಯಲು ಜನರಿಗೆ ಅನುಮತಿ ಕೊಟ್ಟಿದೆ. ಹೀಗಾಗಿ, ಜನರು ವಾಹನದ ಜತೆ ಅರಣ್ಯಕ್ಕೆ ಬಂದು ಕಟ್ಟಿಗೆ ತುಂಬಿಕೊಂಡು ಹೋಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us